ದೇಶಭಕ್ತಿ ಪುಸ್ತಕ ಪ್ರಕಟಿಸಿದರೇ ₹25 ಸಾವಿರ ಸಹಾಯಧನ

| Published : Aug 01 2025, 02:15 AM IST

ದೇಶಭಕ್ತಿ ಪುಸ್ತಕ ಪ್ರಕಟಿಸಿದರೇ ₹25 ಸಾವಿರ ಸಹಾಯಧನ
Share this Article
  • FB
  • TW
  • Linkdin
  • Email

ಸಾರಾಂಶ

ಪಠ್ಯಪುಸ್ತಕಗಳ ಅಧ್ಯಯನದ ಜೊತೆ ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಜಿ ಸೈನಿಕರು ದೇಶದ ವೀರರ ಮತ್ತು ದೇಶಭಕ್ತಿ ಮೂಡಿಸುವ ಪುಸ್ತಕ ಪ್ರಕಟಿಸಿದರೇ ಈರಮ್ಮ ಯಾದವಾಡ ಟ್ರಸ್ಟ್‌ದಿಂದ ₹25 ಸಾವಿರ ಸಹಾಯಧನ ನೀಡುವೆ ಎಂದು ಶ್ರೀಧನಲಕ್ಷ್ಮೀ ಶುಗರ್ ಅಧ್ಯಕ್ಷ ಮಲ್ಲಣ್ಣ ಯಾದವಾಡ ಘೋಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಪಠ್ಯಪುಸ್ತಕಗಳ ಅಧ್ಯಯನದ ಜೊತೆ ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಜಿ ಸೈನಿಕರು ದೇಶದ ವೀರರ ಮತ್ತು ದೇಶಭಕ್ತಿ ಮೂಡಿಸುವ ಪುಸ್ತಕ ಪ್ರಕಟಿಸಿದರೇ ಈರಮ್ಮ ಯಾದವಾಡ ಟ್ರಸ್ಟ್‌ದಿಂದ ₹25 ಸಾವಿರ ಸಹಾಯಧನ ನೀಡುವೆ ಎಂದು ಶ್ರೀಧನಲಕ್ಷ್ಮೀ ಶುಗರ್ ಅಧ್ಯಕ್ಷ ಮಲ್ಲಣ್ಣ ಯಾದವಾಡ ಘೋಷಣೆ ಮಾಡಿದರು.

ಪಟ್ಟಣದ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ್ ಸಂಘದ ತಾಲೂಕು ಘಟಕ ಗುರುವಾರ ಆಯೋಜಿಸಿದ್ದ 26ನೇ ಕಾರ್ಗಿಲ್ ವಿಜಯ ದಿವಸ್ ಮತ್ತು ಆಪರೇಶನ್ ಸಿಂದೂರ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಬಾವಿ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ದೇಶಭಕ್ತಿ, ಸೈನ್ಯ, ವೀರರ ಕುರಿತು ಜಾಗೃತಿ ಮೂಡಿಸಲು ಪ್ರತಿಶಾಲೆಗಳಿಗೆ ಮಾಜಿ ಸೈನಿಕರು ಭೇಟಿ ನೀಡುವ ಮೂಲಕ ದೇಶ ಸೇವೆ ಮಾಡಲು ಪ್ರೇರಣೆ ನೀಡಬೇಕು ಎಂದರು.ಬಿಜೆಪಿ ಮಂಡಳ ಅಧ್ಯಕ್ಷ ಡಾ.ಕೆ.ವಿ.ಪಾಟೀಲ ಮಾತನಾಡಿ, ಗಡಿಯಲ್ಲಿ ಯೋಧರು ದೇಶದ ರಕ್ಷಣೆ ಮಾಡುತ್ತಿದ್ದಾರೆ. ಅವರಿಗೆ ನಾವೆಲ್ಲ ಋಣಿಯಾಗಿರಬೇಕು ಮತ್ತು ಯೋಧರಿಗೆ ಗೌರವ ಕೊಡುವ ಅಗತ್ಯವಿದೆ ಎಂದರು.ಶಿವಮೂರ್ತೇಶ್ವರ ಮಠದ ಶಾಂತವೀರಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಶೇಷಪ್ಪ ಪೋತರಡ್ಡಿ ವಹಿಸಿದ್ದರು. ಸಭೆಯಲ್ಲಿ ಕಾರ್ಗಿಲ್ ಯುದ್ಧ ಮತ್ತು 1971ರಲ್ಲಿ ನಡೆದ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಮಾಜಿ ಸೈನಿಕರು, ಎನ್‌ಸಿಸಿ ಕೆಡೆಟ್, ಶಾಲಾ ವಿದ್ಯಾರ್ಥಿಗಳಿಂದ ಮಿನಿವಿಧಾನಸೌಧದ ಆವರಣದಿಂದ ಬೃಹತ್ ಪಥಸಂಚಲನ ಆರಂಭವಾಗಿ ಅಂಬೇಡ್ಕರ್‌ ಮಾರ್ಗ, ಜುನಿಪೇಟ್, ಹುತಾತ್ಮ ವೃತ್ತ, ಬಸವ ಮಾರ್ಗವಾಗಿ ಸಂಗೋಳ್ಳಿ ರಾಯಣ್ಣ ವೃತ್ತದ ಮೂಲಕ ಕಾರ್ಯಕ್ರಮದ ಸ್ಥಳದದವರೆಗೆ ನಡೆಯಿತು. ಸಮಾರಂಭದಲ್ಲಿ ಮಾಜಿ ಸೈನಿಕರ ಸಂಘದ ಜಿಲ್ಲಾ ಅಧ್ಯಕ್ಷ ಬಸಪ್ಪ ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ, ನಿವೃತ್ತ ಪ್ರಾಚಾರ್ಯ ಲಕ್ಷ್ಮಣ ಕೊಳಚಿ ಮಾತನಾಡಿದರು. ಮಾಜಿ ಸೈನಿಕರ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಗಂಗಾ ಉಣ್ಣಿ, ವಿ.ಎನ್.ಗೋಡಖಿಂಡಿ ಸೇರಿದಂತೆ ಹಲವರಿದ್ದರು. ಪವನ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು. ಸೋಮು ಪಮ್ಮಾರ ಸ್ವಾಗತಿಸಿದರು.

ವಿದ್ಯಾರ್ಥಿಗಳಿಗೆ ಮತ್ತು ಯುವಕರಲ್ಲಿ ದೇಶಭಕ್ತಿಯ ಪಾಠಗಳನ್ನು ಮಾಜಿ ಸೈನಿಕರಿಂದ ಹೇಳಿಸಿದರೇ ಪ್ರಭಾವ ಬೀರುತ್ತದೆ. ಸೈನಿಕರ ತ್ಯಾಗ ಬಲಿದಾನದಿಂದ ದೇಶ ಸುರಕ್ಷಿತವಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ವಿಶ್ವಶಕ್ತಿಯಾಗಲಿದೆ.

-ಮಲ್ಲಣ್ಣ ಯಾದವಾಡ,
ಶ್ರೀಧನಲಕ್ಷ್ಮೀ ಶುಗರ್ ಅಧ್ಯಕ್ಷರು.