ಹಬ್ಬ ಹರಿದಿನಗಳಲ್ಲಿ ಆಯೋಜನೆ ಮಾಡುವ ಮೂಲಕ ಅದನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳೆವಣಿಗೆ. ಗ್ರಾಮದಲ್ಲಿ ಕಳೆದ ೨೫ ವರ್ಷಗಳಿಂದಲೂ ಕುಸ್ತಿಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಯುವ ಜನಾಂಗ ಹೆಚ್ಚು ಕುಸ್ತಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಅರಳಕುಪ್ಪೆ ಗ್ರಾಮದೇವತೆ ಶ್ರೀಬನ್ನಮ್ಮ ದೇವಿ ಹಬ್ಬದ ಪ್ರಯುಕ್ತ ನಡೆದ 30 ಜತೆ ರಾಜ್ಯ ಮಟ್ಟದ ನಾಡಕುಸ್ತಿ ಪೈ.ಗುರುಮೂರ್ತಿ (ಸಿಂಗ್ರೀಗೌಡ) ಕುಸ್ತಿ ಪಂದ್ಯಾವಳಿಗೆ ಅಂತಾರಾಷ್ಟ್ರೀಯ ಕುಸ್ತಿ ತರಬೇತುದಾರ ಡಾ.ಎನ್.ವಿನೋದ್‌ಕುಮಾರ್ ಹಾಗೂ ಜೆಡಿಎಸ್ ಯುವ ಮುಖಂಡ ಸಿ.ಪಿ.ಶಿವರಾಜ್ ಚಾಲನೆ ನೀಡಿದರು.

ಪಂದ್ಯಾವಳಿಯಲ್ಲಿ ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 30ಕ್ಕೂ ಅಧಿಕ ಜತೆ ಕುಸ್ತಿಪಟುಗಳು ಭಾಗವಹಿಸಿದರು. ವಿಶೇಷವಾಗಿ ಎರಡು ಜತೆ ಮಹಿಳಾ ಕುಸ್ತಿಪಟುಗಳೂ ಸಹ ಭಾಗವಹಿಸಿ ಅಮೋಘ ಕುಸ್ತಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಮಹಿಳಾ ಕುಸ್ತಿ ವಿಭಾಗದಲ್ಲಿ ಮೈಸೂರಿನ ದೀಕ್ಷಿತ ಹಾಗೂ ಬೆಂಗಳೂರಿನ ಮೇಘನ ಅವರ ನಡುವೆ ನಡೆದ ಕಾಳಗದಲ್ಲಿ ಮೈಸೂರಿನ ದೀಕ್ಷಿತ ಗೆಲುವು ಸಾಧಿಸಿದರು. ಮತ್ತೊಂದು ಕುಸ್ತಿಯಲ್ಲಿ ಕನಕಪುರದ ಶ್ರೀರಕ್ಷಾ ಗೌಡ ಮತ್ತು ಬೆಂಗಳೂರಿನ ಪೈ.ಮಮತರ ನಡುವೆ ನಡೆದ ಕುಸ್ತಿಯಲ್ಲಿ ಕನಕಪುರದ ಶ್ರೀರಕ್ಷಗೌಡ ಗೆಲುವು ಸಾಧಿಸಿದರು.

ಪುರುಷರ ವಿಭಾಗದಲ್ಲಿ ಹಲವು ಜತೆ ಕುಸ್ತಿಗಳು ನಡೆದು ಕೆಲವರು ಗೆಲುವು ಸಾಧಿಸಿದರೆ ಮತ್ತೆ ಕೆಲವರು ಸಮಬಲ ಸಾಧಿಸಿದರು. ಪುರುಷರ ವಿಭಾಗದ ದಾವಣಗೆರೆಯ ಪೈ.ಹನುಮಂತ ಮತ್ತು ಪುಣೆಯ ಪೈ.ರಾಯಪ್ಪ ಅವರು ನಡುವೆ ನಡೆದ 30 ನಿಮಿಷ ಕುಸ್ತಿಯ ಹಣಾಹಣಿಯೂ ರೋಚಕವಾಗಿತ್ತು.

ಇಬ್ಬರ ನಡುವೆ ನಡೆದ ಪಂದ್ಯಾವಳಿ ಎಲ್ಲರು ಗಮನಸೆಳೆಯಿತು. ಇಬ್ಬರ ಕುಸ್ತಿ ವೀಕ್ಷಿಸಿದ ಪ್ರೇಕ್ಷಕರು, ಕುಸ್ತಿ ಪ್ರಿಯರು ಶಿಳ್ಳೆ, ಚಪ್ಪಾಳೆ ಹಾಕುವ ಮೂಲಕ ಸಂಭ್ರಮಿಸಿದರು. ಅಂತಿಮವಾಗಿ ಇಬ್ಬರು ಸಮಬಲ ಸಾಧಿಸಿದರು.

