ಸಾರಾಂಶ
ಕಮತಗಿ: ಜೀವಿಗಳ ಅಳಿವು ಹಾಗೂ ಮಾನವ ಸಂಕುಲದ ಬದುಕು ಪರಿಸರದ ಮೇಲೆ ಅವಲಂಬಿತವಾಗಿದೆ. ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವಿನೋದ ವಡವಡಗಿ ಹೇಳಿದರು.
ಕಮತಗಿ: ಜೀವಿಗಳ ಅಳಿವು ಹಾಗೂ ಮಾನವ ಸಂಕುಲದ ಬದುಕು ಪರಿಸರದ ಮೇಲೆ ಅವಲಂಬಿತವಾಗಿದೆ. ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವಿನೋದ ವಡವಡಗಿ ಹೇಳಿದರು.
ಪಟ್ಟಣದ ಗಿರಿಮಠದ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಟ್ಟು ಮಾತನಾಡಿದರು. ಪರಿಸರ ನಮ್ಮ ಸಂಪತ್ತು ಅದನ್ನು ರಕ್ಷಿಸಿಕೊಂಡು ಹೋಗಬೇಕು, ಸಕಾಲಕ್ಕೆ ಮಳೆ, ಬೆಳೆ, ನೀರಿನ ಅಭಾವ ಉಂಟಾಗದಿರಲು ಗಿಡಮರಗಳನ್ನು ಬೆಳೆಸಬೇಕು ಎಂದರು.ಶಿಕ್ಷಕಿ ಅಕ್ಷತಾ ತೋಟಗೇರ ಮಾತನಾಡಿ, ಉತ್ತಮ ಪರಿಸರದಿಂದ ಶುದ್ಧ ಗಾಳಿ ಸಿಗುತ್ತದೆ. ಆದ್ದರಿಂದ ಗಿಡಮರಗಳನ್ನು ನೆಡುವುದರ ಜೊತೆಗೆ ಅವುಗಳ ಪಾಲನೆ ಮಾಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖ್ಯಗುರು ಬಿ.ಎಸ್.ನಿಡಗುಂದಿ, ಸಹ ಶಿಕ್ಷಕರಾದ ಎಚ್.ಎಚ್.ಗುಳೇದ, ಎಸ್.ಎಸ್.ಗುತ್ತಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಈ ವೇಳೆ ವಿದ್ಯಾರ್ಥಿಗಳು ತಯಾರಿಸಿದ 200ಕ್ಕೂ ಅಧಿಕ ಬೀಜದುಂಡೆ ಹಾಗೂ ಸಸಿಗಳನ್ನು ಗಿರಿಮಠದ ಆವರಣದಲ್ಲಿ ನೆಡಲಾಯಿತು.