21ರಿಂದ 2 ನೇ ಹಂತದ ಸಂವಿಧಾನ ಜಾಗೃತಿ ಜಾಥಾ: ಡಾ.ರಾಮಚಂದ್ರ ಹೊಸಮನಿ

| Published : Feb 18 2024, 01:35 AM IST

21ರಿಂದ 2 ನೇ ಹಂತದ ಸಂವಿಧಾನ ಜಾಗೃತಿ ಜಾಥಾ: ಡಾ.ರಾಮಚಂದ್ರ ಹೊಸಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಫೆ. 21ರಂದು ಹೆಬಸೂರು, ಬ್ಯಾಹಟ್ಟಿ, ಸುಳ್ಳ, ಫೆ. 22ರಂದು ಕುಸುಗಲ್, ಕಿರೇಸೂರ, ಇಂಗಳಹಳ್ಳಿ, ಬಂಡಿವಾಡ, ಉಮ್ಮಚಗಿ ಮತ್ತು ಫೆ. 23ರಂದು ಕೋಳಿವಾಡ, ಶಿರಗುಪ್ಪಿ, ಮಂಟೂರ, ಹಳ್ಯಾಳ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ ಮಾಡಲಿದೆ.

ಹುಬ್ಬಳ್ಳಿ: ಗ್ರಾಮೀಣ ತಾಲೂಕಿನಲ್ಲಿ ಫೆ. 8ರಿಂದ 11ರ ವರೆಗೆ ಮೊದಲ ಹಂತದಲ್ಲಿ ಸಂವಿಧಾನ ಜಾಗೃತಿ ಜಾಥಾ ಯಶಸ್ವಿಯಾಗಿ ನಡೆದಿದೆ. ಎರಡನೇ ಹಂತದ ಜಾಥಾ ಫೆ. 21ರಿಂದ 23ರ ವರೆಗೆ ನಡೆಯಲಿದೆ. ಸಂವಿಧಾನ ಜಾಗೃತಿ ಜಾಥಾವನ್ನು ಯಶಸ್ವಿಗೊಳಿಸಬೇಕು ಎಂದು ಹುಬ್ಬಳ್ಳಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಮಚಂದ್ರ ಹೊಸಮನಿ ಹೇಳಿದರು.

ತಾಪಂ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಫೆ. 21ರಂದು ಹೆಬಸೂರು, ಬ್ಯಾಹಟ್ಟಿ, ಸುಳ್ಳ, ಫೆ. 22ರಂದು ಕುಸುಗಲ್, ಕಿರೇಸೂರ, ಇಂಗಳಹಳ್ಳಿ, ಬಂಡಿವಾಡ, ಉಮ್ಮಚಗಿ ಮತ್ತು ಫೆ. 23ರಂದು ಕೋಳಿವಾಡ, ಶಿರಗುಪ್ಪಿ, ಮಂಟೂರ, ಹಳ್ಯಾಳ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ ಮಾಡಲಿದೆ. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು‌. ಸಂವಿಧಾನದ ಮಹತ್ವವನ್ನು ಎಲ್ಲರಿಗೂ ತಿಳಿಯಪಡಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಪ್ರಹ್ಲಾದ್ ಗೆಜ್ಜಿ ಮಾತನಾಡಿ, ಸಂವಿಧಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದೆ. ಸಂವಿಧಾನ, ಡಾ. ಬಿ.ಆರ್. ಅಂಬೇಡ್ಕರ್ ಜೀವನ ಹಾಗೂ ವಿಚಾರಧಾರೆಗಳು, ವಿಶ್ವಗುರು ಬಸವಣ್ಣ ಅವರ ವಚನಗಳ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ. ಸಂವಿಧಾನದಿಂದ ಇಡೀ ದೇಶ ಪ್ರಪಂಚದಲ್ಲಿ ಗುರುತಿಸಿಕೊಂಡಿದೆ. ಸಂವಿಧಾನಕ್ಕೆ ಗೌರವ ತರುವ ನಿಟ್ಟಿನಲ್ಲಿ ನಾವೆಲ್ಲಾ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಜಾಥಾವನ್ನು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿ ನಡೆಸಲು ಎಲ್ಲರೂ ತಮ್ಮದೇ ಪಾತ್ರವನ್ನು ನಿರ್ವಹಿಸಬೇಕಾಗಿದೆ. ತಮಗೆ ವಹಿಸಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಪ್ರಾಮಾಣಿಕತೆಯಿಂದ ಮಾಡಬೇಕು. ಸ್ಥಳೀಯ ಕಲಾ ತಂಡಗಳು, ಕೋಲಾಟ ತಂಡಗಳು, ಹೆಜ್ಜೆ ಮೇಳ, ಸೈಕಲ್, ಬೈಕ್ ರ್‍ಯಾಲಿ, ಎತ್ತಿನಬಂಡಿ ರ್‍ಯಾಲಿ ಮೆರವಣಿಗೆಯಲ್ಲಿ ಭಾಗಿಯಾಗುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಸಭೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸಿ.ಆರ್. ಅಂಬಿಗೇರ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ್ರ, ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ವಿಸ್ತಣಾಧಿಕಾರಿ ಸುರೇಶ ಗುರಣ್ಣವರ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಚರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಶಾಲೆಗಳ ಮುಖ್ಯ ಶಿಕ್ಷಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.

17ಎಚ್‌ಯುಬಿ6ಪೂರ್ವಭಾವಿ ಸಭೆಯಲ್ಲಿ ರಾಮಚಂದ್ರ ಹೊಸಮನಿ ಮಾತನಾಡಿದರು.