ದೊಡ್ಡಕೆರೆ ಅಭಿವೃದ್ಧಿಗೆ ₹25 ಕೋಟಿ

| Published : Jul 31 2024, 01:07 AM IST

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಮಂಜೂರು ಮಾಡಿದೆ. ೨,೨೦೦ ಕೋಟಿ ವೆಚ್ಚದಲ್ಲಿ ದೇವನಹಳ್ಳಿಯಿಂದ ವೇಮಗಲ್, ನರಸಾಪುರ, ಮಾಲೂರು, ಸಂಪಂಗೆರೆ ಗಡಿ ಅಲ್ಲಿಂದ ಹೊಸಕೋಟೆಯವರೆಗೂ ೪ ಪಥದ ರಸ್ತೆಗೆ ಮಂಜೂರಾತಿ ನೀಡಿದೆ.

ಕನ್ನಡಪ್ರಭ ವಾರ್ತೆ ಮಾಲೂರುಪಟ್ಟಣದ ದೊಡ್ಡ ಕೆರೆಯನ್ನು ೨೫ ಕೋಟಿ ರು.ಗಳ ವೆಚ್ಚದಲ್ಲಿ ವಾಕಿಂಗ್ ಟ್ರ್ಯಾಕ್, ಉದ್ಯಾನವನ, ಐಲ್ಯಾಂಡ್ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಯೋಜನಾ ಪ್ರಾಧಿಕಾರದ ಕಚೇರಿಯ ಸಭಾಂಗಣದಲ್ಲಿ ಯೋಜನಾ ಪ್ರಾಧಿಕಾರದ ಸರ್ವ ಸದಸ್ಯರ ಸಭೆಯಲ್ಲಿ ೨೫ ಕೋಟಿ ವೆಚ್ಚದಲ್ಲಿ ಅಭಿವೃದ್ದಿಯಾಗುತ್ತಿರುವ ದೊಡ್ಡ ಕೆರೆಯ ಪ್ರಗತಿ ಪರಿಶೀಲನೆಯ ನಂತರ ಮಾತನಾಡಿ, ತಾವು ಮೊದಲ ಬಾರಿಗೆ ಶಾಸಕನಾದ ಅವಧಿಯ ಹಿಂದಿನ ಬಿಜೆಪಿ ಸರಕಾರ ತಾಲೂಕಿನಲ್ಲಿ ಯಾವುದೇ ಒಂದು ಶ್ವಾಶತವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುದಾನ ನೀಡಲಿಲ್ಲ ಎಂದು ಆರೋಪಿಸಿದರು. ಚತುಷ್ಪಥ ರಸ್ತೆ ನಿರ್ಮಾಣ

ಆದರೆ, ೨ನೇ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದು, ಅಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಮಂಜೂರು ಮಾಡಿದೆ. ೨,೨೦೦ ಕೋಟಿ ವೆಚ್ಚದಲ್ಲಿ ದೇವನಹಳ್ಳಿಯಿಂದ ವೇಮಗಲ್, ನರಸಾಪುರ, ಮಾಲೂರು, ಸಂಪಂಗೆರೆ ಗಡಿ ಅಲ್ಲಿಂದ ಹೊಸಕೋಟೆಯವರೆಗೂ ೪ ಪಥದ ರಸ್ತೆಗೆ ಮಂಜೂರಾತಿ ನೀಡಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಗುಣಮಟ್ಟ ಕಾಪಾಡಲು ಸೂಚನೆ

ಇನ್ನೂ ೧೦ ಕೋಟಿ ಅನುದಾನ ಬಂದಿದೆ. ಅಲ್ಲದೆ, ಸರಕಾರ ೪ ಕೋಟಿ ಮಂಜೂರು ಮಾಡಿದೆ. ಈ ಅನುದಾನದಲ್ಲಿ ಕೆರೆಯನ್ನು ಸುಂದರವಾಗಿ ವಿನ್ಯಾಸಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ಮಿಸಲು ಹೆಚ್ಚಿನ ಆಧ್ಯತೆ ನೀಡಬೇಕು ಎಂದರು.

ಸಣ್ಣ ನೀರಾವರಿ ಇಲಾಖೆಯ ಇಂಜಿನೀಯರ್ ಹರಿಕೃಷ್ಣ ದೊಡ್ಡಕೆರೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಪ್ರದೀಪ್, ಯೋಜನಾ ಪ್ರಾಧಿಕಾರದ ಕಾರ್‍ಯದರ್ಶಿ ಕೃಷ್ಣಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ನಯಿಮ್, ಸದಸ್ಯರಾದ ಇಂತಿಯಾಜ್, ವೆಂಕಟೇಶ್(ಬುಲೈಟ್), ಎ.ರಾಜಪ್ಪ, ಮುರಳಿಧರ್, ಮಂಜುನಾಥರೆಡ್ಡಿ, ನಲ್ಲಾಂಡಹಳ್ಳಿ ನಾಗರಾಜ್, ಚಿರಂಜೀವಿ, ದರಕಾಸ್ತು ಸಮಿತಿ ಸದಸ್ಯ ನಾಗಾಪುರ ನವೀನ್, ಬೆಸ್ಕಾಂ ಎಇಇ ಅನ್ವರ್ ಪಾಷ ಇದ್ದರು.