ಸಾರಾಂಶ
ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಿಸುತ್ತಿರುವ ಬಿಡದಿ ಟೌನ್ ಶಿಪ್ ಯೋಜನೆಯು ರೈತರಿಗೆ ಶಾಪವಾಗಿ ಪರಿಣಮಿಸಿದ್ದು, ಇದರ ವಿರುದ್ಧ ರೈತ ಸಂಘ ಹಾಗೂ ಕನ್ನಡ ಪರ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಲಿವೆ ಎಂದು ರಾಜ್ಯ ರೈತ ಸಂಘದ ಹಿರಿಯ ಮುಖಂಡ ಮಲ್ಲಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ವಿರೋಧಿಸಿ ರೈತರು ಹಾಗೂ ವಿವಿಧ ಸಂಘಟನೆಯ 150ಕ್ಕೂ ಹೆಚ್ಚು ಮಂದಿ ಬೈಕ್ ರ‍್ಯಾಲಿ ಮುಖಾಂತರ ತೆರಳಿ ಪ್ರತಿಭಟಿಸಲಾಗುವುದು. ಯೋಜನೆಯಿಂದಾಗಿ ಸಾಕಷ್ಟು ರೈತರು ಜೀವನಕ್ಕೆ ಆಧಾರವಾಗಿರುವ ವ್ಯವಸಾಯದ ಜಮೀನು ಕಳೆದುಕೊಳ್ಳಲಿದ್ದಾರೆ. ಅವರ ಮುಂದಿನ ಜೀವನಕ್ಕೆ ಹೇಗೆ ನಡೆಸಲು ಸಾಧ್ಯವಾಗಲಿದೆ. ಸರ್ಕಾರ ನೀಡುವ ಪರಿಹಾರದಿಂದ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.ರೈತರಿಗೆ ಒಲಿತು ಮಾಡಬೇಕಿರುವ ಸರ್ಕಾರ, ರೈತರ ಜಮೀನು ಕಸಿದುಕೊಂಡು ಅವರ ಶಾಪಕ್ಕೆ ಗುರಿಯಾಗಲು ಹೊರಟಿದೆ. ಜಮೀನು ವಶಪಡಿಸಿಕೊಳ್ಳುವುದನ್ನು ಸರ್ಕಾರ ತಕ್ಷಣವೇ ಕೈ ಬಿಡಬೇಕು. ಇಲ್ಲವಾದರೆ 9700 ಎಕರೆ ಒಕ್ಕಲೆಬ್ಬಿಸುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮಲ್ಲಯ್ಯ ತಿಳಿಸಿದರು.
ಮುಖಂಡ ಕುಮಾರಸ್ವಾಮಿ ಮಾತನಾಡಿ, ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ಕುರಿತು ಸರ್ಕಾರ ತನ್ನ ಏಕ ಪಕ್ಷೀಯ ನಿರ್ಧಾರವನ್ನು ಕೈಬಿಡಬೇಕು. ಇಲ್ಲವಾದರೆ, ದೇವನಹಳ್ಳಿ ರೈತರ ಪ್ರತಿಭಟನೆ ಮಾದರಿಯಲ್ಲಿಯೇ ಬೈರಮಂಗಲದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.ರಾಜ್ಯ ಸರ್ಕಾರ ಈ ಭಾರಿ ಪ್ರಕಟಿಸಿರುವ ರಾಜ್ಯೋತ್ಸವ ಪ್ರಶಸ್ತಿಗೆ ವಿರೋಧ ಇದೆ. ಜಿಲ್ಲೆಯ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಅವರು ತಮ್ಮ ಕರ್ತವ್ಯದ ವೇಳೆ ಸಾಕಷ್ಟು ಹಣ ಸಂಪಾದನೆ ಮಾಡಿದ್ಧಾರೆ. ಜೊತೆಗೆ, ಸಕಲೇಶಪುರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇಷ್ಟೆಲ್ಲಾ ಇದ್ದರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪಟ್ಟು ಹಿಡಿದು ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿದ್ದಾರೆ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಸಾಕಷ್ಟುಮಂದಿ ರೈತರಪರವಾಗಿ, ಕನ್ನಡ ಭಾಷೆ, ನೆಲ ಜಲದ ಪರವಾಗಿ ಈ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ಧಾರೆ. ಇವರನ್ನು ಪ್ರಶಸ್ತಿಗೆ ಪರಿಗಣಿಸದೆ ಪಕ್ಷದ ಕಾರ್ಯಕರ್ತರಿಗೆ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಸಿದ್ದಯ್ಯ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಲ್ಲಿಸಿದ ಸೇವೆಗೆ ಸರ್ಕಾರ ತಿಂಗಳಿಗೆ ವೇತನ ನೀಡಿದೆ. ವಿಶೇಷವಾಗಿ ಅವರು ಯಾವ ಸಾಧನೆಯು ಮಾಡಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಚಿಲೂರು ಮುನಿರಾಜು, ಪುಟ್ಟಸ್ವಾಮಿ, ತಮ್ಮೇಗೌಡ, ಕೃಷ್ಣಯ್ಯ, ವೆಂಕಟೇಶ್, ವಿಜಿಕುಮಾರ್, ನಾಗರಾಜ್, ಕುಮಾರ್ ಇತರರಿದ್ದರು.
31ಕೆಆರ್ ಎಂಎನ್ 6.ಜೆಪಿಜಿರಾಜ್ಯ ರೈತ ಸಂಘದ ಹಿರಿಯ ಮುಖಂಡ ಮಲ್ಲಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
;Resize=(128,128))
;Resize=(128,128))
;Resize=(128,128))