ಸಾರಾಂಶ
ತಾಲೂಕಿನ ಪಿಜಿಪಾಳ್ಯ ಸಮೀಪ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ 16 ಕೇಜಿ ಗಂಧದ ಮರಗಳನ್ನು ಸಾಗಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಿರುವುದು ಸಾಬಿತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಾಲ ಸೆರೆವಾಸ, ₹50 ಸಾವಿರ ದಂಡ ವಿಧಿಸಿದೆ.
ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ತೀರ್ಪು
ಕನ್ನಡಪ್ರಭ ವಾರ್ತೆ ಹನೂರು ತಾಲೂಕಿನ ಪಿಜಿಪಾಳ್ಯ ಸಮೀಪ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ 16 ಕೇಜಿ ಗಂಧದ ಮರಗಳನ್ನು ಸಾಗಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಿರುವುದು ಸಾಬಿತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಾಲ ಸೆರೆವಾಸ, ₹50 ಸಾವಿರ ದಂಡ ವಿಧಿಸಿದೆ.ಕೊಳ್ಳೇಗಾಲದ ಅಪರ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಅವರು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಅರಣ್ಯ ಸಿಬ್ಬಂದಿಗಳಾದ ರಸುಲ್ ವಾಲಿಕರ್ ಮತ್ತು ಸಿಬ್ಬಂದಿ ಪಿಜಿಪಾಳ್ಯ ವಲಯದ ವ್ಯಾಪ್ತಿಯ ಲೊಕ್ಕನಹಳ್ಳಿ ಕಳ್ಳಬೇಟೆ ಶಿಬಿರದಿಂದ ಲೊಕ್ಕನಹಳ್ಳಿ ಸೋಲಾರ್ ಗೇಟ್ ಕಡೆ ಹೋಗುವ ರಸ್ತೆ ಮಧ್ಯದಲ್ಲಿ 2020ರ ಸೆ.16 ರಂದು ತೆರಳುತ್ತಿದ್ದಾಗ ನಾಲ್ವರು ಆರೋಪಿಗಳು 16 ಕೇಜಿ ಹಸಿ ಗಂಧದ ಮರದ ತುಂಡುಗಳು ಹಾಗೂ ಚಕ್ಕೆಗಳನ್ನು ಒಂದು ಬ್ಯಾಗಿನಲ್ಲಿ ಸಾಗಣೆ ಮಾಡುತ್ತಿದ್ದಾಗ ಹಿಡಿದು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಂಡಿದ್ದರು.
ಈ ಸಂಬಂಧ ಅಂದಿನ ಎಸಿಎಫ್ ವನಿತಾ ಅವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪ್ರಕರಣ ಸಂಬಂಧ ಮೊದಲ ಆರೋಪಿ ಮಾದೇವ ಅಲಿಯಾಸ್ ಕೊಣ್ಣುರ, ಮೂರನೇ ಆರೋಪಿ ರಂಗನಿಗೆ ಐದು ವರ್ಷ ಸರೆವಾಸ, ಐವತ್ತು ಸಾವಿರ ತಂಡ ವಿಧಿಸಿ ಆದೇಶಿಸಲಾಗಿದೆ.ಇನ್ನೂ ಪ್ರಕರಣದ ಎರಡನೇ ಆರೋಪಿ ಕುಂಬೇಗೌಡ ವಿಚಾರಣೆ ಸಮಯದಲ್ಲಿ ಮೃತಪಟ್ಟಿರುವುದರಿಂದ ಹಾಗೂ ನಾಲ್ಕನೇ ಆರೋಪಿ ಅಬ್ದುಲ್ ಜಮೀರ್ ಅನ್ನು ಅರಣ್ಯ ಕಾಯ್ದೆ ಕಾಲಂ 87 ರಡಿ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಇಬ್ಬರಿಗೆ ಶಿಕ್ಷೆ ವಿಧಿಸಲಾಗಿದೆ.