ಕೆಪಿಎಸ್ ಶಾಲೆಯಲ್ಲಿ ಪರೀಕ್ಷೆ ಬರೆದ 367 ವಿದ್ಯಾರ್ಥಿಗಳು

| Published : Mar 26 2024, 01:00 AM IST

ಸಾರಾಂಶ

ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕರ ಪ್ರೌಢಶಾಲೆ ಹಾಗೂ ಬಾಲಕಿಯರ ಶಾಲೆಯ ಎರಡು ಕೇಂದ್ರಗಳಲ್ಲಿ ಮೊದಲನೇ ದಿನ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆದವು.

ಕನ್ನಡಪ್ರಭ ವಾರ್ತೆ ಹನುಮಸಾಗರ

ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕರ ಪ್ರೌಢಶಾಲೆ ಹಾಗೂ ಬಾಲಕಿಯರ ಶಾಲೆಯ ಎರಡು ಕೇಂದ್ರಗಳಲ್ಲಿ ಮೊದಲನೇ ದಿನ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆದವು.

ಕೆಪಿಎಸ್ ಬಾಲಕರ ಶಾಲೆಯಲ್ಲಿ 371ರಲ್ಲಿ 367 ವಿದ್ಯಾರ್ಥಿಗಳು ಹಾಜರಾಗಿದ್ದು, 4 ವಿದ್ಯಾರ್ಥಿಗಳು ಗೈರಾಗಿದ್ದರು. ಈ ಬಾಲಕಿಯರ ಶಾಲೆಯಲ್ಲಿ 316ರಲ್ಲಿ 313 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮುಖ್ಯ ಅಧೀಕ್ಷಕ ಶಿವಣ್ಣ ಮಸರಕಲ್, ಉಪ ಅಧೀಕ್ಷಕರಾದ ಅನಿಲ್ ಸಂಗಮ, ರಾಯಮ್ಮ ಉಕ್ಕಲಿ, ಪ್ರಶ್ನೆಪತ್ರಿಕೆ ಅಧೀಕ್ಷಕ ಎಸ್.ಎ. ಬೀಳಗಿ, ಪಿಎಸ್ಐ ಶ್ರೀಶೈಲ್ ಕುಲಕರ್ಣಿ, ಎಎಸ್ಐ ರಾಮನಗೌಡ ಪಾಟೀಲ, ಪೇದೆಗಳಾದ ಶರಣಪ್ಪ, ಸಿದ್ದು ಭೋವಿ, ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ಕುಷ್ಟಗಿಯಲ್ಲಿ 95 ವಿದ್ಯಾರ್ಥಿಗಳು ಗೈರು:ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನ 15 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಶಾಂತಿಯುತ ನಡೆಯಿತು.ತಾಲೂಕಿನ 64 ಪ್ರೌಢಶಾಲೆಗಳ ಪೈಕಿ 15 ಪರೀಕ್ಷಾ ಕೇಂದ್ರಗಳಲ್ಲಿ 4931 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಈ ಪೈಕಿ 4836 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 95 ವಿದ್ಯಾರ್ಥಿಗಳು ಗೈರಾಗಿದ್ದರು.ಪರೀಕ್ಷಾ ಕೇಂದ್ರದಿಂದ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು, ಎಲ್ಲ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಲಾಗಿತ್ತುಗಳದಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸೆಗಾಗಿ ಸಿಬ್ಬಂದಿ ನಿಯೋಜಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ತಹಸೀಲ್ದಾರರು, ತಾಪಂ ಇಒ, ಬಿಇಒ ನೇತೃತ್ವದ ಮೂರು ಸಂಚಾರಿ ಜಾಗೃತದಳದ ತಂಡಗಳು ಭೇಟಿ ನೀಡಿ ವೀಕ್ಷಿಸಿದವು.ತಾಲೂಕಿನಾದ್ಯಂತ ಪರೀಕ್ಷೆಗಳು, ಶಾಂತಿ-ಸುವ್ಯವಸ್ಥೆಯಿಂದ ನಡೆದಿವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಾರದರ್ಶಕ, ನಕಲುರಹಿತ ಪರೀಕ್ಷೆ ನಡೆಸಲಾಯಿತು ಎಂದು ಎಸ್ ಎಸ್ ಎಲ್ ಸಿ ಪರೀಕ್ಷಾ ನೋಡಲ್ ಅಧಿಕಾರಿ ದಾವಲಸಾಬ ವಾಲಿಕಾರ ತಿಳಿಸಿದ್ದಾರೆ.