ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೆರವಣಿಗೆ ವೇಳೆ ಹೃದಯಾಘಾತದಿಂದ ಮೃತಪಟ್ಟ ನವನಗರದ ಬಾಂಬೆ ಕಾಲೋನಿ ನಿವಾಸಿ, ಕಾಂಗ್ರೆಸ್ ಕಾರ್ಯಕರ್ತೆ ಫಾತಿಮಾ ತುಪ್ಪದ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ, ಯುವ ಮುಖಂಡರಾದ ಹೊಳಬಸು ಶೆಟ್ಟರ ಮುಖ್ಯಮಂತ್ರಿಗಳು ಕಳಿಸಿದ 5 ಲಕ್ಷ ಚೆಕ್‌ನ್ನು ಕುಟುಂಬದವರಿಗೆ ವಿತರಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೆರವಣಿಗೆ ವೇಳೆ ಹೃದಯಾಘಾತದಿಂದ ಮೃತಪಟ್ಟ ನವನಗರದ ಬಾಂಬೆ ಕಾಲೋನಿ ನಿವಾಸಿ, ಕಾಂಗ್ರೆಸ್ ಕಾರ್ಯಕರ್ತೆ ಫಾತಿಮಾ ತುಪ್ಪದ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ, ಯುವ ಮುಖಂಡರಾದ ಹೊಳಬಸು ಶೆಟ್ಟರ ಮುಖ್ಯಮಂತ್ರಿಗಳು ಕಳಿಸಿದ ₹5 ಲಕ್ಷ ಚೆಕ್‌ನ್ನು ಕುಟುಂಬದವರಿಗೆ ವಿತರಿಸಿದರು.ಈ ವೇಳೆ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಯೂಬ್ ಪುಣೇಕರ, ರಸೂಲಸಾಬ ಪೆಂಡಾರಿ, ಜಾಫರ್ ಬೇಪಾರಿ, ನಾಗರಾಜ ಹದ್ಲಿ, ಬುಡಾ ಅದ್ಯಕ್ಷ ರಜಾಕ್ ಬೇನೂರ, ಸಿಕಂದರ್ ಅಥಣಿ, ದ್ಯಾಮಣ್ಣ ಗಾಳಿ, ಆರ್.ಎ. ಪಟ್ಟಣದ, ಅಮೀನಸಾಬ ರಕ್ಕಸಗಿ, ವೈ.ವೈ. ತಿಮ್ಮಾಪುರ, ಮಂಜು ಕಾಜೂರ, ರಾಜೀವಗಾಂಧಿ ಕಾಲೋನಿಯ ಜಮಾತ ಪದಾಧಿಕಾರಿಗಳು ಇದ್ದರು.