ತಾಲೂಕಿನ ಕಾಂಚಳ್ಳಿ ಹಾಗೂ ಜಿಆರ್‌ನಗರ ಗ್ರಾಮಗಳಲ್ಲಿ ಪಂಪ್‌ಸೆಟ್ ಮೋಟಾರ್‌ಗಳು ಮತ್ತು ಸೋಲಾರ್‌ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ರಾಮಾಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರುತಾಲೂಕಿನ ಕಾಂಚಳ್ಳಿ ಹಾಗೂ ಜಿಆರ್‌ನಗರ ಗ್ರಾಮಗಳಲ್ಲಿ ಪಂಪ್‌ಸೆಟ್ ಮೋಟಾರ್‌ಗಳು ಮತ್ತು ಸೋಲಾರ್‌ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ರಾಮಾಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳನ್ನು ತಮಿಳುನಾಡಿನ ಮಣಿಕಂಠ (30), ಚಂಗದಾರಹಳ್ಳಿ ಗ್ರಾಮದ ಶ್ರೀರಂಗ (50) ಹಾಗೂ ಮಾರಸ್ವಾಮಿ (28) ಎಂದು ಗುರುತಿಸಲಾಗಿದೆ. ಪ್ರಕರಣದ 4ನೇ ಆರೋಪಿ ಕಾರ್ತಿಕ್ ತಲೆಮರೆಸಿಕೊಂಡಿದ್ದು, ಅವನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆಯ ವಿವರ ಪ್ರಕಾರ, ಏ.17ರಂದು ಚಂಗದಾರಹಳ್ಳಿ ಗ್ರಾಮದ ಮಣಿ ಎಂಬುವವರು ತಮ್ಮ ಜಮೀನಿನ ಮನೆಯಲ್ಲಿ ಇಟ್ಟಿದ್ದ 2 ಪಂಪ್‌ಸೆಟ್ ಮೋಟಾರ್‌ಗಳು ಕಳವಾಗಿರುವ ಬಗ್ಗೆ ರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು ನಾಲ್ವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ 4 ಮೋಟಾರ್‌ಗಳು, 1 ಪಂಪ್, ಸೋಲಾರ್‌ ಫೆನ್ಸಿಂಗ್ ಬ್ಯಾಟರಿ, ಎನರ್ಜೈಸರ್‌, ಚಾರ್ಜರ್‌ ಸೇರಿದಂತೆ ಟಾಟಾ ಏಸ್‌ ಗೂಡ್ಸ್ ವಾಹನ, ಬೈಕ್ ಹಾಗೂ ಟಿವಿಎಸ್ ಎಕ್ಸ್‌ಎಲ್ ಸೂಪರ್‌ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.