34 ಕೋಟಿ ರು. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Jan 27 2025, 12:48 AM IST

34 ಕೋಟಿ ರು. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜೂನಿಯರ್ ಕಾಲೇಜು ಶಿಥಿಲಾವಸ್ಥೆಯಲ್ಲಿದೆ. ಅದನ್ನು ಲೋಕೋಪಯೋಗಿ ಇಲಾಖೆ ಸಹಮತದೊಂದಿಗೆ ಕಟ್ಟಡವನ್ನು ತೆರವುಗೊಳಿಸಿ ಪ್ರೌಢಶಾಲೆಗೆ ತುರ್ತಾಗಿ ಕೊಠಡಿ ಹಾಗೂ ಕಚೇರಿ ನಿರ್ಮಾಣ ಮಾಡಲು ಹಣ ಮುಂಜುರಾತಿ ಜೊತೆಯಲ್ಲಿ ಕಾಮಗಾರಿಯನ್ನು ಆರಂಭಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ಸುಮಾರು 34 ಕೋಟಿ ರು. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಜೂನಿಯರ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸಂಬಂಧ ವಿನ್ಯಾಸಕಾರರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರಯೋಗಾಲಯ, ಕಚೇರಿ, ಕೊಠಡಿ ಸೇರಿದಂತೆ ಮೂಲ ಸೌಲಭ್ಯ ಒಳಗೊಂಡಂತೆ ವಿಶೇಷವಾಗಿ ಕಾಲೇಜು ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಜೂನಿಯರ್ ಕಾಲೇಜು ಶಿಥಿಲಾವಸ್ಥೆಯಲ್ಲಿದೆ. ಅದನ್ನು ಲೋಕೋಪಯೋಗಿ ಇಲಾಖೆ ಸಹಮತದೊಂದಿಗೆ ಕಟ್ಟಡವನ್ನು ತೆರವುಗೊಳಿಸಿ ಪ್ರೌಢಶಾಲೆಗೆ ತುರ್ತಾಗಿ ಕೊಠಡಿ ಹಾಗೂ ಕಚೇರಿ ನಿರ್ಮಾಣ ಮಾಡಲು ಹಣ ಮುಂಜುರಾತಿ ಜೊತೆಯಲ್ಲಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.

ಒಂದೇ ಸ್ಥಳದಲ್ಲಿ ಪ್ರೌಢಶಾಲೆ, ಪಿಯುಸಿ ಹಾಗೂ ಪ್ರಥಮ ದರ್ಜೆ ಕಾಲೇಜು ಬರುತ್ತಿದೆ. ಹೆಲಿಪ್ಯಾಡ್ ಇರುವ ಸ್ಥಳದಲ್ಲಿ ಅವಶ್ಯಕತೆ ಇದ್ದಾಗ ಹೆಲಿಪ್ಯಾಡ್‌ಗೆ ಬಳಸಿಕೊಂಡು ಉಳಿದ ಸಮಯದಲ್ಲಿ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು ಎಂದರು.

ಪಟ್ಟಣದ ಅನಂತ್‌ ರಾಂ ವೃತ್ತಕ್ಕೆ ಹೊಸ ರೂಪವನ್ನು ಕೊಡಲಾಗುತ್ತಿದೆ. ವೃತ್ತದಲ್ಲಿ ಹೊಸ ವಿನ್ಯಾಸದ ಸಿಗ್ನಲ್ ಲೈಟ್‌ನ್ನು ಬೆಂಗಳೂರು ನಗರದಲ್ಲಿರುವಂತೆ ಪೊಲೀಸ್ ಕ್ಯೂಯಾಸ್ಕ್ ನಿರ್ಮಾಣ ಮಾಡಲಾಗುತ್ತಿದೆ. ನಾಲ್ಕು ದಿಕ್ಕಿಗೆ ಸಿಗ್ನಲ್ ಲೈಟ್ ಹಾಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು, ಕ್ಯೂಯಾಸ್ಕ್ ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಕುಳಿತುಕೊಳ್ಳುವಂತೆ ನಿರ್ಮಿಸುವ ಜೊತೆಗೆ ಸ್ವಯಂಚಾಲಿತವಾಗಿ ಸಿಗ್ನಲ್ ಲೈಟ್ ಬಳಕೆಯಾಗುವಂತೆ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಮನ್ಮುಲ್‌ ನಿರ್ದೇಶಕ ಆರ್.ಎನ್ ವಿಶ್ವಾಸ್, ಶಶಿ ಸೇರಿದಂತೆ ಇತರರು ಇದ್ದರು.