ನೂತನ ವರ್ಷದ ಆರಂಭದಲ್ಲಿಯೇ ಹಳಿಯಾಳದ ಕುಸ್ತಿ ಕ್ರೀಡಾ ನಿಲಯದ ಕುಸ್ತಿ ಪಟುಗಳು ಮಹತ್ತರ ಸಾಧನೆ ಮಾಡಿದ್ದಾರೆ.

ರಾಜ್ಯಮಟ್ಟದ ಬೀಚ್ ಕುಸ್ತಿ ಪಂದ್ಯಾವಳಿ

ಕನ್ನಡಪ್ರಭ ವಾರ್ತೆ ಹಳಿಯಾಳ

ನೂತನ ವರ್ಷದ ಆರಂಭದಲ್ಲಿಯೇ ಹಳಿಯಾಳದ ಕುಸ್ತಿ ಕ್ರೀಡಾ ನಿಲಯದ ಕುಸ್ತಿ ಪಟುಗಳು ಮಹತ್ತರ ಸಾಧನೆ ಮಾಡಿದ್ದಾರೆ. ಮಂಗಳೂರಿನಲ್ಲಿ ಮುಕ್ತಾಯಗೊಂಡ ರಾಜ್ಯಮಟ್ಟದ ಎರಡು ದಿನಗಳ ಬೀಚ್ ಕುಸ್ತಿ ಪಂದ್ಯಾವಳಿಯಲ್ಲಿ ಹಳಿಯಾಳ ಕುಸ್ತಿ ಕ್ರೀಡಾ ವಸತಿ ನಿಲಯದ ಕುಸ್ತಿ ಪಟುಗಳು ಒಟ್ಟು 25 ಪದಕ ಬಾಚಿಕೊಂಡಿದ್ದು, ಮಹಿಳೆಯರ ವಿಭಾಗವು ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.

ಮಹಿಳೆಯರ ವಿಭಾಗದಲ್ಲಿ 10 ಚಿನ್ನ, 5 ಬೆಳ್ಳಿ, 3 ಕಂಚು ಹಾಗೂ ಪುರುಷರ ವಿಭಾಗದಲ್ಲಿ 1 ಚಿನ್ನ, 1 ಬೆಳ್ಳಿ ಹಾಗೂ 5 ಕಂಚು ಪದಕ ಪಡೆದಿದ್ದಾರೆ. ಬುಡಕಟ್ಟು ಸಿದ್ದಿ ಸಮುದಾಯದ ಕುಸ್ತಿ ಪಟು ಶಾಲಿನಿ ಸಿದ್ಧಿ ಅತ್ಯುತ್ತಮ ಮಹಿಳಾ ಕುಸ್ತಿ ಪಟು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕುಸ್ತಿ ಫಲಿತಾಂಶ:

ಬಾಲಕಿಯರ ವಿಭಾಗದಲ್ಲಿ 15 ವರ್ಷ ವಯೋಮಿತಿಯೊಳಗೆ ಸುಶ್ಮಿತಾ ಕಮ್ಮಾರ (40ಕೆಜಿ) ಪ್ರಥಮ, ಗಾಯತ್ರಿ ಬೆಕವಾಡಕರ್ (45ಕೆಜಿ) ಪ್ರಥಮ, ಪವಿತ್ರ ಘಟಗೋಳಕರ ಮತ್ತು ಶರ್ಲಿನಾ ಸಿದ್ದಿ ದ್ವಿತೀಯ, ರಿಯಾ ಬಸ್ತಾವಾಡಕರ (50ಕೆಜಿ) ಪ್ರಥಮ, ಪ್ರತೀಕ್ಷಾ ಶೇರಕರ್ ದ್ವಿತೀಯ, ಗಾಯತ್ರಿ ಬಡಿಗೇರ್ (54ಕೆಜಿ) ದ್ವಿತೀಯ, ವೆಲ್ನೆಸಿಯಾ ತೃತೀಯ, ಶೇರಿನಾ ಕಾಂಬ್ರೇಕರ (60ಕೆಜಿ) ಪ್ರಥಮ, ಒಕ್ಸಿಲಿಯಾ ಹರನೋಡಕರ (65ಕೆಜಿ) ಪ್ರಥಮ,

17 ವರ್ಷ ವಯೋಮಿತಿಯೊಳಗಿನ ವಿಭಾಗದಲ್ಲಿ ವೈಷ್ಣವೀ ಅನ್ನಿಕೇರಿ (50ಕೆಜಿ) ದ್ವಿತೀಯ, ಸವಿತಾ ಸಿದ್ಧಿ (60ಕೆಜಿ) ಪ್ರಥಮ, ವಿದ್ಯಾಶ್ರೀ ದ್ವಿತೀಯ, ವರ್ಷಾ (70ಕೆಜಿ) ದ್ವಿತೀಯ ಸ್ಥಾನ ಪಡೆದಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಸೋನಲ್ ಲಾಂಬೋರೆ(50ಕೆಜಿ) ಪ್ರಥಮ, ಶಾಲಿನಿ ಸಿದ್ಧಿ (60ಕೆಜಿ) ಪ್ರಥಮ, ಭಗವತಿ ಗೋಂದಳಿ (70ಕೆಜಿ) ಪ್ರಥಮ, ಮನಿಷಾ ಸಿದ್ಧಿ 70ಮೇಲ್ಪಟ್ಟ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಪುರುಷರ ವಿಭಾಗದ ಫಲಿತಾಂಶ:ಶಂಕರ ಗೌಡ ಪಾಟೀಲ (50ಕೆಜಿ) ಪ್ರಥಮ, ಅಭಿಲಾಷ್ ಊರಬಾನಟ್ಟಿ ತೃತೀಯ, ಶಿವುಪ್ರಸಾದ ಮುತ್ನಾಲ್ (50ಕೆಜಿ) ತೃತೀಯ, ಅಮೃತ ದುರ್ಗಾನಗರ (70ಕೆಜಿ) ದ್ವಿತೀಯ, ದ್ಯಾನೇಶ್ವರ ಹಳದುಕರ (80ಕೆಜಿ) ತೃತೀಯ, ಪ್ರದೀಪ್ ಗೊಲೆಹಳ್ಳಿ (45ಕಿಜಿ) ತೃತೀಯ, ಸೋಮಶೇಖರ್ ಗೌಡ (97ಕೆಜಿ ಮೇಲ್ಪಟ್ಟ ವಿಭಾಗ) ತೃತೀಯ ಸ್ಥಾನ ಪಡೆದಿದ್ದಾರೆ. ಈ ಕುಸ್ತಿಪಟುಗಳಿಗೆ ಕೋಚ್ ತುಕಾರಾಮ್ ಗೌಡ ತರಬೇತಿ ನೀಡಿದ್ದಾರೆ.