ಕನಕ ಭವನ ನಿರ್ಮಾಣಕ್ಕೆ ₹ 50 ಲಕ್ಷ ಬಿಡುಗಡೆ

| Published : Oct 05 2025, 01:01 AM IST

ಕನಕ ಭವನ ನಿರ್ಮಾಣಕ್ಕೆ ₹ 50 ಲಕ್ಷ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕನಕ ಭವನ ನಿರ್ಮಾಣಕ್ಕೆ ಹಿರಿಯರು ಜಾಗ ಗುರುತು ಮಾಡಿದರೆ ಭೂಮಿ ಪೂಜೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದರು.

ಅಣ್ಣಿಗೇರಿ:

ಇಲ್ಲಿನ ಕನಕ ಭವನಕ್ಕೆ₹ 50 ಲಕ್ಷ ಸೇರಿದಂತೆ ಕ್ಷೇತ್ರದ ಗ್ರಾಮೀಣ ದೇವಸ್ಥಾನಗಳ ಅಭಿವೃದ್ಧಿ ಹಾಗೂ ಇತರೆ ಕಾಮಗಾರಿಗಳಿಗೆ ₹ 4 ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ತಿಳಿಸಿದರು.

ಪಟ್ಟಣದ ಹುಡೇದ ಬೈಲಿನ ಭರಮಲಿಂಗೇಶ್ವರ ಹಾಗೂ ನಂದೀಶ್ವರ ಭಜನಾ ಸಂಘದ ಲಕ್ಷ್ಮಿದೇವಿ ಮೂರ್ತಿ, ನಂದೀಶ್ವರ, ಟಗರಿನ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನಕ ಭವನ ನಿರ್ಮಾಣಕ್ಕೆ ಹಿರಿಯರು ಜಾಗ ಗುರುತು ಮಾಡಿದರೆ ಭೂಮಿ ಪೂಜೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕರು, ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದಾಸೋಹಮಠದ ಡಾ. ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗಪ್ಪ ದಳವಾಯಿ, ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡ್ರು, ಸ್ಥಾಯಿ ಸಮಿತಿ ಚೇರಮನ್‌ ಮುದಕಣ್ಣ ಕೊರವರ, ಅಮೀನಬೇಗಂ ಬಾರೀಗಿಡದ, ಸದಸ್ಯರಾದ ಗಂಗಾ ಕರೆಂಟ್‌ನವರ, ದ್ಯಾಮಣ್ಣ ಕೊಗ್ಗಿ, ಷಣ್ಮುಖ ಗುರಿಕಾರ, ಚಂದ್ರು ಕರಡಿ, ವಿನಾಯಕ ನಲವಡಿ, ನಿಂಗಪ್ಪ ಬಡೆಪ್ಪನವರ, ಯಲ್ಲಪ್ಪ ಚಳ್ಳನವರ, ಹನುಮಂತಪ್ಪ ಕಂಬಳಿ, ಮಂಜುನಾಥ ಮಾಯಣ್ಣನವರ, ಭಗವಂತಪ್ಪ ಪುಟ್ಟನವರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.