ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಅಫಜಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭೀಮಾ ನದಿ ತೀರದ ಶೇಷಗಿರಿ, ದೇಸಾಯಿ ಕಲ್ಲೂರ, ಗುಡ್ಡೆವಾಡಿ, ಘತ್ತರಗಾ, ಶಿವಪೂರ, ಬನ್ನಟ್ಟಿ, ಮಣ್ಣೂರ, ಉಡಚಾಣ, ಹವಳಗಾ, ಶಿವೂರ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿಕೊಂಡ ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿ 95 ಜನರ ವಿರುದ್ಧ 44 ಪ್ರಕರಣ ದಾಖಲಿಸಿಕೊಂಡು 1.05 ಕೋಟಿ ರು. ಮೌಲ್ಯದ 5230 ಟ್ರ್ಯಾಕ್ಟರ್ ಟ್ರಾಲಿಗಳಷ್ಟು ಮರಳು ಜಪ್ತಿ ಮಾಡಿದ್ದಾರೆ.ಅಕ್ರಮವಾಗಿ ಮರಳು ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇಲೆ ಎಸ್‍ಪಿ ಅಕ್ಷಯ್ ಹಾಕೆ, ಹೆಚ್ಚುವರಿ ಎಸ್‍ಪಿ ಶ್ರೀನಿಧಿ, ಆಳಂದ ಡಿಎಸ್‍ಪಿ ಮಹಮ್ಮದ್ ಶರೀಫ್ ರಾವುತರ್ ಅವರ ಮಾರ್ಗದರ್ಶನದಲ್ಲಿ ಅಫಜಲಪುರ ಸಿಪಿಐ ಭಾಸು ಚವ್ಹಾಣ್, ಸಿಪಿಐ ಚೆನ್ನಯ್ಯಾ ಎಸ್.ಹಿರೇಮಠ, ಪಿಎಸ್‍ಐ ಮಹಿಬೂಬ್ ಅಲಿ, ದೇವಲಗಾಣಗಾಪುರ ಪಿಎಸ್‍ಐ ಪರಶುರಾಮ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.ಶೇಷಗಿರಿ ಗ್ರಾಮದ ಸೀಮಾಂತರದ ಹೊಲದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 1.20 ಲಕ್ಷ ರು. ಮೌಲ್ಯದ 40 ಟ್ರ್ಯಾಕ್ಟರ್ ಟ್ರಾಲಿ, ದೇಸಾಯಿ ಕಲ್ಲೂರ ಸೀಮಾಂತರದ ಹೊಲಗಳಲ್ಲಿ ಸಂಗ್ರಹಿಸಿ ಇಡಲಾಗಿದ್ದ 2.70 ಲಕ್ಷ ರು.ಮೌಲ್ಯದ 135 ಟ್ರ್ಯಾಕ್ಟರ್ ಟ್ರಾಲಿ, ಗುಡ್ಡೆವಾಡಿ ಸೀಮಾಂತರದ ಹೊಲದಲ್ಲಿ ಸಂಗ್ರಹಿಸಿ ಇಡಲಾಗಿದ್ದ 4 ಲಕ್ಷ ರು.ಮೌಲ್ಯದ 200 ಟ್ರ್ಯಾಕ್ಟರ್ ಟ್ರಾಲಿ, ಘತ್ತರಗಾ ಸೀಮಾಂತರದ ಹೊಲದಲ್ಲಿ ಸಂಗ್ರಹಿಸಿ ಇಡಲಾಗಿದ್ದ 80 ಸಾವಿರ ರು.ಮೌಲ್ಯದ 40 ಟ್ರ್ಯಾಕ್ಟರ್ ಟ್ರಾಲಿ, ಶಿವಪೂರ ಸೀಮಾಂತರದ ಹೊಲದಲ್ಲಿ ಸಂಗ್ರಹಿಸಿ ಇಡಲಾಗಿದ್ದ 2.30 ಲಕ್ಷ ರು.ಮೌಲ್ಯದ 115 ಟ್ರ್ಯಾಕ್ಟರ್ ಟ್ರಾಲಿ, ಬನ್ನಟ್ಟಿ ಸೀಮಾಂತರದ ಹೊಲದಲ್ಲಿ ಸಂಗ್ರಹಿಸಿ ಇಡಲಾಗಿದ್ದ 1.40 ಲಕ್ಷ ರು.ಮೌಲ್ಯದ 70 ಟ್ರ್ಯಾಕ್ಟರ್ ಟ್ರಾಲಿ, ಮಣ್ಣೂರ ಸೀಮಾಂತರದ ಹೊಲದಲ್ಲಿ ಸಂಗ್ರಹಿಸಿ ಇಡಲಾಗಿದ್ದ 11.64 ಲಕ್ಷ ರು.ಮೌಲ್ಯದ 575 ಟ್ರ್ಯಾಕ್ಟರ್ ಟ್ರಾಲಿ, ಉಡಚಾಣ ಸೀಮಾಂತರದ ಹೊಲದಲ್ಲಿ ಸಂಗ್ರಹಿಸಿ ಇಡಲಾಗಿದ್ದ 17.10 ಲಕ್ಷ ರು.ಮೌಲ್ಯದ 855 ಟ್ರ್ಯಾಕ್ಟರ್ ಟ್ರಾಲಿ, ಹವಳಗಾ ಸೀಮಾಂತರದ ಹೊಲದಲ್ಲಿ ಸಂಗ್ರಹಿಸಿ ಇಡಲಾಗಿದ್ದ 37.40 ಲಕ್ಷ ರು.ಮೌಲ್ಯದ 1870 ಟ್ರ್ಯಾಕ್ಟರ್ ಟ್ರಾಲಿ, ಶಿವೂರ ಸೀಮಾಂತರದ ಹೊಲದಲ್ಲಿ ಸಂಗ್ರಹಿಸಿ ಇಡಲಾಗಿದ್ದ 26.60 ಲಕ್ಷ ರು.ಮೌಲ್ಯದ 1330 ಟ್ರ್ಯಾಕ್ಟರ್ ಟ್ರಾಲಿ ಮರಳು ಸೇರಿ 1.05 ಕೋಟಿ ರು.ಮೌಲ್ಯದ 5230 ಟ್ರ್ಯಾಕ್ಟರ್ ಟ್ರಾಲಿ ಮರಳು ಜಪ್ತಿ ಮಾಡಿ 95 ಜನರ ವಿರುದ್ಧ 44 ಪ್ರಕರಣ ದಾಖಲಿಸಿಕೊಂಡಿದ್ದಾರೆ.