ಜತೆಗೆ ಪ್ರಸಿದ್ಧ ಕುಸ್ತಿಪಟುಗಳಾದ ಅರಳಕುಪ್ಪೆ ಪೈ.ಅರ್ಜುನ್, ಪೈ.ಗಗನ್, ಪೈ.ಲಕ್ಷಣ್, ಪೈ.ಕಾರ್ತಿಕ್, ಪೈ.ಭೈರವ, ಡಾಮಡಹಳ್ಳಿ ಪೈ.ನಂದನ್‌ ಚಕ್ರವರ್ತಿ, ಹಾಗನಹಳ್ಳಿ ಪೈ.ದರ್ಶನ್, ಕಟ್ಟೇರಿಯ ಪೈ.ರಾಘು ಸೇರಿದಂತೆ ಹಲವು ಕುಸ್ತಿ ಪಟುಗಳು ಭಾಗವಹಿಸಿ ಕುಸ್ತಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಕುಸ್ತಿಯಲ್ಲಿ ಭಾಗವಹಿಸಿದ ಎಲ್ಲಾ ಕುಸ್ತಿಪಟುಗಳಿಗೂ ನಗದು ಬಹುಮಾನ ನೀಡಲಾಯಿತು. ವಿಜೇತ ಕುಸ್ತಿಪಟುಗಳಿಗೆ ಆಕರ್ಷಕ ಟ್ರೋಫಿ ವಿತರಿಸಲಾಯಿತು.

ಇದಕ್ಕೂ ಮುನ್ನ ಕುಸ್ತಿ ಪಂದ್ಯಾ‍ವಳಿ ಉದ್ಘಾಟಿಸಿದ ಯುವ ಮುಖಂಡ ಸಿ.ಪಿ.ಶಿವರಾಜು ಮಾತನಾಡಿ, ಗ್ರಾಮದೇವತೆ ಶ್ರೀಬನ್ನಮ್ಮದೇವಿ ಹಬ್ಬದ ಅಂಗವಾಗಿ ನಡೆದ ರಾಜ್ಯ ಮಟ್ಟದ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಕುಸ್ತಿಪಟುಗಳು ಆಗಮಿಸಿದ್ದಾರೆ. ಕುಸ್ತಿ ಎಂಬ ಕ್ರೀಡೆ ನಮ್ಮ ಗ್ರಾಮೀಣ ಕ್ರೀಡೆಯಾಗಿದೆ ಎಂದರು.

ಹಬ್ಬ ಹರಿದಿನಗಳಲ್ಲಿ ಆಯೋಜನೆ ಮಾಡುವ ಮೂಲಕ ಅದನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳೆವಣಿಗೆ. ಗ್ರಾಮದಲ್ಲಿ ಕಳೆದ ೨೫ ವರ್ಷಗಳಿಂದಲೂ ಕುಸ್ತಿಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಯುವ ಜನಾಂಗ ಹೆಚ್ಚು ಕುಸ್ತಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗ್ರಾಮದ ಸಾಧಕರನ್ನು ವಿಶೇಷ ಅಭಿನಂದಿಸಲಾಯಿತು. ಕುಸ್ತಿಪಂದ್ಯಾವಳಿ ವ್ಯವಸ್ಥಾಪಕ ಪೈ.ಗುರುಮೂರ್ತಿ(ಸಿಂಗ್ರೀಗೌಡ), ಲಯನ್ ಎನ್.ಕೃಷ್ಣೇಗೌಡ, ಎಸ್.ಮಹದೇವು, ಪೇಡರವಿ, ಹೊಸಹಳ್ಳಿ ಶಿವು, ಪ್ರಶಾಂತ್, ಪೈ.ಗಿರೀಶ್, ಪೈ.ಸಿದ್ದರಾಮು, ಪೈ.ಸುದೀಪ್, ಎನ್.ನಾರಾಯಣಗೌಡ, ಎಸ್.ನಾಗರಾಜು, ಕೆ.ಯೋಗಣ್ಣ, ಲಿಂಗದೇವರಕೊಪ್ಪಲು ಪೈ.ಕುಮಾರ್, ಕುಸ್ತಿತರಬೇತುದಾರ ಶ್ರೀನಿವಾಸ್‌ಗೌಡ, ಕ್ಯಾತನಹಳ್ಳಿ ಪೈ.ಆನಂದ್, ಪಂಚಾಕ್ಷರಿ, ಮೈಸೂರಿನ ಚೊಕ್ಕಮೂರ್ತಿ, ಕುಮಾರ್, ರಾಜು, ಗಂಜಾಂ ರವಿಪ್ರಸಾದ್, ಮಂಜು, ಆರ್.ಸೋಮೇಗೌಡ, ಇಂದ್ರೇಶ್‌ಕುಮಾರ್, ಆರ್.ಗಿರೀಶ್, ಎಂ.ಜಯಂತ್, ರೂಪನಿತನ್, ಪದ್ಮಮ್ಮ, ಜಗದೀಶ್, ಟಿ.ಬೆಟ್ಟೇಗೌಡ, ಸೇರಿದಂತೆ ಅರಳಕುಪ್ಪೆ ಹಾಗೂ ಸುತ್ತಮುತ್ತಲ ಗ್ರಾಮದ ಎಲ್ಲಾ ಮುಖಂಡರು ಹಾಜರಿದ್ದರು.