ಹೈದರಾಲಿ ರಸ್ತೆ ವಿಸ್ತರಣೆಗೆ 40 ಮರಗಳ ಕಟಾವು ಖಂಡಿಸಿ ಮೌನ ಪ್ರತಿಭಟನೆ

| Published : Apr 19 2025, 01:46 AM IST

ಹೈದರಾಲಿ ರಸ್ತೆ ವಿಸ್ತರಣೆಗೆ 40 ಮರಗಳ ಕಟಾವು ಖಂಡಿಸಿ ಮೌನ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮರಗಳಿಗೆ ನ್ಯಾಯ ಕೊಡುವಂತೆ, ಮೈಸೂರಿಗೆ ಬೇಕಿರುವುದು ಇನ್ನಷ್ಟು ಹಸಿರು ಅಗಲವಾದ ರಸ್ತೆಗಳಲ್ಲ ಎಂಬಿತ್ಯಾದಿ ಪ್ಲೇಕಾರ್ಡ್‌ ಗಳನ್ನು ಹಿಡಿದು ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಮೈಸೂರುನಗರದ ಹೈದರಾಲಿ ರಸ್ತೆ ವಿಸ್ತರಣೆಗೆ 40 ಮರಗಳನ್ನು ಕಟಾವು ಮಾಡಿರುವುದನ್ನು ಖಂಡಿಸಿ ಸಾವಿರಾರು ಜನರು ಶುಕ್ರವಾರ ಸಂಜೆ ಮೌನ ಪ್ರತಿಭಟನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.ಹೈದರಾಲಿ ರಸ್ತೆಯ ಎರಡೂ ಬದಿಗಳಲ್ಲಿ ಮೇಣದ ಬತ್ತಿ, ಪಂಜು ಹಿಡಿದು, ಕಪ್ಪು ಪಟ್ಟಿ ಧರಿಸಿ ನಿಂತು, ಮರದ ಬುಡಗಳಿಗೆ ಪೂಜೆ ಸಲ್ಲಿಸಿ ಹನನಗೊಂಡ ಮರಗಳಿಗೆ ಮರುಕು ವ್ಯಕ್ತಪಡಿಸಿದರು. ಯಾವುದೇ ಘೋಷಣೆವಿಲ್ಲದೇ, ಯಾರ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದೇ ಮಕ್ಕಳು, ಮಹಿಳೆಯರು, ವಿವಿಧ ಧರ್ಮದವರು, ವಿವಿಧ ಸಂಘಟನೆಯವರು ಪಾಲ್ಗೊಂಡು ಮರಗಳ ಹನನವನ್ನು ಖಂಡಿಸಿದರು.ಮರಗಳಿಗೆ ನ್ಯಾಯ ಕೊಡುವಂತೆ, ಮೈಸೂರಿಗೆ ಬೇಕಿರುವುದು ಇನ್ನಷ್ಟು ಹಸಿರು ಅಗಲವಾದ ರಸ್ತೆಗಳಲ್ಲ ಎಂಬಿತ್ಯಾದಿ ಪ್ಲೇಕಾರ್ಡ್‌ ಗಳನ್ನು ಹಿಡಿದು ಗಮನ ಸೆಳೆದರು. ಸಂಜೆ 7 ರಿಂದ 7.15 ರವರೆಗೆ ಮೇಣದ ಬತ್ತಿ ಹಿಡಿದು ನಿಂತರು. ಬಳಿಕ ರಸ್ತೆ ಮಧ್ಯದಲ್ಲಿ ಕುಳಿತರು. ಅಲ್ಲದೆ, ಕಾಳಿಕಾಂಬ ದೇವಸ್ಥಾನದಿಂದ ಎಸ್ಪಿ ಕಚೇರಿ ವೃತ್ತದವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.ಮೈಸೂರು ಗ್ರಾಹಕರ ಪರಿಷತ್, ರಾಷ್ಟ್ರೀಯ ಭ್ರಷ್ಟಾಚಾರ ನಿಮೂರ್ಲನೆ ಹಾಗೂ ಕಾರ್ಯಾಚರಣೆ, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ, ಮೈಸೂರು ಸೈಕ್ಲಿಂಗ್ ಟೀಂ, ಮೈಸೂರು ಅಥ್ಲೆಟಿಕ್ ಕ್ಲಬ್ ಮೊದಲಾದ ಸಂಘಟನೆಯವರು ಭಾಗವಹಿಸಿದ್ದರು.ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ, ಪರಿಸರ ಬಳಗದ ಪರಶುರಾಮೇಗೌಡ, ಲೀಲಾ ಶಿವಕುಮಾರ್, ಕುಸುಮಾ ಆಯರಹಳ್ಳಿ, ಪ್ರೊ.ಎನ್.ಎಸ್. ರಂಗರಾಜು, ಪ್ರೊ. ಕಾಳಚನ್ನೇಗೌಡ, ಉಗ್ರ ನರಸಿಂಹೇಗೌಡ, ಇ. ರತಿರಾವ್, ಬಿ.ಎಸ್. ಪ್ರಶಾಂತ್, ಜಿಎಸ್‌ಎಸ್‌ಎಸ್ ಶ್ರೀಹರಿ ದ್ವಾರಕನಾಥ್, ವಕೀಲ ಅರುಣ್ ಕುಮಾರ್, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘ ಸಿ. ಚಂದನ್ ಗೌಡ, ಪ್ರೊ. ಲತಾ ಕೆ. ಬಿದ್ದಪ್ಪ, ಪ್ರೊ.ಪಿ.ಎನ್. ಶ್ರೀದೇವಿ, ಪ್ರೊ. ವಿಜಯಲಕ್ಷ್ಮಿ, ಡಾ. ನಿಂಗರಾಜು ಮೊದಲಾದವರು ಇದ್ದರು.----ಬಾಕ್ಸ್... ಶಾಸಕ ಶ್ರೀವತ್ಸ ಮೆರವಣಿಗೆ ಹೋರಾಟಗಾರರು ಬೇಸರಶಾಸಕ ಟಿ.ಎಸ್. ಶ್ರೀವತ್ಸ ಅವರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮೆರವಣಿಗೆ ನಡೆಸಿದ್ದು, ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಯಿತು.ಶ್ರೀವತ್ಸ ಅವರು ಸುದ್ದಿಗಾರರೊಂದಿಗೆ ಮಾತಾಡುವ ವೇಳೆ, ಪರಿಸರ ಬಳಗದ ಪರಶುರಾಮೇಗೌಡ ಅವರು ಮೌನವಾಗಿರುವಂತೆ ಹೇಳಿದರು. ಇದು ಶಾಸಕರ ಬೆಂಬಲಿಗರನ್ನು ಕೆರಳಿಸಿತು. ನಾವು ಮೈಸೂರಿಗಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಪ್ರತ್ಯುತ್ತರ ನೀಡಿದರು. ಬಳಿಕ ಎಲ್ಲರೂ ಮೌನ ಪ್ರತಿಭಟನೆ ಮಾಡುವಾಗ ಟಿ.ಎಸ್. ಶ್ರೀವತ್ಸ ಮತ್ತವರ ಬೆಂಬಲಿಗರು ಮೆರವಣಿಗೆ ನಡೆಸಿದರು. ಈ ವೇಳೆ ಹೋರಾಟಗಾರ ಮಹಿಳೆಯರು ರಾಜಕೀಯ ಬೆರಸಬೇಡಿ. ಒಂದು ವಾರದಿಂದ ಕಷ್ಟಪಟ್ಟಿದ್ದೇವೆ. ಹೋರಾಟದಲ್ಲಿ ಗೊಂದಲ ಮೂಡಿಸಬೇಡಿ ಎಂದು ಕಿಡಿಕಾರಿದರು.----ಕೋಟ್ಮರ ಕಟಾವು ಮಾಡಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಯಾರನ್ನೂ ಬಂಧಿಸಿಲ್ಲ. ಕೂಡಲೇ ಮರ ಕಡಿದವರ ಕ್ರಮ ಆಗಬೇಕು.- ಟಿ.ಎಸ್. ಶ್ರೀವತ್ಸ, ಶಾಸಕ