೩೨೦ ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ಹಾನಿ, ೨ ಎಮ್ಮೆ ಸಾವು

| Published : May 25 2024, 12:51 AM IST

೩೨೦ ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ಹಾನಿ, ೨ ಎಮ್ಮೆ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದು ಹಾನಿ ಸಂಭವಿಸಿದ ಪ್ರದೇಶಗಳಿಗೆ ಬಾಗಲಕೋಟೆ ತಹಸೀಲ್ದಾರ್‌ ಅಮರೇಶ ಪಮ್ಮಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿ ವೀಕ್ಷಣೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಕಲಾದಗಿಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದು ಹಾನಿ ಸಂಭವಿಸಿದ ಪ್ರದೇಶಗಳಿಗೆ ಬಾಗಲಕೋಟೆ ತಹಸೀಲ್ದಾರ್‌ ಅಮರೇಶ ಪಮ್ಮಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿ ವೀಕ್ಷಣೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಂಡರು.

ತುಳಸಿಗೇರಿ ಮಾರುತೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಾನಿಗೊಳಗಾದ ಅಂಗಡಿ ಮುಂಗಟ್ಟು ವೀಕ್ಷಣೆ ಮಾಡಿ, ಗಾಳಿ ಮಳೆಗೆ ಗಾಯಗೊಂಡಿರುವ ಎಮ್ಮೆ, ವಿವಿಧ ಬೆಳೆಗಳು ಹಾನಿಗೊಳಗಾದ ಪ್ರದೇಶಕ್ಕೂ ಭೇಟಿ ನೀಡಿ ಪರಶೀಲನೆ ಮಾಡಿದರು, ಮರ ಉರುಳಿ ದೊಡ್ಡಸಿದ್ದಪ್ಪ ಹನುಮಂತ ಕೋಲಾರ ಹಾಗೂ ಸಿಡಿಲು ಬಡಿದು ಸಿದ್ದಪ್ಪ ಹನುಮಂತ ತುಳಸಿಗೇರಿ ಅವರ ಎಮ್ಮೆಗಳು ಸಾವಿಗೀಡಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಜಾನುವಾರು ಹಾನಿಗೆ ಸರ್ಕಾರದಿಂದ ಸಿಗುವ ಪರಿಹಾರ ಒದಗಿಸಲು ಅಗತ್ಯ ಕ್ರಮದ ಕೈಗೊಳ್ಳುವುದಾಗಿ ಭರವಸೆ ನೀಡಿದರು.

320 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿ: ಹಿರೇಶೆಲ್ಲಿಕೇರಿಯಲ್ಲಿ ಬೀಸಿದ ಬಿರುಗಾಳಿ ಸಹಿತ ಮಳೆಗೆ ನೂರಲಿ ಫಕೀರಪ್ಪ ಮಾದರ ಎಂಬುವವರು ೨ ಎಕರೆ ೨೪ ಗುಂಟೆಯಲ್ಲಿ ಬೆಳೆದ ದಾಳಿಂಬೆ ಗಿಡಗಳು ಬುಡಸಮೇತ ಕಿತ್ತುಬಿದ್ದು ಹಾನಿ ಉಂಟಾಗಿದೆ. ಮಳೆ ಬಿರುಗಾಳಿಗೆ ೧೦ ಹೆಕ್ಟೇರ್ ಮಾವು, ೮೦ ಹೆಕ್ಟೇರ್‌ ಪಪ್ಪಾಯ, ೭೦ ಹೆಕ್ಟೇರ್‌ ಲಿಂಬೆ, ೧೫೦ ಹೆಕ್ಟೇರ್ ದಾಳಿಂಬೆ, ಟೊಮ್ಯಾಟೋ, ಬಾಳೆ ಸೇರಿ ಒಟ್ಟು ೩೨೦ ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಂದಾಯ ನಿರೀಕ್ಷಕ ಪ್ರಕಾಶ ನಾಯಕ, ಗ್ರಾಮ ಆಡಳಿತಾಧಿಕಾರಿ ರವಿ ಕುಳ್ಳೊಳ್ಳಿ, ಶ್ರೀಕಾಂತ ಪಾಟೀಲ, ರವಿ ಚೆಲವಾದಿ ಇನ್ನಿತರರು ಇದ್ದರು,

ಎಂಎಲ್ಸಿ ಪಿ.ಎಚ್‌.ಪೂಜಾರ ಭೇಟಿ

ಗಾಳಿ ಮಳೆಯಿಂದಾಗಿ ಹಾನೊಗೊಳಗಾದ ತುಳಸಿಗೇರಿಗೆ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿಯ ರೈತರೊಂದಿಗೆ ಚರ್ಚಿ ನಡೆಸಿ, ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಸ್ಥಳದಲ್ಲಿಯೇ ಇದ್ದ ತಹಶೀಲ್ದಾರ್ ಅಮರೇಶ ಪಮ್ಮಾರ ಹಾಗೂ ತೋಟಗಾರಿಕೆ ಅಧಿಕಾರಿಗಳಿಗೆ ಹಾನಿ ಬಗ್ಗೆ ವಿಸೃತ ಚರ್ಚಿಸಿ ಸರ್ಕಾರಕ್ಕೆ ವರದಿ ನೀಡಬೇಕೆಂದು ಹೇಳಿದರು.ಕ ನಿರ್ದೇಶಕ ಬಿ.ಜಿ.ಗೌಡನ್ನವರ್ ವೀಕ್ಷಿಸಿದರು.