ಸಾರಾಂಶ
ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಕಾಳಜಿ ಬೆಳೆಸುವ ಜತೆಗೆ ಅವರಲ್ಲಿ ಅಂತರ್ಗತವಾಗಿರುವ ಕರಕುಶಲ ಸಾಮರ್ಥ್ಯ ಹಾಗೂ ಸೃಜನಶೀಲತೆ ಅಭಿವ್ಯಕ್ತಗೊಳಿಸಲು ಶಾಲೆಯ ಕಲಾ ಮತ್ತು ಕರಕುಶಲ ವಿಭಾಗದ ಶಿಕ್ಷಕ ವಿನೋದ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ವಿವಿಧ ಗಣೇಶನ ಮೂರ್ತಿ ತಯಾರಿಸಿದರು.
ಗಂಗಾವತಿ:
ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಗಣೇಶೋತ್ಸವದ ಅಂಗವಾಗಿ 4000 ವಿದ್ಯಾರ್ಥಿಗಳು 5000 ದೀಪಗಳಿಂದ ಬೃಹತ್ ಗಾತ್ರದ ಗಣೇಶನ ಆಕೃತಿ ರಚಿಸಿ ಗಮನ ಸೆಳೆದಿದ್ದಾರೆ.ಗಣೇಶನನ್ನು ರಚಿಸಿ ದೀಪ ಬೆಳೆಗಿಸಿ ಗಣೇಶನಿಗೆ ವೈಶಿಷ್ಟತೆಯಿಂದ ಆಹ್ವಾನಿಸಿದ್ದಾರೆ. ಶಾಲೆಯ ಪೂರ್ವ ಪ್ರಾಥಮಿಕದಿಂದ 8ನೇ ತರಗತಿಯ 4000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪರಿಸರ ಸ್ನೇಹಿ ಗಣೇಶನ ಮೂರ್ತಿ ತಯಾರಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಕಾಳಜಿ ಬೆಳೆಸುವ ಜತೆಗೆ ಅವರಲ್ಲಿ ಅಂತರ್ಗತವಾಗಿರುವ ಕರಕುಶಲ ಸಾಮರ್ಥ್ಯ ಹಾಗೂ ಸೃಜನಶೀಲತೆ ಅಭಿವ್ಯಕ್ತಗೊಳಿಸಲು ಶಾಲೆಯ ಕಲಾ ಮತ್ತು ಕರಕುಶಲ ವಿಭಾಗದ ಶಿಕ್ಷಕ ವಿನೋದ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ವಿವಿಧ ಗಣೇಶನ ಮೂರ್ತಿ ತಯಾರಿಸಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, ಮಕ್ಕಳಲ್ಲಿ ಕರಕುಶಲತೆ ಬರಲಿ, ಶಿಕ್ಷಣದ ಜತೆಗೆ ಹಬ್ಬ-ಹರಿದಿನ, ರಾಷ್ಟ್ರೀಯ ಹಬ್ಬಗಳ ಬಗ್ಗೆ ತಿಳಿದುಕೊಳ್ಳಲಿ ಎನ್ನುವ ಉದ್ದೇಶದಿಂದ ಮಕ್ಕಳಿಗೆ ಈ ಕಲೆ ರೂಪಿಸಿದೆ ಎಂದರು.ಕಾರ್ಯಕ್ರಮಗಳಲ್ಲಿ ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ಆಡಳಿತ ನಿರ್ದೇಶಕ ಎಚ್.ಕೆ. ಚಂದ್ರಮೋಹನ್, ಸಿಇಒ ನರೇಶ ವೈ, ಶೈಕ್ಷಣಿಕ ಮುಖ್ಯಸ್ಥೆ ಕೃಷ್ಣವೇಣಿ, ಜಿ ನಾಗೇಶ್ವರ್‌ರಾವ್, ಲಕ್ಷ್ಮೀ ಜೆ, ಕಾಳೇಶ ಎನ್. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.