ಮಾಲೂರು ತಾಲೂಕಿನ ಮಂಜೂರಾಗಿರುವ 2000 ಕೋಟಿ ಅನುದಾನಗಳಿಂದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವುದು. ಹೊಸಕೋಟೆಯಿಂದ ಮಾಲೂರು ಮೂಲಕ ಸೀತಾನಾಯಕಹಳ್ಳಿವರೆಗೆ ನಾಲ್ಕು ಪಥದ ವೈಟ್‌ ಟಾಪಿಂಗ್‌ ರಸ್ತೆ ನಿರ್ಮಾಣವಾಗಲಿದ್ದು, ಪಟ್ಟಣದಲ್ಲಿ 3.5 ಕಿ.ಮೀ.ಉದ್ದದ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ನನ್ನ ಎರಡವರೇ ವರ್ಷದ ಅಧಿಕಾರದಲ್ಲಿ ಎರಡುಸಾವಿರ ಕೋಟಿ ಅನುದಾನವನ್ನು ತಾಲೂಕಿನ ಅಭಿವೃದ್ಧಿಗಾಗಿ ತಂದಿದ್ದು, ಮುಂದಿನ ಒಂದು ವರ್ಷದಲ್ಲಿ ಆದರ ಫಲವನ್ನು ಕಾಣಲಿದ್ದೀರಿ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ನಗರದ ದೊಡ್ಡಕೆರೆ ಅಚ್ಚುಕಟ್ಟಿನ ರೈತರು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, 45 ಕೋಟಿ ವೆಚ್ಚದಲ್ಲಿ ದೊಡ್ಡಕೆರೆ ಅಭಿವೃದ್ಧಿ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲೇ ಮಾದರಿಯಾಗಲಿದೆ. ನಗರದ ಪ್ರವೇಶದ್ವಾರದಲ್ಲೇ ಈ ಕೆರೆ ಇರುವುದರಿಂದ ನಗರದ ಸೌಂದರ್ಯ ಹೆಚ್ಚಾಗಲಿದೆ ಎಂದರು.ಅಕ್ರಮ ಮತ ಏಣಿಕೆ ಆರೋಪ

ಕಳೆದ ಬಾರಿ ಶಾಸಕನಾಗಿದ್ದಾಗ ಬಿಜೆಪಿ ಸರ್ಕಾರದಿಂದ ತೊಂದರೆ ಆಗಿದ್ದರೆ, ಈ ಬಾರಿ ಅಕ್ರಮ ಮತ ಏಣಿಕೆ ಆರೋಪ ಹೊರಿಸಿ ಎರಡವರೇ ವರ್ಷ ತೊಂದರೆ ಕೊಟ್ಟರು. ಆದರೆ ನ್ಯಾಯ ನನ್ನ ಕಡೆ ಇದ್ದುದರಿಂದ ಮರು ಮತ ಏಣಿಕೆಯಲ್ಲೂ ಹೆಚ್ಚುವರಿ 2 ಮತಗಳು ಬಂದವು. ಒಂದು ಚುನಾವಣೆಗೆ ಎರಡು ಬಾರಿ ಏಣಿಕೆ ನಡೆದಿರುವುದು ರಾಜ್ಯದಲ್ಲಿ ನನಗೆ ಮಾತ್ರ. ಶಾಸಕರ ಆಯ್ಕೆ ಅಸಿಂಧು ಎಂಬ ಅದೇಶಕ್ಕೆ ತಡೆ ತರುವ 15 ನಿಮಿಷ ಮಾತ್ರ ತಾವು ಮಾಜಿ ಶಾಸಕನಾಗಿಸಿದ್ದೇ ವಿರೋಧಿಗಳ ಎರಡವರೆ ವರ್ಷದ ಸಾಧನೆ ಎಂದು ಲೇವಡಿ ಮಾಡಿದರು.

