3 ನಾಮಪತ್ರ ವಾಪಸ್‌, ಅಂತಿಮ ಕಣದಲ್ಲಿ 30 ಅಭ್ಯರ್ಥಿಗಳು

| Published : Apr 23 2024, 01:53 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದವರು ಮೂವರು ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದ ಸೋಮವಾರ ನಾಮಪತ್ರ ವಾಪಸ್‌ ಪಡೆದಿದ್ದಾರೆ. ಇದರಿಂದಾಗಿ 30 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

- ಇರ್ಫಾನ್ ಮುಲ್ಲಾ, ಅಲ್ಲಾ ಬಕ್ಷ್‌, ಅಜ್ಜಪ್ಪ ನಾಮಪತ್ರ ಹಿಂಪಡೆದ ಪಕ್ಷೇತರರು: ಡಿಸಿ ಡಾ.ವೆಂಕಟೇಶ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದವರು ಮೂವರು ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದ ಸೋಮವಾರ ನಾಮಪತ್ರ ವಾಪಸ್‌ ಪಡೆದಿದ್ದಾರೆ. ಇದರಿಂದಾಗಿ 30 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರ ಸಲ್ಲಿಕೆ ಅಂತಿಮ ದಿನವಾದ ಏ.19ರವರೆಗೆ ಒಟ್ಟು 40 ಅಭ್ಯರ್ಥಿಗಳಿಂದ 54 ನಾಮಪತ್ರ ಸಲ್ಲಿಕೆಯಾಗಿದ್ದವು. ಏ.20ರಂದು ನಾಮಪತ್ರ ಪರಿಶೀಲನೆಯಲ್ಲಿ 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿ, 33 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದವು ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಏ.22ರಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಕಾಲಾವಕಾಶವಿತ್ತು. ಏ.22ರಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಇರ್ಫಾನ್ ಮುಲ್ಲಾ, ಬಿ.ಅಲ್ಲಾ ಬಕ್ಷ್‌, ಕೆ.ಜಿ.ಅಜ್ಜಪ್ಪ ಉಮೇದುವಾರಿಕೆ ಹಿಂಪಡೆದು, ಕಣದಿಂದ ಹಿಂದೆ ಸರಿದರು. ಇದೀಗ ವಿವಿಧ ಎಲ್ಲ ಪಕ್ಷಗಳು, ಪಕ್ಷೇತರರು ಸೇರಿದಂತೆ 30 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ ಎಂದು ಅವರು ಹೇಳಿದರು.

ಖರ್ಚು-ವೆಚ್ಚ ಲೆಕ್ಕಗಳ ಪಾಠ:

ದಾವಣಗೆರೆ ಲೋಕಸಭಾ ಕ್ಷೇತ್ರದ ಅಂತಿಮ ಕಣದಲ್ಲಿ ಉಳಿದಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ನಿಯಮ, ಖರ್ಚು ವೆಚ್ಚಗಳ ಲೆಕ್ಕದ ನಿರ್ವಹಣೆಯ ಬಗ್ಗೆ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಾಹಿತಿ ನೀಡಲಾಯಿತು.

ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ, ಸಾಮಾನ್ಯ ವೀಕ್ಷಕರಾದ ಎಂ.ಲಶ್ಮಿ, ವೆಚ್ಚ ವೀಕ್ಷಕರಾದ ಪ್ರತಿಭಾ ಸಿಂಗ್, ಸಹಾಯಕ ಚುನಾವಣಾಧಿಕಾರಿ, ಅಪರ ಜಿಲ್ಲಾಧಿಕಾರಿ ಸೈಯದ್ ಆಫ್ರೀನ್ ಬಾನು ಎಸ್. ಬಳ್ಳಾರಿ, ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು, ಅಭ್ಯರ್ಥಿಗಳ ಪರ ಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ಇದ್ದರು.

