ಸಾರಾಂಶ
ನಾಪೋಕ್ಲು: ನಾಲ್ನಾಡ್ ಪ್ಲಾಂಟರ್ಸ್ ರೆಕ್ರಿಯೇಶನ್ ಅಸೋಸಿಯೇಷನ್ (ರಿ) ನಾಪೋಕ್ಲು ವತಿಯಿಂದ ಸಮೀಪದ ಚೆರಿಯಪರಂಬುವಿನ ಜನರಲ್ ಕೆ. ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನವೆಂಬರ್ 12 ರಂದು ಭಾನುವಾರ ಮೂರನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವರಾಜ್ಯಮಟ್ಟದ ಮುಕ್ತ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕ್ಲಬ್‌ನ ಉಪಾಧ್ಯಕ್ಷ ಅರೆಯಡ ರತ್ನ ಪೆಮ್ಮಯ್ಯ ಹೇಳಿದರು.
ನಾಲ್ಕುನಾಡು ಪ್ಲಾಂಟರ್ಸ್ ರಿಕ್ರಿಯೇಶನ್ ಅಸೋಸಿಯೇಷನ್ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮೂರು ವಿಭಾಗಗಳಿದ್ದು 0.22 ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 50,000 ನಗದು ಹಾಗೂ ಟ್ರೋಫಿ ದ್ವಿತೀಯ ಬಹುಮಾನ 30,000 ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ 10,000ರೂ. ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಗುವುದು ಎಂದರು.12 ಬೋರ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 20,000 ಮತ್ತು ಟ್ರೋಫಿ ದ್ವಿತೀಯ ಬಹುಮಾನ ಹದಿನೈದು ಸಾವಿರ ರೂಪಾಯಿ ಮತ್ತು ಟ್ರೋಫಿ ಹಾಗೂ ತೃತೀಯ ಬಹುಮಾನ ಹತ್ತು ಸಾವಿರ ರೂಪಾಯಿ ಮತ್ತು ಟ್ರೋಫಿ ವಿತರಿಸಲಾಗುವುದು.
ಏರ್ ಗನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 5000 ಮತ್ತು ಟ್ರೋಫಿ ದ್ವಿತೀಯ ಬಹುಮಾನ 3000 ಮತ್ತು ಟ್ರೋಫಿ ಹಾಗೂ ತೃತೀಯ ಬಹುಮಾನ 2000 ರು. ಮತ್ತು ಟ್ರೋಫಿಯನ್ನು ವಿತರಿಸಲಾಗುವುದು ಎಂದರು.ಸಹ ಕಾರ್ಯದರ್ಶಿ ಕೇಟೋಳಿರ ಹರೀಶ್ ಪೂವಯ್ಯ ಮಾತನಾಡಿ ನಾಲ್ಕು ನಾಡು ಪ್ಲಾಂಟರ್ಸ್ ಅಸೋಸಿಯೇಷನ್ ಸ್ಥಾಪನೆಯಾಗಿ 25 ವರ್ಷ ಸಂದಿದೆ. ಕಳೆದ ಎರಡು ವರ್ಷಗಳಿಂದ ಅದ್ಧೂರಿಯಾಗಿ ಸ್ಪರ್ಧೆಯನ್ನು ಆಯೋಜಿಸಿದ್ದು ಇದೀಗ ಮೂರನೇ ವರ್ಷದ ಸ್ಪರ್ಧೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಸಹಕರಿಸುವಂತೆ ಕೋರಿದರು. ಉದ್ಘಾಟನಾ ಸಮಾರಂಭ: ನ.12ರಂದು ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಸಿ. ನಾಚಪ್ಪ ಕೋವಿ ಪೂಜೆಯನ್ನು ನೆರವೇರಿಸುವರು .ಅತಿಥಿಗಳಾಗಿ ಠಾಣಾಧಿಕಾರಿ ಮಂಜುನಾಥ್ , ಪ್ಲಾಂಟರ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕಾಂಡಂಡ ಜಯ ಕರುಂಬಯ್ಯ, ಕುಂಜಿಲದ ಕಾಫಿ ಬೆಳೆಗಾರರಾದ ಬಾಚಮಂಡ ವಿಠಲ ಕಾವೇರಪ್ಪ, ನಂಬುಡಮಮಡ ಶಂಭು ಅಪ್ಪಯ್ಯ, ಬಲ್ಲಮಾವಟಿಯ ಕಾಫಿ ಬೆಳೆಗಾರ ಅಪ್ಪಚೆಟ್ಟೋಳಂಡ ಶ್ಯಾಮ್ ಕಾಳಯ್ಯ ಪ್ಲಾಂಟರ್ಸ್ ಕ್ಲಬ್ ನಿರ್ದೇಶಕ ಬಡಕಡ ಸುರೇಶ್ ಬೆಳ್ಳಿಯಪ್ಪ ಉಪಸ್ಥಿತರಿರುವರು.ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್ ಪೊನ್ನಣ್ಣ, ಕ್ಲಬ್ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ,ಎಂಎಲ್ಸಿ ಮಂಡೆಪಂಡ ಸುಜಾ ಕುಶಾಲಪ್ಪ, ಉದ್ಯಮಿ ಚಿಳ್ಳವಂಡ ದರ್ಶನ್ ಚಿನ್ನಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಪೆಮ್ಮಚಂಡ ಅನುಪ್ ಮಾದಪ್ಪ, ತಾಮರ ಕೂಗ್ ರೆಸಾರ್ಟಿನ ಮ್ಯಾನೇಜರ್ ಪಾಲೆಕಂಡ ಸಾಯಿ ಕರುಂಬಯ್ಯ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಲ್ನಾಡ್ ಪ್ಲಾಂಟರ್ಸ್ ರೆಕ್ರಿಯೇಶನ್ ಅಸೋಸಿಯೇಷನ್ (ರಿ) ಕಾರ್ಯದರ್ಶಿ ಚೇಕ್ ಪುವಂಡ ಆಪಚ್ಚು , ಖಜಾಂಚಿ ಕರವಂಡ ಬೆಲ್ಲು ಬೆಳ್ಳಿಯಪ್ಪ, ನಿರ್ದೇಶಕರಾದ ಬೊಳ್ಳಚೆಟ್ಟೀರ ಸುರೇಶ್, ಶಿವಚಳಿಯಂಡ ಅಂಬಿ ಕಾರ್ಯಪ್ಪ , ಚೋಕಿರ ರೋಷನ್, ಕುಂಡಿಯೋಳಂಡ ಬೋಪಣ್ಣ , ಕುಂಡಿಯೋಳಂಡ ಶಮನ್ ಇದ್ದರು.