3.45 ಲಕ್ಷ ರು. ಕಳವು ಪ್ರಕರಣ: ಆರೋಪಿ ಬಂಧನ

| Published : Dec 09 2023, 01:15 AM IST

ಸಾರಾಂಶ

ಇಲ್ಲಿನ ಪುತ್ತೂರು ಎಂಬಲ್ಲಿ 3.45 ಲಕ್ಷ ರು.ಗಳನ್ನು ಕಳ್ಳತನ ಮಾಡಿದ್ದ ಮೇಲ್ ನರ್ಸ್‌ನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪ್ರವೀಣ್‌ ಕುಮಾರ್‌ ಜಾಲಪ್ಪ ಹರದೊಳ್ಳ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಪುತ್ತೂರು ಎಂಬಲ್ಲಿ 3.45 ಲಕ್ಷ ರು.ಗಳನ್ನು ಕಳ್ಳತನ ಮಾಡಿದ್ದ ಮೇಲ್ ನರ್ಸ್‌ನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಪ್ರವೀಣ್‌ ಕುಮಾರ್‌ ಜಾಲಪ್ಪ ಹರದೊಳ್ಳ. ಈತನನ್ನು ಇಲ್ಲಿನ ಪುತ್ತೂರು ಗ್ರಾಮದ ಸಂತೋಷ್‌ ಎಂಬವರ ಮನೆಯಲ್ಲಿ ವೈದ್ಯಕೀಯ ಸೇವೆಗಾಗಿ ನಿಯೋಜಿಸಿದ್ದರು. ಪ್ರವೀಣ್ಣ ಡಿ.4ರಂದು ಸಂಜೆ 6.30ಕ್ಕೆ ಕಾಣೆಯಾಗಿದ್ದು, ಆತ ಸಂತೋಷ್ ಅವರ ಬೊಲೆರೋ ವಾಹನದ ಡ್ಯಾಶ್‌ ಬೋರ್ಡನಲ್ಲಿಟ್ಟಿದ್ದ 3,45,000 ರು.ಗಳನ್ನ ಕಳವು ಮಾಡಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರ ಠಾಣೆ ನಿರೀಕ್ಷಕ ಮಂಜಪ್ಪ ಡಿ.ಆರ್‌. ಮತ್ತ ಸಿಬ್ಬಂದಿ ಆರೋಪಿಯನ್ನು ಆತನ ಊರಾದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಬಂಧಿಸಿದ್ದು, ಕಳ್ಳತನ ಮಾಡಿದ್ದ 3,13,500 ರು.ಗಳನ್ನು ವಶಪಡಿಸಿಕೊಂಡಿದ್ದಾರೆ.