ಕರ್ನಾಟಕ ಬ್ಯಾಂಕ್‌ನಿಂದ 3ಇನ್‌1 ‘ಕೆಬಿಎಲ್‌ ಮೊಬೈಲ್‌ ಪ್ಲಸ್‌’ ಆ್ಯಪ್‌

| Published : Apr 11 2024, 01:45 AM IST / Updated: Apr 11 2024, 11:53 AM IST

ಕರ್ನಾಟಕ ಬ್ಯಾಂಕ್‌ನಿಂದ 3ಇನ್‌1 ‘ಕೆಬಿಎಲ್‌ ಮೊಬೈಲ್‌ ಪ್ಲಸ್‌’ ಆ್ಯಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಬ್ಯಾಂಕ್‌ ಫಿಸ್‌ಡೊಮ್‌ (FISDOM) ಸಂಸ್ಥೆ ಸಹಯೋಗದಲ್ಲಿ ತನ್ನ ಮೊಬೈಲ್‌ ಬ್ಯಾಂಕಿಂಗ್‌ ‘ಕೆಬಿಎಲ್‌ ಮೊಬೈಲ್‌ ಪ್ಲಸ್‌’ ಆ್ಯಪ್‌ ಮೂಲಕ ಉಳಿತಾಯ ಖಾತೆ, ಡಿಮ್ಯಾಟ್‌ ಹಾಗೂ ಟ್ರೇಡಿಂಗ್‌ ಖಾತೆ ನಿರ್ವಹಿಸಲು ಸಾಧ್ಯವಾಗುವಂತೆ ಸೇವೆ ವಿಸ್ತರಿಸುತ್ತಿದೆ.

 ಬೆಂಗಳೂರು :  ಕರ್ನಾಟಕ ಬ್ಯಾಂಕ್‌ ಫಿಸ್‌ಡೊಮ್‌ (FISDOM) ಸಂಸ್ಥೆ ಸಹಯೋಗದಲ್ಲಿ ತನ್ನ ಮೊಬೈಲ್‌ ಬ್ಯಾಂಕಿಂಗ್‌ ‘ಕೆಬಿಎಲ್‌ ಮೊಬೈಲ್‌ ಪ್ಲಸ್‌’ ಆ್ಯಪ್‌ ಮೂಲಕ ಉಳಿತಾಯ ಖಾತೆ, ಡಿಮ್ಯಾಟ್‌ ಹಾಗೂ ಟ್ರೇಡಿಂಗ್‌ ಖಾತೆ ನಿರ್ವಹಿಸಲು ಸಾಧ್ಯವಾಗುವಂತೆ ಸೇವೆ ವಿಸ್ತರಿಸುತ್ತಿದೆ.

ಈ ಆ್ಯಪ್‌ ಮೂಲಕ ಗ್ರಾಹಕರು ಪ್ರಸ್ತುತ ಮೌಲ್ಯವನ್ನು ಅರಿತು ಷೇರು, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅನುಕೂಲ ಮಾಡಿಕೊಡಲಿದೆ. ಬಳಕೆದಾರ ಸ್ನೇಹಿಯಾದ ಇದು ಗ್ರಾಹಕರು ಹೂಡಿಕೆ ಮಾಡಲು ಹಾಗೂ ಟ್ರೆಡಿಂಗ್‌ನಲ್ಲಿ ತೊಡಗಿಸಿಕೊಳ್ಳುವುದನ್ನು ಸರಳವಾಗಿಸಲಿದೆ.

3-ಇನ್-1 ಸೌಲಭ್ಯದ ‘ಕೆಬಿಎಲ್‌ ಮೊಬೈಲ್‌ ಪ್ಲಸ್‌’ ಆ್ಯಪ್‌ ವಿವಿಧ ಆ್ಯಪ್‌ಗಳ ಬಳಕೆಯ ಅಗತ್ಯವನ್ನು ನಿವಾರಿಸುತ್ತದೆ, ಖಾತೆ ನಿರ್ವಹಣೆಯನ್ನು ಸರಳಗೊಳಿಸುವ ಜತೆಗೆ ಒಟ್ಟಾರೆ ಬಳಕೆದಾರರ ಅನುಕೂಲತೆ ಹೆಚ್ಚಿಸುತ್ತದೆ. ಈ ಏಕೀಕೃತ ಪರಿಹಾರದೊಂದಿಗೆ, ಹೂಡಿಕೆದಾರರು ದಕ್ಷತೆಯೊಂದಿಗೆ ವಹಿವಾಟುಗಳನ್ನು ನಿರ್ವಹಿಸಬಹುದು.

ಈ ವೇಳೆ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್, ಫಿಸ್ಡೊಮ್‌ ಸಿಇಒ ಮತ್ತು ಸಹ-ಸಂಸ್ಥಾಪಕ ಎಸ್‌.ವಿ.ಸುಬ್ರಹ್ಮಣ್ಯ ಇದ್ದರು.