ಜಗಳೂರು ತಾಲೂಕಿನ ವಿದ್ಯುತ್ ಉಪ ಕೇಂದ್ರದಲ್ಲಿ ವಿದ್ಯುತ್ ಲೋಡ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ದಶಕಗಳಿಂದ ಇದ್ದ ಹಳೆಯ ಪರಿವರ್ತಕಗಳನ್ನು ತೆಗೆದು ಹೊಸ 20 ಎಂ.ವಿ.ಎ. ಸಾಮರ್ಥ್ಯದ ಪರಿವರ್ತಕಗಳ ಅಳವಡಿಸುವ ಕಾರ್ಯಕ್ಕೆ ಶೀಘ್ರವೇ ಚಾಲನೆ ದೊರೆಯಲಿದೆ. ಈ ಕಾಮಗಾರಿ ಅವಧಿಯಲ್ಲಿ ಸಾರ್ವಜನಿಕರು ಹಾಗೂ ರೈತರು ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕೆಂದು ಜಗಳೂರು ಬೆಸ್ಕಾಂ ಎಇಇ ಮಲ್ಲಿಕಾರ್ಜುನ್ ಮನವಿ ಮಾಡಿದ್ದಾರೆ.
- ವಿದ್ಯುತ್ ಲೋಡ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಕ್ರಮ: ಬೆಸ್ಕಾಂ ಎಇಇ ಮಲ್ಲಿಕಾರ್ಜುನ್ ಮಾಹಿತಿ
- - -ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ವಿದ್ಯುತ್ ಉಪ ಕೇಂದ್ರದಲ್ಲಿ ವಿದ್ಯುತ್ ಲೋಡ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ದಶಕಗಳಿಂದ ಇದ್ದ ಹಳೆಯ ಪರಿವರ್ತಕಗಳನ್ನು ತೆಗೆದು ಹೊಸ 20 ಎಂ.ವಿ.ಎ. ಸಾಮರ್ಥ್ಯದ ಪರಿವರ್ತಕಗಳ ಅಳವಡಿಸುವ ಕಾರ್ಯಕ್ಕೆ ಶೀಘ್ರವೇ ಚಾಲನೆ ದೊರೆಯಲಿದೆ. ಈ ಕಾಮಗಾರಿ ಅವಧಿಯಲ್ಲಿ ಸಾರ್ವಜನಿಕರು ಹಾಗೂ ರೈತರು ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕೆಂದು ಜಗಳೂರು ಬೆಸ್ಕಾಂ ಎಇಇ ಮಲ್ಲಿಕಾರ್ಜುನ್ ಮನವಿ ಮಾಡಿದ್ದಾರೆ.ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ನಡೆದ ರೈತ ಮುಖಂಡರು ಹಾಗೂ ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಗಳೂರು ತಾಲೂಕು ಉಪ ಕೇಂದ್ರದಲ್ಲಿ ಪ್ರಾರಂಭದಿಂದಲೂ 12.5 ಮೆಗಾ ವೋಲ್ಟ್ ಆಂಪಿಯರ್ (ಎಂವಿಎ) ಸಾಮರ್ಥ್ಯದ 2 ಹಳೆಯ ಪರಿವರ್ತಕಗಳು ಮಾತ್ರ ಇದ್ದವು. ಇದರಿಂದಾಗಿ ನಿರಂತರ ಓವರ್ ಲೋಡ್ ಉಂಟಾಗಿ ವಿದ್ಯುತ್ ಪೂರೈಕೆಯಲ್ಲಿ ಟ್ರಿಪ್ ಆಗುವ ಸಮಸ್ಯೆ ಎದುರಾಗುತ್ತಿತ್ತು. ಮೊದಲು ಈ ಯೋಜನೆ ಡಿಪಿಆರ್ ಹಾಗೂ ಟೆಂಡರ್ ಹಂತದಲ್ಲಿತ್ತು. ಶಾಸಕರ ಗಮನಕ್ಕೆ ತಂದ ತಕ್ಷಣವೇ ಅವರು ಸ್ಪಂದಿಸಿ, 20 ಎಂವಿಎ ಪರಿವರ್ತಕವನ್ನು ತರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸುಮಾರು 1.5 ತಿಂಗಳು ಅಂದರೆ ಆಗಸ್ಟ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆ ಬಂದಲ್ಲಿ ರೈತರ ಐಪಿ ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಲಾಗುವುದು. ಮಳೆ ಕೊರತೆಯಾದಲ್ಲಿ ದಿನಕ್ಕೆ 4 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು.ಹುಚ್ಚವನಹಳ್ಳಿ ಬಣದ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿ, ಹೊಸ ಪರಿವರ್ತಕದಿಂದ ಮುಂದಿನ ಬೇಸಿಗೆಯಲ್ಲಿ ವೋಲ್ಟೇಜ್ ಸಮಸ್ಯೆ ಬಾರದೇ ರೈತರಿಗೆ ಅನುಕೂಲವಾಗುತ್ತದೆ. ಕಾಮಗಾರಿಗೆ ಕೆಲವು ವಿರೋಧಗಳು ವ್ಯಕ್ತವಾದರೂ ರೈತರು ವಾಸ್ತವವನ್ನು ಅರ್ಥ ಮಾಡಿಕೊಂಡು ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು.
ರೈತ ಸಂಘ ತಾಲೂಕು ಅಧ್ಯಕ್ಷ ಚಿರಂಜೀವಿ ಮಾತನಾಡಿ 20 ಎಂವಿಎ ಪರಿವರ್ತಕ ಅಳವಡಿಸುತ್ತಿರುವುದು ಸಂತೋಷದ ವಿಷಯ. ಆದರೆ, ಕಾಮಗಾರಿ ಸಮಯದಲ್ಲಿ ರೈತರಿಗೆ ನೀಡುವ 4 ಗಂಟೆ ವಿದ್ಯುತ್ ಅನ್ನು ಪದೇಪದೇ ಕಟ್ ಮಾಡದೇ ಸತತವಾಗಿ ನೀಡಬೇಕು. 20 ಎಂವಿಎ ಪರಿವರ್ತಕ ಅಳವಡಿಸುತ್ತಿರುವುದು ಸಂತೋಷದ ವಿಷಯ ಎಂದರು.ಬೆಸ್ಕಾಂ ಎಇ ಶ್ರೀಧರ್ ಮಾತನಾಡಿ, ಈ ಪರಿವರ್ತಕ ಬದಲಾವಣೆ ತಾಲೂಕಿನ ವಿದ್ಯುತ್ ಕ್ಷೇತ್ರದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಎನ್‌ಜಿಒ ಪ್ರದೇಶಗಳಲ್ಲಿ ಯಾವುದೇ ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು. ಈ ಪರಿವರ್ತಕ ಬದಲಾವಣೆ ತಾಲೂಕಿನ ವಿದ್ಯುತ್ ಕ್ಷೇತ್ರದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಎನ್‌ಜಿಒ ಪ್ರದೇಶಗಳಲ್ಲಿ ಯಾವುದೇ ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ಕೆಪಿಟಿಸಿಎಲ್ ಎಇ ನಿಂಗಪ್ಪ ಮಾತನಾಡಿದರು. ರೈತ ಸಂಘದ ಮುಖಂಡರು, ಬೆಸ್ಕಾಂ ಸಿಬ್ಬಂದಿ ಉಪಸ್ಥಿತರಿದ್ದರು.- - -
-04ಜೆಜಿಎಲ್1:ಸಭೆಯಲ್ಲಿ ಬೆಸ್ಕಾಂ ಎಇಇ ಮಲ್ಲಿಕಾರ್ಜುನ್ ಮಾತನಾಡಿದರು.