ಸಾರಾಂಶ
ಯಾದಗಿರಿ : ಬಡವರಿಗೆ ಸರ್ಕಾರದಿಂದ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ವಿದೇಶಕ್ಕೆ ರಫ್ತು ಮಾಡಲು ಭಾರಿ ಪ್ರಮಾಣದಷ್ಟು ಅಕ್ಕಿ ಚೀಲಗಳನ್ನು ದಾಸ್ತಾನು ಮಾಡಿದ್ದ ಯಾದಗಿರಿ ಜಿಲ್ಲೆ ಗುರುಮಠಕಲ್‌ನ 2 ರೈಸ್‌ಮಿಲ್‌ಗಳನ್ನು ಜಪ್ತಿ ಮಾಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ರೈಸ್‌ಮಿಲ್‌ಗಳಲ್ಲಿ ಪತ್ತೆಯಾದ ಅನ್ನಭಾಗ್ಯ ಅಕ್ಕಿ ದಾಸ್ತಾನು ಸಂಗ್ರಹಕ್ಕೆ ಸಂಬಂಧಿಸಿದಂತೆ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ, ಶ್ರೀ ಲಕ್ಷ್ಮೀ ವೆಂಕಟೇಶ್ವರ ಹಾಗೂ ಶ್ರೀ ಲಕ್ಷ್ಮೀ ಬಾಲಾಜಿ ಇಂಡಸ್ಟ್ರೀಸ್ ಪಾಲುದಾರರು/ಮಾಲೀಕರಾದ ನರೇಂದ್ರ ರಾಠೋಡ್, ಅಯ್ಯಪ್ಪ ರಾಠೋಡ್, ಚಂದ್ರಿಕಾ ನೀಲಕಂಠ ಹಾಗೂ ಲಕ್ಷ್ಮೀಬಾಯಿ ರಾಠೋಡ್ ಅವರ ವಿರುದ್ಧ ದೂರು (ಅಪರಾಧ ಸಂಖ್ಯೆ 0169/2025) ದಾಖಲಾಗಿದೆ. ಈ ಎರಡೂ ರೈಸ್‌ಮಿಲ್‌ಗಳನ್ನು ಸೀಝ್ ಮಾಡಲಾಗಿದೆ.
ಆರೋಪಿ ನರೇಂದ್ರ ರಾಠೋಡ್ ಹಾಗೂ ಅಯ್ಯಪ್ಪ ರಾಠೋಡ್ ಅವರು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ತಂದೆ ಹಾಗೂ ಸಹೋದರಾಗಿದ್ದಾರೆ. ₹1.21 ಕೋಟಿ ಮೌಲ್ಯದ 3,985 ಕ್ವಿಂಟಾಲ್ ಅಕ್ಕಿ ದಾಸ್ತಾನು ಹಾಗೂ ₹45 ಲಕ್ಷ ಮೌಲ್ಯದ ಎರಡು ಲಾರಿಗಳನ್ನು ಜಪ್ತಿ ಮಾಡಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪಡಿತರ ವ್ಯವಸ್ಥೆ ಮೂಲಕ ವಿತರಣೆ ಇರುವ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಮಿಲ್ಲಲ್ಲಿ ಸಂಗ್ರಹಿಸಿದ್ದ ಆರೋಪಿಗಳು
ಈ ಅಕ್ಕಿಗೆ ಪಾಲಿಶ್ ಮಾಡಿ ಫ್ರಾನ್ಸ್, ಸಿಂಗಾಪುರ, ದುಬೈಗೆ ವಿಮಾನ, ಹಡಗಿನ ಮೂಲಕ ಸಾಗಿಸಿದ್ದ ಪ್ರಕರಣ
ಇತ್ತೀಚೆಗೆ ಮಿಲ್ ಮೇಲೆ ರೇಡ್ ಮಾಡಿದ್ದ ಆಹಾರ ಇಲಾಖೆ ಅಧಿಕಾರಿಗಳು. ಇದೀಗ ಎಣಿಕೆ ಬಳಿಕ ಮಿಲ್ ಜಪ್ತಿ