ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ,ಬೆಂಗಳೂರು, ತುಮಕೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ್.ನಿ, ಹಾಗೂ ತುಮಕೂರು ಜಿಲ್ಲಾ ಸಹಕಾರಿ ಯೂನಿಯನ್,ನಿ ತುಮಕೂರು ವತಿಯಿಂದ ನವೆಂಬರ್ 29 ರಂದು ಹೆಗ್ಗೆರೆಯ ಹೆಚ್.ಎಂ.ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸ್ವಯಂ ಚಾಲಿತ ಹಾಲು ಶೇಖರಣ ಘಟಕಗಳ ತಂತ್ರಾಂಶ ಅನುಷ್ಠಾನ ಮತ್ತು ಕಾರ್ಯದರ್ಶಿಗಳಿಗೆ ತರಬೇತಿ ಮತ್ತು ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಹಕಾರ ಯೂನಿಯನ್ ಅಧ್ಯಕ್ಷ ಟಿ.ಜಿ.ವೆಂಕಟೇಗೌಡ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಈ ಬಾರಿಯ ಸಹಕಾರಿ ಸಪ್ತಾಹದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪಡೆದಿರುವ ಹಿರಿಯ ಸಹಕಾರಿ ಧುರೀಣರು ಹಾಗೂ ನಿವೃತ್ತ ಅಧಿಕಾರಿಗಳನ್ನು ಗೌರವಿಸಲಾಗುವುದು ಎಂದರು.ನವೆಂಬರ್ 29 ರ ಬೆಳಗ್ಗೆ ಸಹಕಾರ ದ್ವಜಾರೋಹಣವನ್ನು ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ನೆರವೇರಿಸುವರು. ಉದ್ಘಾಟನೆಯನ್ನು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ನೆರವೇರಿಸುವರು.ಅಧ್ಯಕ್ಷತೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಹಿಸಲಿದ್ದಾರೆ. ಸಹಕಾರ ವಾರ ಪತ್ರಿಕೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರು ಹಾಗೂ ಶಾಸಕ ಜಿ.ಟಿ.ದೇವೇಗೌಡ ಬಿಡುಗಡೆ ಮಾಡುವರು.ಕರ್ನಾಟಕ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಸಹಕಾರ ಪಿತಾಮಹರಿಗೆ ಪುಷ್ಪಾರ್ಚನೆ ನೆರವೇರಿಸುವರು.ಈ ಬಾರಿ ಸಹಕಾರ ರತ್ನ ಪ್ರಶಸ್ತಿ ಪಡೆದಿರುವ ಜಿಲ್ಲೆಯ 18೮ ಜನರನ್ನು ಗುಬ್ಬಿ ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದು ವೆಂಕಟೇಗೌಡ ತಿಳಿಸಿದರು.ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಸಂಸದರಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಮಂಜುನಾಥ್,ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್,ತಿಪಟೂರು ಶಾಸಕ ಹಾಗೂ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕಿನ ರಾಜ್ಯಾಧ್ಯಕ್ಷ ಕೆ.ಷಡಪಕ್ಷರಿ, ವಿಧಾನಪರಿಷತ್ ಸದಸ್ಯರಾದ ಆರ್.ರಾಜೇಂದ್ರ,ಶಾಸಕರಾದ ಕೆ.ಎ.ತಿಪ್ಪೇಸ್ವಾಮಿ,ಎಂ.ಟಿ.ಕೃಷ್ಣಪ್ಪ, ಸುರೇಶಬಾಬು, ಬಿ.ಸುರೇಶಗೌಡ, ಡಾ.ಹೆಚ್.ಡಿ.ರಂಗನಾಥ್, ಹೆಚ್.ವಿ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಚಿದಾನಂದಗೌಡ, ಡಿ.ಟಿ.ಶ್ರೀನಿವಾಸ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ.ಜಿ.ವೆಂಕಟೇಗೌಡ ಹಾಗೂ ಸಹಕಾರ ಇಲಾಖೆಯ ಕಾರ್ಯದರ್ಶಿ ಡಾ.ಎಂ.ಎನ್.ಅಜಯ ನಾಗಭೂಷಣ್, ಸಹಕಾರ ಸಂಘಗಳ ನಿಬಂಧಕ ಟಿ.ಹೆಚ್.ಎಂ.ಕುಮಾರ್ ಅವರುಗಳು ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವರ ನೀಡಿದರು.ಸಹಕಾರ ಯೂನಿಯನ್‌ನ ಮಾಜಿ ಅಧ್ಯಕ್ಷ ಗಂಗಣ್ಣ ಮಾತನಾಡಿ,ಇದೇ ಪ್ರಥಮ ಬಾರಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು, ಹಾಲು ಉತ್ಪಾದಕ ಹೈನುಗಾರರ ಅನುಕೂಲಕ್ಕಾಗಿ ಸಿದ್ದಗೊಂಡಿರುವ ಹೊಸ ತಂತ್ರಾಂಶವನ್ನು ಜಿಲ್ಲೆಯ 1354ಹಾಲು ಉತ್ಪಾದಕ ಘಟಕಗಳಲ್ಲಿ 1201ಕ್ಕೆ ಅಳವಡಿಸಿ ಏಕ ಕಾಲಕ್ಕೆ ಚಾಲನೆ ನೀಡುವರು.ಅಲ್ಲದೆ ಈ ಕುರಿತು ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳಿಗೆ ತರಭೇತಿ ಸಹ ನಡೆಯಲಿದೆ.ಜಿಲ್ಲೆಯ 82 ಸಾವಿರ ಹಾಲು ಉತ್ಪಾದಕರಿಂದ ಒಂದು ದಿನಕ್ಕೆ 9ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು,ಸರಕಾರದ ಸಹಾಯ ಧನ ಸಮರ್ಪಕವಾಗಿ ತಲುಪುವ ಹಿನ್ನೇಲೆಯಲ್ಲಿ ತಂತ್ರಾಂಶ ಅಳವಡಿಕೆ ಮುಖ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸುವ ಇಚ್ಚೆ ಇದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಹಕಾರಿ ಧುರೀಣರಾದ ಕಲ್ಲಹಳ್ಳಿ ದೇವರಾಜು, ಲಕ್ಷ್ಮಿನಾರಾಯಣ್,ಸಿಂಗದಹಳ್ಳಿ ರಾಜಕುಮಾರ್, ನಾರಾಯಣಗೌಡ, ನಾಗೇಶಬಾಬು, ಲಕ್ಷ್ಮಿನಾರಾಯಣ್,ಸಿದ್ದಲಿಂಗೇಗೌಡ,ಕಾಂತರಾಜು,