ಸಾರಾಂಶ
ಹಾವೇರಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಶಕ್ತಿ ಯೋಜನೆಯಡಿ 500 ಕೋಟಿ ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಅವರು ಬಸ್‌ಗೆ ಪೂಜೆ ಸಲ್ಲಿಸಿ ಮಹಿಳಾ ಪ್ರಯಾಣಿಕರಿಗೆ ಸಿಹಿ ಹಂಚಿ ಶುಭ ಕೋರಿದರು.ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಹಾಗೂ ಬಾಲ ಕಾರ್ಮಿಕ ಯೋಜನಾ ಸಂಸ್ಥೆ ಸಹಯೋಗದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ಹಾಗೂ ನಿರ್ಮೂಲನೆ ಕುರಿತು ಆಯೋಜಿಸಲಾದ ಬೀದಿನಾಟಕಕ್ಕೆ ಚಾಲನೆ ನೀಡಿದರು. ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಂ.ಎಂ. ಹಿರೇಮಠ, ತಾಲೂಕು ಅಧ್ಯಕ್ಷ ಎಂ.ಎಂ. ಮೈದೂರ, ರಮೇಶ ಮಡಿವಾಳರ ಹಾಗೂ ಪ್ರಭುಗೌಡ ಬಿಷ್ಟನಗೌಡ್ರ, ಮುಖಂಡರಾದ ಮಾದೇಗೌಡ ಗಾಜಿಗೌಡ್ರ, ಗಣೇಶಪ್ಪ ದೊಡ್ಡಮನಿ, ಪ್ರಕಾಶಗೌಡ ಪಾಟೀಲ, ಶೋಭಾ ಭಜಂತ್ರಿ, ಶಿಲ್ಪಾ ಬಡಮ್ಮನವರ, ಶೈನಾಜ್ ಉಪ್ಪಿಹುಣಸಿ, ಪಿ.ಎಂ. ದುರಗಣ್ಣವರ, ಉಮೀದ್ ನದಾಫ್, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ವಿಜಯಕುಮಾರ್ ಹಾಗೂ ಅಶೋಕ ಪಾಟೀಲ, ಸಾರಿಗೆ ನಿಯಂತ್ರಕ ಬಿ.ಆರ್. ತಡಸದ, ಜಿಲ್ಲಾ ಕಾರ್ಮಿಕ ಅಧಿಕಾರಿ ತರನ್ನುಮ ಬೆಂಗಾಲಿ ಇದ್ದರು.ಗುರುಗಳ ಕೃಪಾಶೀರ್ವಾದದಿಂದ ಬದುಕು ಸಾರ್ಥಕ
ರಾಣಿಬೆನ್ನೂರು: ಗುರುಗಳ ಕೃಪಾಶೀರ್ವಾದಿಂದ ಬದುಕು ಸಾರ್ಥಕವಾಗುತ್ತದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ತಿಳಿಸಿದರು.ತಾಲೂಕಿನ ಖಂಡೇರಾಯನಹಳ್ಳಿ ಸಿದ್ಧಾಶ್ರಮದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು. ಸಾಧು, ಶರಣರ ಪಾದದಲ್ಲಿ ಪಾಪ- ಕರ್ಮಗಳನ್ನು ದಹಿಸುವ ಶಕ್ತಿಯಿದೆ. ಮನುಷ್ಯನಿಗೆ ಯಾವ ತೊಂದರೆಯಾದರೂ ಅದನ್ನು ಹೋಗಲಾಡಿಸಲು ಪಾದ ಸ್ಪರ್ಶವೇ ಕಾರಣವಾಗಿದೆ ಎಂದರು.ಶ್ರೀಮಠದ ಗುರು ನಾಗರಾಜಾನಂದ ಸ್ವಾಮೀಜಿ ಮಾತನಾಡಿದರು. ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪ ಗೌಡ್ರ, ಜನಾರ್ಧನ ಕಡೂರ, ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ, ಡಾ. ಸುನಿತಾ, ಚನವೀರಗೌಡ ಪಾಟೀಲ, ಅರುಣಸ್ವಾಮಿ ಹಿರೇಮಠ, ಗೋಪಾಲ ಕೊಡ್ಲೇರ, ಶಿವಣ್ಣ ಬಣಕಾರ, ಗುಡ್ಡಪ್ಪ ಹೆಡಿಯಾಲ, ಪ್ರಕಾಶ ಚನ್ನಗೌಡ್ರ, ಗುರುಶಾಂತಪ್ಪ ಬಾಗಿಲದವರ, ಜಯಪ್ಪ ನೆಲವನ್ನಿ, ಮೈಲಾರೆಪ್ಪ ಸೋಮಲಾಪುರ, ಬಸವರಾಜ ಕಮಲಾಪುರ, ಬೀರೇಶ ಹರಿಹರ, ಆಕಾಶ ಗೌಡ್ರ, ಶಾಂತಮ್ಮ ಬಾಗಿಲದವರ, ಗಂಗಮಾಳವ್ವ ಹೆಡಿಯಾಲ, ಮಂಜುಳಾ ಪಾಟೀಲ, ಸುಮಾ ಚನ್ನಗೌಡ್ರ ಮತ್ತಿತರರಿದ್ದರು.