ಮಾರುಕಟ್ಟೆ ನಿರ್ಮಾಣಕ್ಕೆ 51.50 ಲಕ್ಷ ರು. ಅನುಮೋದನೆ: ಶಾಸಕ ಕೆ.ಎಂ.ಉದಯ್

| Published : Feb 28 2025, 12:46 AM IST

ಮಾರುಕಟ್ಟೆ ನಿರ್ಮಾಣಕ್ಕೆ 51.50 ಲಕ್ಷ ರು. ಅನುಮೋದನೆ: ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡ ಗ್ರಾಪಂ ನಿಡಘಟ್ಟ ಗ್ರಾಮದಲ್ಲಿ ಹಳ್ಳಿ ಸಂತೆ ಯೋಜನೆ ಅಡಿ ವಿಲೇಜ್ ಹಾತ್ ಮಾದರಿಯಲ್ಲಿ ಮಾರುಕಟ್ಟೆಗಳನ್ನು ನಿರ್ಮಿಸಿ ಅಗತ್ಯ ಮೂಲ ಸೌಲಭ್ಯಕ್ಕೆ ಕ್ರಮ ವಹಿಸಲಾಗಿದೆ. ಕೆ.ಆರ್.ಐ.ಡಿ.ಎಲ್. ಸಂಸ್ಥೆ ಮಾರುಕಟ್ಟೆ ಪ್ರಾಂಗಣವನ್ನು ಪುನರ್ ವಿನ್ಯಾಸಗೊಳಿಸುವ ಮೂಲಕ ಸೌಲಭ್ಯ ಕಲ್ಪಿಸಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಡಘಟ್ಟ ಗ್ರಾಮದಲ್ಲಿ ಹಳ್ಳಿ ಸಂತೆ ಯೋಜನೆಯಡಿ ಮಾರುಕಟ್ಟೆ ನಿರ್ಮಾಣ ಮಾಡಲು ಸರ್ಕಾರ 51.50 ಲಕ್ಷ ರು. ಅನುಮೋದನೆ ನೀಡಿದೆ ಎಂದು ಶಾಸಕ ಕೆ.ಎಂ.ಉದಯ್ ಗುರುವಾರ ಹೇಳಿದರು.

ಗ್ರಾಮದ ಸಂತೆ ಮೈದಾನದಲ್ಲಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಜನಪ್ರತಿನಿಧಿಗಳೊಂದಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಮಂಡ್ಯ ತಾಲೂಕು ದುದ್ದ ಗ್ರಾಮದಲ್ಲಿ ಹಳ್ಳಿ ಸಂತೆ ಯೋಜನೆಯಡಿ ಮಾರುಕಟ್ಟೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಅಲ್ಲಿ ನಿವೇಶನದ ಸಮಸ್ಯೆ ಇರುವುದರಿಂದ ನಿಡಘಟ್ಟ ಗ್ರಾಮದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.ದೊಡ್ಡ ಗ್ರಾಪಂ ನಿಡಘಟ್ಟ ಗ್ರಾಮದಲ್ಲಿ ಹಳ್ಳಿ ಸಂತೆ ಯೋಜನೆ ಅಡಿ ವಿಲೇಜ್ ಹಾತ್ ಮಾದರಿಯಲ್ಲಿ ಮಾರುಕಟ್ಟೆಗಳನ್ನು ನಿರ್ಮಿಸಿ ಅಗತ್ಯ ಮೂಲ ಸೌಲಭ್ಯಕ್ಕೆ ಕ್ರಮ ವಹಿಸಲಾಗಿದೆ. ಕೆ.ಆರ್.ಐ.ಡಿ.ಎಲ್. ಸಂಸ್ಥೆ ಮಾರುಕಟ್ಟೆ ಪ್ರಾಂಗಣವನ್ನು ಪುನರ್ ವಿನ್ಯಾಸಗೊಳಿಸುವ ಮೂಲಕ ಕುಡಿಯುವ ನೀರು, ಶೌಚಾಲಯ, ತರಕಾರಿ ಸ್ವಚ್ಛಗೊಳಿಸುವ ವ್ಯವಸ್ಥೆ, ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಮತ್ತು ಕ್ಯಾಂಟೀನ್ ಸೌಲಭ್ಯ ಕಲ್ಪಿಸಲಾಗುವುದು. ಅಲ್ಲದೆ ವ್ಯಾಪಾರಿಗಳು, ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯಲು ಮೇಲ್ಚಾವಣಿ ವ್ಯವಸ್ಥೆಯೊಂದಿಗೆ ಒಂದೇ ಕಡೆ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಲಾಗುವುದು ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಗ್ರಾಪಂ ಅಧ್ಯಕ್ಷ ಕೆ.ಪಿ.ಉಮಾ, ಸದಸ್ಯರಾದ ಅಬ್ದುಲ್ ಖುದ್ದುಸ್, ದೀಪಕ್, ರಾಜಣ್ಣ, ಎಸ್.ಬಿ.ವರಲಕ್ಷ್ಮ, ಸಿದ್ದರಾಜು. ಎಂ. ಮಹೇಶ, ರಾಮೇಗೌಡ, ಮಾಜಿ ಅಧ್ಯಕ್ಷ ಪ್ರಕಾಶ್, ಪಿಡಿಒ ಎಂ.ಜಿ.ಶೀಲಾ, ಮುಖಂಡರಾದ ನಿವೃತ್ತ ಯೋಧ ಸಿಪಾಯಿ ಶ್ರೀನಿವಾಸ್, ಕದಲೂರು ಬಸವರಾಜು, ಮತ್ತಿತರರು ಇದ್ದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಕ್ತ ಸ್ಥಾನಮಾನ ಹೈಕಮಾಂಡ್ ಚಿಂತನೆ - ಕೆ.ಎಂ.ಉದಯ್

ಮದ್ದೂರು:

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ನಿಗಮ ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಶಾಸಕ ಕೆ.ಎಂ.ಉದಯ್ ಗುರುವಾರ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹಿರಿತನ, ಪಕ್ಷದ ಸಂಘಟನೆಗೆ ಮತ್ತು ಅವರ ಕಾರ್ಯವೈಖರಿಯನ್ನು ಗುರುತಿಸಿ ನಿಗಮ ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಕುರಿತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದರು.