ವಿಕಲಚೇತನರ ನೋವಿಗೆ ಸ್ಪಂದಸುವುದು ನಮ್ಮ ಕರ್ತವ್ಯ: ಅಶೋಕ್‌ ಕುಮಾರ್‌ ರೈ

| Published : Mar 07 2024, 01:50 AM IST

ವಿಕಲಚೇತನರ ನೋವಿಗೆ ಸ್ಪಂದಸುವುದು ನಮ್ಮ ಕರ್ತವ್ಯ: ಅಶೋಕ್‌ ಕುಮಾರ್‌ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ನಾವು ಸರ್ಕಾರದಿಂದ ಬಂದಿರುವುದನ್ನು ಮಾತ್ರ ಕೊಡುತ್ತಿದ್ದೆವು. ಆದರೆ ಈ ವರ್ಷ ಇಲ್ಲಿ ರೂ. ೩.೭೦ ಲಕ್ಷ ಅನುದಾನದಲ್ಲಿ ಸಾಧನ ಸಲಕರಣೆ ನೀಡುವುತ್ತಿರುವುದು ದೊಡ್ಡ ವಿಚಾರ ಎಂದರು.

ಕನ್ನಡಪ್ರಭ ವಾರ್ತೆ ಪುತ್ತೂರು

ವಿಕಚೇತನರ ನೋವು ಪೋಷಕರಿಗೆ ಮಾತ್ರ ತಿಳಿಯುತ್ತದೆ ಹೊರತು ಬೇರೆಯವರಿಗೆ ಗೊತ್ತಾಗುವುದಿಲ್ಲ. ಅವರ ನೋವಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೆಲ್ಲಿಕಟ್ಟೆ ಶಾಲಾ ವಠಾರದಲ್ಲೇ ವಿಕಲಚೇತನರ ಫಿಸಿಯೋಥೆರಪಿ ಕೇಂದ್ರ ತೆರೆಯಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಪುತ್ತೂರು ನಗರದ ನೆಲ್ಲಿಕಟ್ಟೆ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಮಂಗಳವಾರ ಅವರು ೩೪ ಮಂದಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೆಲ್ಲಿಕಟ್ಟೆಯಲ್ಲಿ ವಿಕಲಚೇತನರ ಫಿಸಿಯೋಥೆರಪಿ ಕೇಂದ್ರ ಮಾಡುವುದೆಂದು ತೀರ್ಮಾನ ಮಾಡಿದಾಗ ಇದಕ್ಕೆ ಈ ಭಾಗದ ಎಸ್‌ಡಿಎಂಸ್‌ಸಿಯವರು ವಿರೋಧ ವ್ಯಕ್ತಪಡಿಸಿತ್ತು. ಆದರೆ ವಿಕಲಚೇತರ ನೋವು ಯಾರಿಗೂ ಅರ್ಥ ಆಗುವುದಿಲ್ಲ. ಅವರಿಗೆ ಸ್ಪಂದನೆ ಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ನಾನು ನೆಲ್ಲಿಕಟ್ಟೆಯಲ್ಲೇ ಫಿಸಿಯೋಥೆರಪಿ ಸೆಂಟರ್ ತೆರೆಯುವ ಕುರಿತು ವೈಯುಕ್ತಿವಾಗಿ ತೀರ್ಮಾನ ತೆಗೆದು ಕೊಂಡಿದ್ದೇನೆ. ೧೩ ಲಕ್ಷದಲ್ಲಿ ಫಿಸಿಯೋಥೆರಪಿ ಸೆಂಟರ್ ಮತ್ತು ವೀಲ್ ಚೇಯರ್‌ನಲ್ಲೇ ಶೌಚಾಲಯಕ್ಕೆ ಹೋಗುವ ವ್ಯವಸ್ಥೆಯ ಶೌಚಾಲಯ ನಿರ್ಮಾಣ ಮಾಡಿ ಕೊಡಲಾಗವುದು ಎಂದರು. ವಿಕಲಚೇತನರಿಗೆ ನೀಡುವ ಯಾವುದೇ ಯೋಜನೆಯ ಕುರಿತು ಯಾರೂ ವಿರೋಧ ಮಾತನಾಡುವ ಹಾಗಿಲ್ಲ. ವಿಕಲಚೇತನರ ಬೇಡಿಕೆಗಳಿಗೆ ಮೊದಲ ಆದ್ಯತೆ. ಆದರೆ ಈ ಭಾಗದ ಎಸ್‌ಡಿಎಂಸಿಯವರು ಗೊತ್ತಿಲ್ಲದೆ ವಿರೋಧ ವ್ಯಕ್ತಪಡಿಸಿರಬಹುದು ಎಂದು ಅವರು ಹೇಳಿದರು. ನಗರಸಭಾ ಸ್ಥಳೀಯ ವಾರ್ಡ್ ಸದಸ್ಯ ರಮೇಶ್ ರೈ ಮಾತನಾಡಿ, ಇಲ್ಲಿ ವಿಕಲಚೇತನರಿಗೆ ಫಿಸಿಯೋಥೆರಪಿ ಸೆಂಟರ್ ಮಾಡಲು ಯಾರದೇ ವಿರೋಧವಲ್ಲ. ಆದರೆ ಶಾಲೆಯ ಆವರಣ ಬಿಟ್ಟು ಹೊರಗೆ ವಿಕಲಚೇತನರ ಫಿಸಿಯೋಥೆರಪಿ ಕೇಂದ್ರ ಮಾಡಬೇಕೆಂಬುದು ಎಲ್ಲರ ಮನವಿಯಾಗಿದೆ. ಶಾಲೆಗೆ ಆವರಣಗೋಡೆಯು ಇಲ್ಲ. ಮುಂದೆ ಇಲ್ಲಿ ಸಾಕಷ್ಟು ವಾಹನ ಬರುವಾಗ ಶಾಲಾ ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಹಾಗಾಗಿ ಶಾಲೆಗೆ ಆವರಣಗೋಡೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ನಾವು ಸರ್ಕಾರದಿಂದ ಬಂದಿರುವುದನ್ನು ಮಾತ್ರ ಕೊಡುತ್ತಿದ್ದೆವು. ಆದರೆ ಈ ವರ್ಷ ಇಲ್ಲಿ ರೂ. ೩.೭೦ ಲಕ್ಷ ಅನುದಾನದಲ್ಲಿ ಸಾಧನ ಸಲಕರಣೆ ನೀಡುವುತ್ತಿರುವುದು ದೊಡ್ಡ ವಿಚಾರ ಎಂದರು. ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್‌ನ ನಿಹಾಲ್ ಶೆಟ್ಟಿ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಉಪಸ್ಥಿತರಿದ್ದರು. ಡಿ.ಟಿ.ಇ.ಆರ್ ತನುಜಾ, ಸೀತಮ್ಮ ಕಾರ್ಯಕ್ರಮ ನಿರೂಪಿಸಿದರು.