ಈಗ ಮುಂದಿನ ಗುರಿ ತಾಲೂಕಿನ ತಂದಿರುವ 2,500 ಕೋಟಿ ಅನುದಾನಗಳಿಂದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವುದು. ಹೊಸಕೋಟೆಯಿಂದ ಮಾಲೂರು ಮೂಲಕ ಸೀತಾನಾಯಕಹಳ್ಳಿವರೆಗೆ ನಾಲ್ಕು ಪಥದ ವೈಟ್‌ ಟಾಪಿಂಗ್‌ ರಸ್ತೆ ನಿರ್ಮಾಣವಾಗಲಿದ್ದು, ಪಟ್ಟಣದಲ್ಲಿ 3.5 ಕಿ.ಮೀ.ಉದ್ದದ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಿದೆ ಎಂದರು.

₹45 ಲಕ್ಷ ವೆಚ್ಚದಲ್ಲಿ ಆಸ್ಪತ್ರೆ

45 ಲಕ್ಷದಲ್ಲಿ ನೂತನ ಆಸ್ಪತ್ರೆ, 42 ಕೋಟಿ ರೂ.ಗಳಲ್ಲಿ ಪಟ್ಟಣದ ಮನೆ ಮನೆಗೆ ಮೀಟರ್‌ವುಳ್ಳ ನೀರಿನ ಸರಬರಾಜು ವ್ಯವಸ್ಥೆ ಮಾಡಲಾಗುವುದು. ನೂರು ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ನಗರದಲ್ಲಿ ನಡೆಯಲಿದ್ದು, ಈ ಯೋಜನೆಯ ಡಿಪಿಆರ್‌ 20 ಲಕ್ಷ ರು.ಗಳನ್ನು ಈಗಾಗಲೇ ನಗರಸಭೆ ಭರಿಸಿದೆ. ಇನ್ನಾರು ತಿಂಗಳಲ್ಲಿ ನಗರದ ಎಲ್ಲ ರಸ್ತೆಗಳು ಡಾಂಬರೀಕರಣಗೊಳ್ಳಲಿವೆ ಎಂದರು.

ಸುಮಾರು 21 ಕೋಟಿ ವೆಚ್ಚದ ನೂತನ ಬಸ್‌ ನಿಲ್ದಾಣ ಸಹ ಶೀಘ್ರವಾಗಿ ಪೂರ್ಣಗೊಳ್ಳಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಟ್ಟಣದ ಮತದಾರರು ಕೈ ಕೊಟ್ಟಿದ್ದು, ಮುಂಬರಲಿರುವ ನಗರಸಭೆ ಚುನಾವಣೆಯಲ್ಲಾದರೂ ನನ್ನ ಕೈ ಬಲಪಡಿಸಿರಿ ಎಂದು ಮನವಿ ಮಾಡಿದರು.

ಮಾರಿಕಾಂಬ ದೇವಾಲಯ ಅಧ್ಯಕ್ಷ ಪಿ.ವೆಂಕಟೇಶ್‌ ಮಾತನಾಡಿದರು. ನಗರಸಭೆ ಕಮೀಷನರ್‌ ಪ್ರದೀಪ್‌ ,ವಿವಿಧ ಇಲಾಖೆಯಗಳ ಅಭಿಯಂತರುಗಳಾದ ಹರೀಶ್‌,ವೆಂಕಟರಾಜು,ಪೂರ್ಣಿಮಾ, ಅಮೃತ ಯೋಜನೆಯ ಶಿವಶಂಕರ್‌, ಶ್ರೀಕಾಂತ್‌,ಕೃಷ್ಣಪ್ಪ, ಬೆಸ್ಕಂ ಎ.ಇ.ಇ.ಪಾಷ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕಿಟ್ಟಿ, ರಾಮೂರ್ತಿ, ಆನೇಪುರ ಹನುಮಂತಪ್ಪ ಇದ್ದರು.