ಸಾರಾಂಶ
ಬುಕ್ಕಾಪಟ್ಟಣ ಗ್ರಾಮದ ಕಾಮಣ್ಣ ಬಿನ್ ದೊಡ್ಡಯ್ಯನಿಗೆ ಸೇರಿದ ಸರ್ವೆ. ನಂ 1441ರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವುದನ್ನ ಪತ್ತೆ ಹಚ್ಚಿದರು.
ಕೊರಟಗೆರೆ: ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 400 ಗ್ರಾಂನಷ್ಟು ಗಾಂಜಾ ಸೊಪ್ಪನ್ನು ಮಧುಗಿರಿ ಹಾಗೂ ಕೊರಟಗೆರೆ ಅಬಕಾರಿ ಅಧಿಕಾರಿಗಳ ತಂಡ ದಾಳಿ ಮಾಡಿರುವ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಸಿ.ಎನ್. ದುರ್ಗ ಹೋಬಳಿಯ ಬುಕ್ಕಾಪಟ್ಟಣ ಗ್ರಾಮದ ಕಾಮಣ್ಣ ಬಿನ್ ದೊಡ್ಡಯ್ಯನಿಗೆ ಸೇರಿದ ಸರ್ವೆ. ನಂ 1441ರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವುದನ್ನ ಖಚಿತ ಮಾಹಿತಿ ಆಧಾರಿಸಿ ಮಧುಗಿರಿ ಅಬಕಾರಿ ಉಪ ಅಧೀಕ್ಷಕ ದೀಪಕ್ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡಿದ ಮಧುಗಿರಿ ಹಾಗೂ ಕೊರಟಗೆರೆ ಅಬಕಾರಿ ಅಧಿಕಾರಿಗಳ ತಂಡ ದಾಳಿ ಮಾಡಿ 400 ಗ್ರಾಂ ಗಾಂಜಾ ಸೊಪ್ಪಿನ ಎಲೆ, ರೆಂಬೆ ಮತ್ತು ತೆನೆ ಮಿಶ್ರಿತ 6 ಹಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ.ಸ್ಥಳಕ್ಕೆ ಮಧುಗಿರಿ ಅಬಕಾರಿ ಉಪ ಅಧೀಕ್ಷಕ ದೀಪಕ್, ಅಬಕಾರಿ ನಿರೀಕ್ಷಕಿ ಕೀರ್ತನ, ಸಿಬ್ಬಂದಿ ಹಮೀದ್ ಬುಡಕಿ, ರಮೇಶ್, ರಾಜೇಶ್, ಜಗದೀಶ್, ಕುಮಾರ್, ನಿಂಗಪ್ಪ, ಮಧು ಸೇರಿದಂತೆ ಇತರರು ಇದ್ದರು.(ಚಿತ್ರ ಇದೆ)೩೧ ಕೊರಟಗೆರೆ ಚಿತ್ರ೦೧;- ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಸೊಪ್ಪುನ್ನ ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು.;Resize=(128,128))
;Resize=(128,128))
;Resize=(128,128))