ರ್ನಾಟಕ ಕಲಾಶ್ರೀ ಡಾ ಕೆ ಕುಮಾರ್ ಇವರ ಮಾರ್ಗದರ್ಶನ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಮಂಚೇಗೌಡನ ಕೊಪ್ಪಲಿನ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರವು ತಮ್ಮದೇ ಆದ ಕಲೆಮನೆ ಸಭಾಂಗಣದಲ್ಲಿ ಭಾನುವಾರ 39 ನೇ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮ ಏರ್ಪಡಿಸಿತ್ತು.

ಕರ್ನಾಟಕ ಕಲಾಶ್ರೀ ಡಾ ಕೆ ಕುಮಾರ್ ಇವರ ಮಾರ್ಗದರ್ಶನದಲ್ಲಿ ಶಿಷ್ಯೆ ಹಾಗೂ ಇವರ ಪುತ್ರಿಯಾದ ನೃತ್ಯ ವಿಶಾರದೆ ಕೆ ಎಂ ಲೇಖಾ ಭರತನಾಟ್ಯ ರಂಗಪ್ರವೇಶವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ನೃತ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.

ಲೇಖಾ ಅವರು ಶ್ರೀ ಪುರಂದರದಾಸರ ತೋಡಯ ಮಂಗಳದೊಂದಿಗೆ ನೃತ್ಯ ಪ್ರಾರಂಭಿಸಿದರು ರಾಗ ರಾಗ ಮಾಲೀಕ ತಾಳ ತಾಳಮಾಲೀಕ ಗಳಲ್ಲಿ ಸಂಯೋಜಿಸಲಾಗಿತ್ತು, ನಂತರ ರೀತಿ ಗೌಳ ರಾಗದ ಶ್ರೀ ಕೃಷ್ಣ : ಪದವರ್ಣ ವನ್ನು, ಮೈಸೂರು ವಾಸುದೇವಾಚಾರ್ಯರವರಿಂದ ರಚಿತಗೊಂಡಿರುವ ಅಭೇರಿ ರಾಗದ ಭಜರೇ ಮಾನಸ, ಶ್ರೀ ಪುರಂದರದಾಸರಿಂದ ರಚಿತ ಗೊಂಡ ದೇವರ ನಾಮ ಯಾರಿಗೆ ವಧು ವಾಗುವೆ, ಕೊನೆಯಲ್ಲಿ ಸ್ವಾತಿ ತಿರುನಾಳ್ ಮಹಾರಾಜರಿಂದ ರಚಿತಗೊಂಡಿರುವ ಧನಶ್ರೀರಾಗದ ತಿಲ್ಲಾನದೊಂದಿಗೆ ರಂಗ ಪ್ರವೇಶ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ತುಂಬು

ರಂಗ ಮಂದಿರದಲ್ಲಿ ನೆರೆದಿದ್ದ ಕಲಾ ರಸಿಕರ ಮನಸೂರೆಗೊಂಡರು.

ಶಾರದಾವಿಲಾಸ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎ.ವಿ. ಸೂರ್ಯನಾರಾಯಣ ಸ್ವಾಮಿ, ಕರ್ನಾಟಕ ಕಲಾಶ್ರೀ ವಿ ನಂಜುಂಡಸ್ವಾಮಿ,

ರಾಜಕುಮಾರ್ ಭಾರತಿ, ಡಾ. ವಿ. ರಂಗನಾಥ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಡಾ. ಪಿ. ಪದ್ಮಪ್ರಿಯ ಮಣಿಕಂಠನ್,

ಮಧುರೈ ಎಸ್ ಶಂಕರ್ ಪ್ರಸಾದ್, ಬಿ. ಬಾಲಕೃಷ್ಣಯ್ಯ, ಜಮುನಾ ರಾಣಿ ಮಿರ್ಲೆ, ರಂಗನಾಥ್ ಮೈಸೂರು,

ವಿದುಷಿ ಲಲಿತಾ ರಾವ್ ಅತಿಥಿಗಳಾಗಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ವಿದುಷಿ ಡಾ ದೀಪಿಕಾ ಪಾಂಡುರಂಗಿ ನಡೆಸಿಕೊಟ್ಟರು. ಡಾ.ಕೆ. ಕುಮಾರ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಮಾಲತಿ, ಕೆ.ಎಂ. ನಿಧಿ ಇದ್ದರು.