ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಭಾರತೀಯ ನ್ಯಾಯ ಸಂಹಿತೆ-2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ-2023 ಅಂಗೀಕಾರವು ನಮ್ಮಇತಿಹಾಸದಲ್ಲಿ ಒಂದು ಬಹುದೊಡ್ಡ ಬದಲಾವಣೆಯ ಕ್ಷಣವಾಗಿದೆ ಎಂದು ಚಿಕ್ಕೋಡಿ ಉಪಪೊಲೀಸ್ ವರಿಷ್ಠಾಧಿಕಾರಿ ಗೋಪಾಲಕೃಷ್ಣ ಗೌಡರ ಹೇಳಿದರು.ಪಟ್ಟಣದ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023, ಭಾರತೀಯ ಸಾಕ್ಷಿ ಅಧಿನಿಯಮ 2023 ಹೊಸ ಪ್ರಮುಖ ಕಾಯಿದೆಗಳ ಕುರಿತು ಪೊಲೀಸ್ ಸಿಬ್ಬಂದಿಯರಿಗಾಗಿ ಆಯೋಜಿಸಿದ ಎರಡು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಸೇವೆ ಮತ್ತು ಕಲ್ಯಾಣ ಕೇಂದ್ರಿತ ಕಾನೂನುಗಳೊಂದಿಗೆ ಹೊಸಯುಗ ಪ್ರಾರಂಭವಾಗಿದೆ ಎಂದರು.
ದೇಶದಇತಿಹಾಸದಲ್ಲಿ ಐತಿಹಾಸಿಕ (ಬಹುದೊಡ್ಡ ಬದಲಾವಣೆ) ಕ್ಷಣ ಎಂದು ಕರೆದಿದ್ದಾರೆ. ಈ ಮಸೂದೆಗಳು ಸಮಾಜದ ಬಡವರು, ನಿರ್ಲಕ್ಷಿತರು ಮತ್ತು ದುರ್ಬಲ ವರ್ಗಗಳಿಗೆ ಹೆಚ್ಚಿನ ರಕ್ಷಣೆ ಖಾತ್ರಿ ಪಡಿಸುತ್ತವೆ. ಸಂಘಟಿತ ಅಪರಾಧ, ಭಯೋತ್ಪಾದನೆ ಮತ್ತು ಇತರ ಅಪರಾಧಗಳ ನಿಯಂತ್ರಣಕ್ಕೆಅತಿಥಿಗಳಾಗಿ ಸಿಪಿಐ ಎನ್.ಸಿ.ಕಾಡದೇವರ, ಪಬ್ಲಿಕ್ ಪ್ರಾಸಿಕ್ಯೂಟರ್, ವೈ.ಜಿ.ತುಂಗಳ, ಮೊದಲನೇ ಅಧಿವೇಶನದಲ್ಲಿ ಮಹೇಶ, ಸಿಬಿಐ ಬೆಂಗಳೂರು ಇವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಪರಿಚಯಿಸಿ ಬದಲಾವಣೆಗಳ ಅವಲೋಕಿಸಿದರು. ಎರಡನೇ ಅಧಿವೇಶನದಲ್ಲಿ ಸಚಿನ ದಾಸರೆಡ್ಡಿ , ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಚಿಕ್ಕೋಡಿ ಅವರು ಭಾರತೀಯ ಸಾಕ್ಷ್ಯಅಧಿನಿಯಮ 2023ರ ಬಗ್ಗೆ ತಿಳಿಸಿಕೊಟ್ಟರು. ಎರಡನೇ ದಿನದ ಮೊದಲನೆಯ ಅಧಿವೇಶನದ ಸಂಪನ್ಮೂಲ ವ್ಯಕ್ತಿಯಾದ ಡಾ.ಎಸ್.ಜಿ.ಗೌಡಪ್ಪನವರ, ಅಸೋಸಿಯೇಟ್ ಪ್ರೊಫೆಸರ್, ಕೆಎಲ್‌ಇ ಸಂಸ್ಥೆಯ, ಕಾನೂನು ಮಹಾವಿದ್ಯಾಲಯ ಬೆಂಗಳೂರು ಅವರು ಭಾರತೀಯ ನ್ಯಾಯ ಸಂಹಿತೆಯಲ್ಲಿ ಹೊಸ ಅಪರಾಧಗಳು ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ-2023ರ ಬಗ್ಗೆ ಚರ್ಚಿಸಿದರು. ಚಿಕ್ಕೋಡಿ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದುಂಡಪ್ಪ ಸೊಲಾಪುರೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ದೀಪಾಲಿ ಪಾಟೀಲ, ಎಸ್.ಬಿ.ನಾಗರಾಳೆ, ಪಿ.ಸಿ.ಚವ್ಹಾಣ, ಡಿ.ಎಸ್.ರಾವತೆ, ಎಂ.ಎಚ್.ನದಾಫ, ಪಿ.ಎಂ.ಕಮತೆ, ಎಸ್.ಡಿ.ಶಿರಹಟ್ಟಿ, ಕೆ.ಎಲ್.ಕಾಂಬಳೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜನಾಧಿಕಾರಿ ವಿ.ಎಸ್.ಬಿಳಗಿ ಸ್ವಾಗತಿಸಿದರು. ಮಾನಸಿ ಬಾವಡೇಕರ ಮತ್ತು ಶ್ರದ್ಧಾ ಕೆಂಪರಾಣೆ ನಿರೂಪಿಸಿದರು. ಎಸ್.ಡಿ.ಖಾಜಿ ವಂದಿಸಿದರು.