ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದ ಮಂತ್ರಿಯಾಗಿ ನಾನು ಹೇಳುತ್ತಿದ್ದೇನೆ ನಮ್ಮ ಸರಕಾರದ ೫ ಗ್ಯಾರೆಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವವರೆಗೂ ಮುಂದುವರೆಯುತ್ತದೆ, ೨೦೨೮ ರಲ್ಲಿಯೂ ಪುನಃ ನಾವೇ ಅಧಿಕಾರಕ್ಕೆ ಬರುತ್ತೇವೆ ಆಗಲೂ ಮುಂದುವರೆಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಭರವಸೆ ನೀಡಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯೊಬ್ಬರು ಜಿ-ಮೇಲ್ ಮಾಡಿದ್ದ ವಿಚಾರವಾಗಿ ಡಿ.ಕೆ.ಶಿವಕುಮಾರ್ ಶಕ್ತಿ ಯೋಜನೆ ಬಗ್ಗೆ ಹೇಳಿದ್ದಾರೆ ಹೊರತು ಯಾವುದೇ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಅಲ್ಲ, ಮಲ್ಲಿಕಾರ್ಜುನ ಖರ್ಗೆಯವರಿಗೂ ಖಂಡಿಸಿದ್ದರು, ಇದೀಗ ಸಿಎಂ, ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ, ಎಲ್ಲವೂ ಬಗಹರಿದಿದೆ ಎಂದರು.ಮುದುವಾಡಿ ಶಾಲೆ ಜಾಗ ವಿವಾದ
ವಿಜಯಪುರ ವಕ್ಫ್ ವಿಚಾರವಾಗಿ, ರೈತರ ಜಾಗವನ್ನು ಯಾರೂ ಪಡೆಯುವುದಕ್ಕೆ ಸಾಧ್ಯವಿಲ್ಲ ಎನ್ನುವ ಬಗ್ಗೆ ಈಗಾಗಲೇ ಸಿಎಂ ಹಾಗೂ ಇಲಾಖೆ ಸಚಿವರು ಸ್ಪಷ್ಟಪಡಿಸಿದ್ದಾರೆ, ರೈತರ ಜಮೀನು ಅವರ ಬಳಿಯೇ ಉಳಿಯುತ್ತದೆ. ಆದರೆ, ವಿನಾಕಾರಣ ಬಿಜೆಪಿ, ಜೆಡಿಎಸ್‌ನವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕೋಲಾರ ಜಿಲ್ಲೆಯ ಮುದುವಾಡಿ ಶಾಲೆಯ ಜಾಗ ವಕ್ಫ್ ಬೋರ್ಡ್ ಮಂಜೂರಾಗಿರುವ ವಿಚಾರ ಕೈತಪ್ಪಿನಿಂದ ಅಥವಾ ಯಾರಿಂದಾದರೂ ಆಗಿದ್ದರೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ ಎಂದರು.ಕಣ್ಣೀರು ಹಾಕುವ ಕಲೆಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯಥಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಖಿಲ್ ಕಣ್ಣೀರು ಹಾಕಿದ್ದಾರೆ ಎಂದರೆ ಅದು ಒಂದು ಕಲೆ. ಕಣ್ಣೀರು ಹಾಕುವುದು ಸ್ವಲ್ಪ ಜನರಿಗೆ ಮಾತ್ರವೇ ಬರುತ್ತದೆ. ನಮಗೆ ಅಂತಹ ಕಲೆ ಗೊತ್ತಿಲ್ಲ. ಅವರು ಭಾವನಾತ್ಮಕವಾಗಿ ಮತ ಕೇಳಿರಬಹುದು.ಅರಣ್ಯ ಭೂಮಿ ವಿಚಾರವಾಗಿ ಶ್ರೀನಿವಾಸಪುರ ಭಾಗದಲ್ಲಿ ಜಂಟಿ ಸರ್ವೇ ನಡೆಯುವ ಬಗ್ಗೆ ಸಿಎಂ, ನಾನೂ ಸಹ ಈ ಹಿಂದೆಯೇ ಆದೇಶ ನೀಡಿದ್ದೇವೆ. ಸರ್ವೇ ಬಳಿಕ ಅಂತಿಮ ತೀರ್ಮಾನವಾಗಲಿದೆ. ಕಾಂಗ್ರೆಸ್ ಸರಕಾರ ಯಾವುದೇ ಕಾರಣಕ್ಕೂ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳ ವರ್ಗಾವಣೆ ಮಾಡುವುದಿಲ್ಲ ಎಂದರು.