ಸಾರಾಂಶ
೨೭ ಜನ ರಾಮಭಕ್ತರ ೨ನೇ ತಂಡ ಅಯೋಧ್ಯೆಯ ಶ್ರೀ ರಾಮಲಲ್ಲಾ ದರ್ಶನಕ್ಕೆ ಬುಧವಾರ ಕಾರವಾರದಿಂದ ಹೊರಟಿದ್ದು, ಬಿಜೆಪಿ ಅಡಿಯಲ್ಲಿ ಈ ಅಧ್ಯಾತ್ಮ ಯಾತ್ರೆ ಆಯೋಜಿಸಲಾಗಿದೆ.
ಯಲ್ಲಾಪುರ:
ತಾಲೂಕಿನ ೨೭ ಜನ ರಾಮಭಕ್ತರ ೨ನೇ ತಂಡ ಅಯೋಧ್ಯೆಯ ಶ್ರೀ ರಾಮಲಲ್ಲಾ ದರ್ಶನಕ್ಕೆ ಬುಧವಾರ ಕಾರವಾರದಿಂದ ಹೊರಟಿದ್ದು, ಬಿಜೆಪಿ ಅಡಿಯಲ್ಲಿ ಈ ಅಧ್ಯಾತ್ಮ ಯಾತ್ರೆ ಆಯೋಜಿಸಲಾಗಿದೆ.ಈ ಹಿಂದೆ ಫೆಬ್ರುವರಿ ತಿಂಗಳಲ್ಲಿ ವಿಶ್ವಹಿಂದೂ ಪರಿಷತ್ ಅಡಿಯಲ್ಲಿ ತಾಲೂಕಿನ ೧೪ ಜನರ ತಂಡವು ಶ್ರೀರಾಮ ದರ್ಶನಕ್ಕೆ ತೆರಳಿ ಯಶಸ್ವಿಯಾಗಿ ಹಿಂದಿರುಗಿತ್ತು. ಪ್ರಸ್ತುತ ೨೪ ಜನರ ತಂಡ ಯಾತ್ರೆ ಹೊರಟಿದ್ದು, ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಬೀಳ್ಕೊಡಲಾಯಿತು.ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಜನ್ಮಸ್ಥಳ ಅಯೋಧ್ಯೆಗೆ ತೆರಳುವುದೆಂದರೆ ಪ್ರತಿ ಹಿಂದೂಗಳ ಜೀವನದ ಕನಸಾಗಬೇಕಿದೆ. ಸಮಾಜದ ಪ್ರತಿಯೊಬ್ಬರೂ ಸನಾತನ ಸಂಸ್ಕೃತಿಯೆಡೆಗೆ ಸಾಗುವಂತಾಗಲು ಇಂತಹ ಯಾತ್ರೆಗಳು ಪ್ರೇರಣಾದಾಯಕವಾಗಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಯಾತ್ರಾರ್ಥಿಗಳಿಗೆ ಶುಭಕೋರಿದರು.ಈ ವೇಳೆ ನಿಕಟಪೂರ್ವ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಪುರಂದರ ತೆಕ್ಕಟೆ, ಹಿಂದುಳಿದ ಮೋರ್ಚಾದ ತಾಲೂಕು ಪ್ರಮುಖ ಭಾರವಿ ದೇವಾಡಿಗ, ಪಕ್ಷದ ಮಹಿಳಾ ಪ್ರಮುಖಿ ನಮಿತಾ ಬೀಡೀಕರ, ರಾಮ ದರ್ಶನ ಯಾತ್ರಾ ಸಮಿತಿ ಸಂಚಾಲಕ ಗಜಾನನ ನಾಯ್ಕ ತಳ್ಳಿಗೆರೆ, ಹನುಮಂತ ಸಿಂಗನಳ್ಳಿ, ಅಕ್ಷಯ್ ಕಿತ್ತೂರ ಉಪಸ್ಥಿತರಿದ್ದರು.ಯಾತ್ರೆ ಹೊರಟಿರುವ ತಂಡದಲ್ಲಿ ಪತ್ರಕರ್ತ ನಾಗರಾಜ್ ಮದ್ಗುಣಿ, ಡಾ. ಸುಚೇತಾ ಮದ್ಗುಣಿ, ಕಮಲಾಕ್ಷಿ ರಾಮಚಂದ್ರ ಬಿಡೀಕರ್, ಸಾಕ್ಷಿ ಸುರೇಂದ್ರ ಮುರುಕುಂಬಿ ಇದ್ದಾರೆ.