ಸಾರಾಂಶ
ಸವಣೂರು: ಆಯುಷ್ಮಾನ್ ಆರೋಗ್ಯ ಮಂದಿರ ಯೋಜನೆಯಲ್ಲಿ ತಲಾ ₹55 ಲಕ್ಷ ಅನುದಾನದಂತೆ ಶಿಗ್ಗಾಂವಿ- ಸವಣೂರು ವಿಧಾನಸಭಾ ಕ್ಷೇತ್ರಕ್ಕೆ 46 ಆರೋಗ್ಯ ಕೇಂದ್ರಗಳನ್ನು ನೀಡಲಾಗಿದ್ದು, ಅದರಲ್ಲಿ ಸವಣೂರು ತಾಲೂಕಿಗೆ 21 ಕೇಂದ್ರಗಳನ್ನು ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.ತಾಲೂಕಿನ ಚಳ್ಳಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಆಯುಷ್ಮಾನ್ ಆರೋಗ್ಯ ಮಂದಿರದ ಉದ್ಘಾಟನೆ ನೆರವೇರಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.2013ರಲ್ಲಿ ಜಾರಿಗೆ ಬಂದ ಕೇಂದ್ರದ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದರೂ ಅಂದಿನ ಸರ್ಕಾರ ಕಾಯ್ದೆಯನ್ನು ಪಾಸ್ ಮಾಡಿ ಒಂದು ರಾಜ್ಯದಲ್ಲಿಯೂ ಪ್ರಾರಂಭ ಮಾಡಿರಲಿಲ್ಲ. ನಂತರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬಂದ ನಂತರ ಮೊದಲ ಅಧಿವೇಶನದಲ್ಲಿಯೆ ಅನುಮೋದನೆ ನೀಡಿ 30 ರಾಜ್ಯಗಳೊಂದಿಗೆ ವಿನಿಯೋಗ ಮಾಡಿಕೊಂಡು ಯೋಜನೆಯನ್ನು ಜಾರಿಗೆ ತಂದು ಜನರಿಗೆ ಅನುಕೂಲ ಕಲ್ಪಿಸಲಾಗಿದೆ.
ಅಕ್ಕಿಯನ್ನು ಮಾರುಕಟ್ಟೆಯಲ್ಲಿ ₹40 ಮಾರಾಟ ಮಾಡುತ್ತಿರುವಾಗ ಎಫ್‌ಸಿಐನಿಂದ ₹34ಕ್ಕೆ ಮಾರಾಟ ಮಾಡಲಾಗುತ್ತಿತ್ತು. ರಾಜ್ಯ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರ ಕೋರಿಕೆ ಮೇರೆಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಪ್ರತಿ ಕೆಜಿ ಅಕ್ಕಿಗೆ ₹22.5ರಂತೆ ಕೇಂದ್ರ ಪೂರೈಸಲು ತಯಾರಾಗಿದೆ. ಆದರೆ, ಇದುರೆಗೂ ರಾಜ್ಯ ಸರ್ಕಾರ ಖರೀದಿ ಮಾಡಿಲ್ಲ. ತ್ವರಿತವಾಗಿ ಖರೀದಿಸಿ ಪೂರೈಸುವಂತೆ ತಿಳಿಸಿದರು.ಸೋಸಿಯಲ್ ಸಂಸ್ಥೆ ಆಡಿಟ್ ಮಾಹಿತಿ ಪ್ರಕಾರ ದೇಶಾದ್ಯಂತ ವಿದ್ಯುತ್ ಉತ್ಪಾದನೆ ಉತ್ತಮವಾಗಿದೆ. ದೇಶದಲ್ಲಿ ಒನ್ ಗ್ರಿಡ್ ಒನ್ ನೇಷನ್ ಯೋಜನೆಯನ್ನು ಜಾರಿಗೊಳಿಸಿ ಎಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತದೆಯೋ ಅಲ್ಲಿಂದ ಎಲ್ಲ ಕಡೆಗೆ ಸರಬರಾಜು ಮಾಡುವ ಅನುಕೂಲವಾಗಲಿದೆ ಎನ್ನುವ ಉದ್ದೇಶದಿಂದ 2015- 16 ಜಾರಿಗೆ ತರಲಾಗಿದೆ.
ಬಸವರಾಜ ಬೊಮ್ಮಾಯಿ ಅವರು ಶಾಸಕರಿದ್ದಾಗ ಕ್ಷೇತ್ರ ಬಹುತೇಕ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ವರದಾ ಮತ್ತು ಬೇಡ್ತಿ ನದಿಗಳ ಜೋಡಣೆಗೆ ರಾಜ್ಯ ಸರ್ಕಾರ ಡಿಪಿಆರ್ ತಯಾರಿಸಿ ಸಚಿವ ಸಂಪೂಟದ ಪರವಾನಗಿ ಪಡೆದುಕೊಂಡು ಬಂದರೆ ಕೇಂದ್ರದಿಂದ ಸಹಕಾರವನ್ನು ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಬಿಜೆಪಿ ಮುಖಂಡ ಭರತ ಬೊಮ್ಮಾಯಿ, ತಹಸೀಲ್ದಾರ್ ಭರತರಾಜ್ ಕೆ.ಎನ್., ಇಒ ಬಿ.ಎಸ್. ಸಿಡೇನೂರ, ಟಿಚ್‌ಒ ಚಂದ್ರಕಲಾ ಜೆ., ಗ್ರಾಪಂ ಅಧ್ಯಕ್ಷ ಶ್ರೀಕಾಂತ ದೇವಿಹೊಸೂರ, ಗ್ಯಾರಂಟಿ ಯೋಜನೆ ಅಧ್ಯಕ್ಷ ಸುಭಾಸ ಮಜ್ಜಗಿ, ಗ್ರಾಪಂ ಸದಸ್ಯರಾದ ಲಕ್ಷ್ಮವ್ವ ನಾಯಕ, ಮಹದೇವಪ್ಪ ಮಲ್ಲಾಡದ, ನವೀನ ಸವಣೂರ, ಅನಿಲಕುಮಾರ ಹೊಂಬಳದ, ಸವಣೂರು ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಶಂಕರಗೌಡ ಪಾಟೀಲ ಸೇರಿದಂತೆ ಸಾರ್ವಜನಿಕರು, ಇಲಾಖೆ ಸಿಬ್ಬಂದಿ ಇದ್ದರು. ನಾಮಫಲಕ ಸರಿಪಡಿಸಲು ಸೂಚನೆಸವಣೂರು ತಾಲೂಕಿನ ಚಳ್ಳಾಳ ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನೂತನವಾಗಿ ನಿರ್ಮಾಣಗೊಂಡ ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟಡದ ಉದ್ಘಾಟನೆಗೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಟ್ಟಡದ ಮೇಲೆ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಎಂದು ಬರೆಸಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಗರಂ ಆಗಿ ತರಾಟೆಗೆ ತೆಗೆದುಕೊಂಡು ಆಯುಷ್ಮಾನ್ ಆರೋಗ್ಯ ಮಂದಿರ ಎಂದು ನಾಮಫಲಕ ಸರಿಪಡಿಸುವಂತೆ ಸೂಚನೆ ನೀಡಿದರು.