ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಯುವ ಪೀಳಿಗೆಗೆ ವೈಚಾರಿಕತೆ, ಬದ್ಧತೆ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಗ್ರಾಮೀಣ ನಾಯಕತ್ವ ರೂಪಿಸಲು ಮೇ 31ರಿಂದ ಸತತ 3 ದಿನ ಕಾಲ ತಾಲೂಕಿನ ಶಿರಾಳಕೊಪ್ಪ ಸಮೀಪದ ತಡಗುಣಿಯ ಅಕ್ಕಮಹಾದೇವಿ ಪ್ರೌಢಶಾಲೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ಚಳವಳಿ ನಾಯಕತ್ವದ ರಾಜ್ಯಮಟ್ಟದ 2ನೇ ಶಿಬಿರ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ.ಗಂಗಾಧರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೃಷಿಯಲ್ಲಿನ ಬೆಳೆ ವೈವಿಧ್ಯತೆ, ಗೋ ಸಂಪತ್ತು, ಸಾವಯವ ಕೃಷಿ ಬಗ್ಗೆ ಯೋಜನಾ ಬದ್ಧವಾಗಿ ತರಬೇತಿ ನೀಡಿ ಮೂಲ ಬಂಡವಾಳ, ಆದಾಯ ಹೆಚ್ಚಳ ಬಗ್ಗೆ ರೈತರಿಗೆ ಸೂಕ್ತ ತರಬೇತಿ ಅಗತ್ಯ. ಅಗ್ರಿಕಲ್ಚರಲ್ ಇಂಜಿನಿಯರಿಂಗ್, ಆಗ್ರೋ ಇಂಜಿನಿಯರಿಂಗ್, ವಾಟರ್ ಮ್ಯಾನೇಜ್‌ಮೆಂಟ್ ಬಗ್ಗೆ ಸೂಕ್ತ ಮಾಹಿತಿ ದೊರಕಿಸುವುದು, ಕೃಷಿಯಲ್ಲಿನ ಸಮಸ್ಯೆಗಳ ಬಗ್ಗೆ ಹೋರಾಟದ ಮೂಲಕ ಮುಂದಿನ ಪೀಳಿಗೆ ಸಜ್ಜುಗೊಳಿಸಲು ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದಲ್ಲಿ ಶ್ರಮಿಸುತ್ತಿದೆ ಎಂದರು. ಒತ್ತಾಯದ ಮೇರೆಗೆ ಸ್ಥಳ ಬದಲು:
ಈ ದಿಸೆಯಲ್ಲಿ ಈ ಹಿಂದೆ ರಾಮನಗರದ ಜಾನಪದ ಲೋಕದಲ್ಲಿ ರೈತ ಕುಟುಂಬದ ಕುಡಿಗಳಿಗೆ ರೈತ ಚಳವಳಿ ನಾಯಕತ್ವದ ಪ್ರಥಮ ಶಿಬಿರ ನಡೆಸಲಾಗಿದ್ದು ಈ ಬಾರಿ ದಾವಣಗೆರೆಯ ಕೊಂಡಜ್ಜಿ ಬಳಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಶಿಬಿರ ಜಿಲ್ಲೆಯ ರೈತ ನಾಯಕರ ಒತ್ತಾಯದ ಮೇರೆಗೆ ಬದಲಾಯಿಸಲಾಗಿದೆ ಎಂದ ಅವರು ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ ರೈತ, ಸಮಾಜವಾದಿ, ಗೇಣಿದಾರರ, ದಲಿತ ಚಳವಳಿಗಳ ಸಹಿತ ಹಲವು ಹೋರಾಟದ ಉಗಮ ಸ್ಥಾನವಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಸಮಗ್ರ ಚರ್ಚೆ:
ಶಿಬಿರದಲ್ಲಿ ರಾಜ್ಯದ 20 ಜಿಲ್ಲೆಯ ನೋಂದಾಯಿತ 100ಕ್ಕೂ ಅಧಿಕ ಸಕ್ರಿಯ ಆಸಕ್ತ ಯುವ ಕೃಷಿಕರು ಪಾಲ್ಗೊಳ್ಳಲಿದ್ದಾರೆ. ನಿತ್ಯ ನಡೆಯುವ 2 ಗೋಷ್ಠಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿನ ಅಗ್ರಿಕಲ್ಚರಲ್ ಎಕಾನಮಿ, ಸ್ವಾತಂತ್ರ್ಯ ನಂತರದಲ್ಲಿ ಪಂಚ ವಾರ್ಷಿಕ ಯೋಜನೆ ಜಾರಿ ನಂತರ ಕೃಷಿ ಬಿಕ್ಕಟ್ಟಿನ ಬಗ್ಗೆ ತಜ್ಞರಿಂದ ಮಾಹಿತಿ ಕಾರ್ಯಾಗಾರ, ಪರಿಹಾರೋಪಾಯಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಸಂಘದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ, ಜಿಲ್ಲಾಧ್ಯಕ್ಷ ಹಾಲೇಶಪ್ಪ ಗೌಡ, ಕಾರ್ಯಾಧ್ಯಕ್ಷ ಪುಟ್ಟಣ್ಣಗೌಡ , ಭದ್ರಾವತಿ ಘಟಕ ಅಧ್ಯಕ್ಷ ಹಿರಣ್ಣಯ್ಯ, ಶಿಕಾರಿಪುರ ಅಧ್ಯಕ್ಷ ರಾಜಣ್ಣ ಮುಗಳಿಕೊಪ್ಪ, ಸೊರಬ ಅಧ್ಯಕ್ಷ ಚಂದ್ರಶೇಖರ ಬಾಪಟ್, ಶಿವಮೊಗ್ಗ ಅಧ್ಯಕ್ಷ ಗಿರೀಶ್, ಜಗದೀಶ್ ನಾಯ್ಕ, ಪ್ರ.ಕಾ ಎಚ್.ಎಸ್ ಮಂಜುನಾಥ್ ಮತ್ತಿತರರಿದ್ದರು.
;Resize=(128,128))
;Resize=(128,128))
;Resize=(128,128))