ಸಾರಾಂಶ
ಹೂವಿನಹಡಗಲಿ: 2023-24ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಮ.ಮ. ಪಾಟೀಲ್ ಪಿಯು ಕಾಲೇಜಿನ ಅನುಶ್ರೀ ಅಡವಳಿಮಠ 600 ಅಂಕಗಳಿಗೆ 594 ಅಂಕ ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆದಿದ್ದಾರೆ.
ಅನುಶ್ರೀ ಕಲಾ ವಿಭಾಗದಲ್ಲಿ ಕನ್ನಡ-99, ಸಂಸ್ಕೃತ-98, ಐಚ್ಛಿಕ ಕನ್ನಡ 100, ಇತಿಹಾಸ-99, ರಾಜ್ಯಶಾಸ್ತ್ರ-98, ಶಿಕ್ಷಣ-100 ಅಂಕಗಳು ಸೇರಿದಂತೆ ಒಟ್ಟು 600 ಅಂಕಗಳಿಗೆ 594 ಅಂಕ ಪಡೆದಿದ್ದಾರೆ.ಪಟ್ಟಣದ ಮ.ಮ. ಪಾಟೀಲ್ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಶೇ.90.34, ವಾಣಿಜ್ಯ ವಿಭಾಗದಲ್ಲಿ ಶೇ.74, ಕಲಾ ವಿಭಾಗದಲ್ಲಿ ಶೇ.87.05 ಸೇರಿದಂತೆ ಒಟ್ಟು ಶೇ.86.89 ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ಸತೀಶ ತಿಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಭೂಮಿ ರಾಯ್ಕರ್ ಶೇ.96.83, ವಾಣಿಜ್ಯ ವಿಭಾಗದಲ್ಲಿ ಅಮೃತ ಶೇ.98, ಕಲಾ ವಿಭಾಗದಲ್ಲಿ ಅನುಶ್ರೀ ಶೇ.99 ಫಲಿತಾಂಶ ಪಡೆದಿದ್ದಾರೆಂದು ಮಾಹಿತಿ ನೀಡಿದರು.ಅನುಶ್ರೀ ರೈತ ಮಹಿಳೆಯ ಮಗಳಾಗಿದ್ದು, ತಂದೆ ಇಲ್ಲದೇ ತಾಯಿ ಆಶ್ರಯದಲ್ಲೇ ಬೆಳೆದಾಕೆ. ತಾಯಿ ಜೀವನಕ್ಕಾಗಿ 2 ಆಕಳು ಕಟ್ಟಿಕೊಂಡು ಹೈನುಗಾರಿಕೆ ವೃತ್ತಿ ಮಾಡಿಕೊಂಡಿದ್ದಾಳೆ. ಇದರಿಂದ ಬಂದ ಹಣದಲ್ಲಿ ಮಗಳನ್ನು ಓದಿಸಿದ್ದಾರೆ. ಜತೆಗೆ ಅವರ ಸಂಬಂಧಿಕರು ಕೂಡ ಅಭ್ಯಾಸಕ್ಕಾಗಿ ಸಾಕಷ್ಟು ಅನುಕೂಲ ಮಾಡಿದ್ದಾರೆ.
ರಾಜ್ಯಕ್ಕೆ ಪಿಯು ಪರೀಕ್ಷೆಯಲ್ಲಿ 3ನೇ ರ್‍ಯಾಂಕ್ ಬಂದಿರುವುದು ಬಹಳ ಖುಷಿ ತಂದಿದೆ. ತಾಯಿಯ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಮುಂದೆ ಕೆಎಎಸ್ ಕೋಚಿಂಗ್ ಪಡೆದು ಸ್ವರ್ಧಾತ್ಮಕ ಪರೀಕ್ಷೆ ಬರೆಯುವೆ ಎಂದು ಅನುಶ್ರೀ ಹೇಳಿದಳು.ಪಂಚಮಸಾಲಿ ಕಾಲೇಜಿನ ವೀರೇಶಗೆ 5ನೇ ರ್‍ಯಾಂಕ್:ಇಟ್ಟಿಗಿ ಗ್ರಾಮದ ಪಂಚಮಸಾಲಿ ಪ.ಪೂ. ಕಾಲೇಜಿನ ಕಲಾ ವಿಭಾಗದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿ ಗ್ರಾಮದ ಪಿ.ವೀರೇಶ 600 ಅಂಕಗಳಿಗೆ 592 ಅಂಕ ಪಡೆದು ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದಿದ್ದಾನೆ.
ಪಟ್ಟಣದ ಜಿಪಿಜಿ ಸರ್ಕಾರಿ ಪ.ಪೂ ಕಾಲೇಜಿನಲ್ಲಿ 300 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 11 ಡಿಸ್ಟಿಕ್ಸನ್, 89 ಪ್ರಥಮ ಶ್ರೇಣಿ, 63 ದ್ವಿತೀಯ ಶ್ರೇಣಿ ಹಾಗೂ 20 ಉತ್ತೀರ್ಣ ಸೇರಿದಂತೆ 183 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಒಟ್ಟು ಶೇ.61ರಷ್ಟು ಫಲಿತಾಂಶ ಬಂದಿದೆ.ಕಲಾ ವಿಭಾಗದಲ್ಲಿ ಹೇಮಾವತಿ ಶೇ.93.33, ಪುಟ್ಟವ್ವ ಶೇ.92, ವಿಜಯಲಕ್ಷ್ಮೀ ಶೇ.91.66, ಜಯಕುಮಾರ ಶೇ.90, ಸಿ.ಮಣಿಕಂಠ ಶೇ.85.16, ರಂಜಿತಾ ಶೇ.83.16 ಫಲಿತಾಂಶ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಗುರುನಾಯ್ಕ ಶೇ.88.83, ಯು.ಸಹನ ಶೇ.86.5, ವಿ.ಲತಾ ಶೇ.84, ಭೂಮಿಕಾ ಶೇ.83.66, ಎಂ.ಸುದೀಪ್ ಶೇ.79.33, ರಮಾಬಾಯಿ ಶೇ.76 ರಷ್ಟು ಫಲಿತಾಂಶ ಪಡೆದಿದ್ದಾರೆಂದು ಕಾಲೇಜು ಪ್ರಾಚಾರ್ಯ ಕೋರಿ ಹಾಲೇಶ ಮಾಹಿತಿ ನೀಡಿದರು.