ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಇಲ್ಲಿನ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಸೆ.28 ರಂದು ಜರುಗುವ 15 ಕ್ಷೇತ್ರದ ಚುನಾವಣೆಗೆ ಒಟ್ಟು 32 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನವಾದ ಸೋಮವಾರ 116 ಅಭ್ಯರ್ಥಿಗಳಲ್ಲಿ 84 ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಹಾಗಾಗಿ ಅಂತಿಮವಾಗಿ ಕಣದಲ್ಲಿ 32 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಸೆ.28ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 4ರವರೆಗೆ ಮತದಾನ ನಡೆಯಲಿದ್ದು, ಬಳಿಕ ಮತ ಎಣಿಕೆ ಪ್ರಕ್ರಿಯೆ ಶುರುವಾಗಲಿದೆ. ಒಟ್ಟು 60,064 ಜನ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.ಸಾಮಾನ್ಯ ಕ್ಷೇತ್ರದಿಂದ ಅಮರ ಮಧುಕರ ನಲವಡೆ (ಸಂಕೇಶ್ವರ), ಅಶೋಕ ಬಸವಂತಪ್ಪ ಪಟ್ಟಣಶೆಟ್ಟಿ (ಹುಕ್ಕೇರಿ), ಲವ (ಪೃಥ್ವಿ) ರಮೇಶ ಕತ್ತಿ (ಬೆಲ್ಲದ ಬಾಗೇವಾಡಿ), ಕಿರಣ ಶಂಕರ ಕಲ್ಲಟ್ಟಿ (ನೊಗನಿಹಾಳ), ಗಜಾನನ ಉರ್ಫ ಘಟಗೆಪ್ಪಾ ಮಲ್ಲಪ್ಪಾ ಮಗದುಮ್ಮ (ಬೆಣಿವಾಡ), ಕಲಗೌಡಾ ಬಸನಗೌಡಾ ಪಾಟೀಲ (ಯಲ್ಲಾಪೂರ), ಪ್ರಭುದೇವ ಬಸಗೌಡಾ ಪಾಟೀಲ (ಅಮ್ಮಿನಭಾಂವಿ), ವಿನಯ ಅಪ್ಪಯ್ಯಗೌಡ ಪಾಟೀಲ (ಅಮ್ಮಿನಭಾಂವಿ), ಶಶಿರಾಜ ಪಾಟೀಲ ಬಾಪುಸಾಹೇಬ (ಸೊಲ್ಲಾಪೂರ), ಬಸಪ್ಪ ಲಗಮಾ ಮರಡಿ (ಕೊಟಬಾಗಿ), ಬಸಗೌಡ ಪರಪ್ಪಾ ಮಗನ್ನವರ (ಎಲಿಮುನ್ನೋಳಿ), ಶಿವಕುಮಾರ ಬಸವರಾಜ ಮಟಗಾರ (ಘೋಡಗೇರಿ), ಶಿವನಗೌಡಾ ಸತ್ತೆಪ್ಪ ಮದವಾಲ (ಸುಲ್ತಾನಪುರ), ಮಹಾವೀರ ವಸಂತ ನಿಲಜಗಿ (ಹುಕ್ಕೇರಿ), ಶಿವಾನಂದ ಉರ್ಫ ನಂದು ಶಿವಪುತ್ರ ಮುಡಸಿ (ಸಂಕೇಶ್ವರ), ವರ್ಧಮಾನ ಸರದಾರ ತಾತಪ್ಪ (ಯರನಾಳ), ಮುನ್ನೋಳಿ ಲಕ್ಷ್ಮಣ ಬಸವರಾಜ (ಹೆಬ್ಬಾಳ), ವಾಸೇದಾರ ಕೆಂಪಣ್ಣ ಸಾತಪ್ಪ (ಹಂಡ್ಯಾನಟ್ಟಿ), ಶಿರಕೊಳಿ ಶಂಕರಪ್ಪ ಶಿವಪುತ್ರಪ್ಪ (ಸಂಕೇಶ್ವರ), ಕ್ಷೀರಸಾಗರ ಮಹಾದೇವ ಬಾಬು (ಸೊಲ್ಲಾಪೂರ) ಕಣದಲ್ಲಿದ್ದಾರೆ.ಮಹಿಳಾ ಕ್ಷೇತ್ರದಿಂದ ನಾಯಿಕವಾಡಿ ಮಹಬೂಬಿ ಗೌಸಅಜಂ (ಹುಕ್ಕೇರಿ), ಪಾಟೀಲ ಭಾಗ್ಯಶ್ರೀ ಬಾಬಾಗೌಡ (ಹೆಬ್ಬಾಳ), ಮೂಡಲಗಿ ಮಂಗಲ ಗುರಸಿದ್ದಪ್ಪ (ಶಿಂದಿಹಟ್ಟಿ), ಸುಮಿತ್ರಾ ಲಕ್ಷ್ಮಣ ಶಿಡ್ಲಹಾಳ (ಪಾಶ್ಚಾಪುರ) ಸ್ಪರ್ಧೆಯಲ್ಲಿದ್ದಾರೆ.ಹಿಂದುಳಿದ ಅ ವರ್ಗ ಕ್ಷೇತ್ರದಿಂದ ಕಳ್ಳಿ ಗಜಾನನ ನಿಂಗಪ್ಪ (ಸಂಕೇಶ್ವರ), ಹೆಗಡೆ ಶಂಕರ ವಿಠೋಬಾ (ಸಂಕೇಶ್ವರ) ಕಣದಲ್ಲಿದ್ದರೆ, ಹಿಂದುಳಿದ ಬ ವರ್ಗ ಕ್ಷೇತ್ರದಿಂದ ದಯಾನಂದ ಮಾರುತಿ ಪಾಟೀಲ (ದಡ್ಡಿ), ಸತ್ತೆಪ್ಪಾ ಭರಮಣ್ಣಾ ನಾಯಿಕ (ಬೆಳವಿ) ಸ್ಪರ್ಧೆಯಲ್ಲಿದ್ದಾರೆ.
ಇನ್ನು ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸನ್ನಾಯಿಕ ಶ್ರೀಮಂತ ಗಂಗಪ್ಪ (ಕಣಗಲಾ), ಹೂಲಿ ಲಕ್ಷ್ಮಣ ಸುರೇಶ (ಬೆಲ್ಲದ ಬಾಗೇವಾಡಿ) ಕಣದಲ್ಲಿದ್ದರೆ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಸವರಾಜ ಲಗಮಣ್ಣ ನಾಯಿಕ (ಗುಟಗುದ್ದಿ), ಲಂಕೆಪ್ಪಗೋಳ ಬಸವಣ್ಣೆ ಸಣ್ಣಪ್ಪ (ಗುಟಗುದ್ದಿ) ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.