- - - ಬಾಕ್ಸ್‌ಅಂತಿಮ ಕಣದಲ್ಲಿ ತೊಡೆ ತಟ್ಟಿರುವವರು ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಎ.ಕೆ.ತಿಪ್ಪೇಸ್ವಾಮಿ, ಭಾರತೀಯ ಕಾಂಗ್ರೆಸ್ ಪಕ್ಷದ ಡಾ.ಪ್ರಭಾ ಮಲ್ಲಿಕಾರ್ಜುನ, ಉತ್ತಮ ಪ್ರಜಾಕೀಯ ಪಕ್ಷದ ಈಶ್ವರ, ಬಿಜೆಪಿಯ ಗಾಯತ್ರಿ ಸಿದ್ದೇಶ್ವರ, ಬಿಎಸ್‌ಪಿಯ ಹನುಮಂತಪ್ಪ, ಸಮಾಜ ವಿಕಾಸ ಕ್ರಾಂತಿಯ ಕೆ.ಚ್.ರುದ್ರೇಶ, ರಾಣಿ ಚನ್ನಮ್ಮ ಪಾರ್ಟಿಯ ಎಸ್.ವೀರೇಶ, ಕಂಟ್ರಿ ಸಿಟಿಜನ್ ಪಾರ್ಟಿಯ ಎ.ಟಿ.ದಾದಾ ಕಲಂದರ್, ನವಭಾರತ ಸೇವಾದ ಎಂ.ಜಿ. ಶ್ರೀಕಾಂತ, ಜನಹಿತ ಪಕ್ಷದ ಎಚ್.ಎಸ್. ದೊಡ್ಡೇಶ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಎಂ.ಸಿ. ಶ್ರೀನಿವಾಸ, ಕೆಆರ್‌ಎಸ್‌ ಪಕ್ಷದ ಕೆ.ಎಸ್. ವೀರಭದ್ರಪ್ಪ ವಿವಿಧ ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳಾಗಿ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಇನ್ನು ಪಕ್ಷೇತರ ಅಭ್ಯರ್ಥಿಗಳಾಗಿ ಜಿ.ಬಿ.ವಿನಯಕುಮಾರ, ಟಿ.ಜಬೀನ್ ತಾಜ್‌, ಎ.ಕೆ.ಗಣೇಶ, ಬರ್ಕತ್ ಅಲಿ, ಎಂ.ಮೊಹಮ್ಮದ್ ಹಯಾತ್‌, ಎಂ.ಟಿ.ಚಂದ್ರಣ್ಣ, ಕೆ.ಸೈಯದ್ ಜಬೀವುಲ್ಲಾ. ಬಿ.ರವಿ ನಾಯ್ಕ, ತಸ್ಲೀಮ್ ಬಾನು, ಎಚ್.ಫರ್ವೇಜ್‌, ರಶೀದ್ ಖಾನ್, ಎಸ್.ಸಲೀಂ, ಎ.ಕೆ.ಮಂಜುನಾಥ, ಅಬ್ದುಲ್ ನಜೀರ್ ಅಹಮ್ಮದ್‌, ಎಸ್.ಪೆದ್ದಪ್ಪ, ಮೆಹಬೂಬ್ ಬಾಷಾ, ಜಿ.ಎಂ. ಬರ್ಕತ್ ಅಲಿ ಬಾಷಾ, ಜಿ.ಎಂ. ಗಾಯತ್ರಿ ಅಂತಿಮ ಕಣದಲ್ಲಿ ಉಳಿದಿರುವ ಪಕ್ಷೇತರ ಅಭ್ಯರ್ಥಿಗಳು.

- - - -22ಕೆಡಿವಿಜಿ1:

ದಾವಣಗೆರೆ ಡಿಸಿ ಕಚೇರಿಯಲ್ಲಿ ಸೋಮವಾರ ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಚುನಾವಣಾ ನಿಯಮ, ಖರ್ಚು ವೆಚ್ಚಗಳ ಲೆಕ್ಕದ ನಿರ್ವಹಣೆ ಬಗ್ಗೆ ಡಾ. ಎಂ.ವಿ. ವೆಂಕಟೇಶ, ಎಂ.ಲಕ್ಷ್ಮಿ, ಪ್ರತಿಭಾ ಸಿಂಗ್ ಸಮ್ಮುಖದಲ್ಲಿ ಮಾಹಿತಿ ನೀಡಲಾಯಿತು.