ಭೈರವೇಶ್ವರ ಬೆಟ್ಟದ ತುದಿಯಲ್ಲಿ ಹಾರಾಡುತ್ತಿರುವ 68 ಅಡಿ ಕನ್ನಡ ಬಾವುಟ

| Published : Oct 31 2023, 01:17 AM IST

ಭೈರವೇಶ್ವರ ಬೆಟ್ಟದ ತುದಿಯಲ್ಲಿ ಹಾರಾಡುತ್ತಿರುವ 68 ಅಡಿ ಕನ್ನಡ ಬಾವುಟ
Share this Article
  • FB
  • TW
  • Linkdin
  • Email

ಸಾರಾಂಶ

ಕುದೂರು: ಕುದೂರು ಗ್ರಾಮದ ಶ್ರೀ ಭೈರವೇಶ್ವರ ಬೆಟ್ಟದ ತುದಿಯಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಪುನೀತ್ ಸಂಸ್ಮರಣೆ ಕಾರ್ಯಕ್ರಮದ ನಿಮಿತ್ತ 68 ಅಡಿ ಉದ್ದದ ಕನ್ನಡದ ಬಾವುಟವನ್ನು ಹಾರಿಸಲಾಯಿತು.
ಕುದೂರು: ಕುದೂರು ಗ್ರಾಮದ ಶ್ರೀ ಭೈರವೇಶ್ವರ ಬೆಟ್ಟದ ತುದಿಯಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಪುನೀತ್ ಸಂಸ್ಮರಣೆ ಕಾರ್ಯಕ್ರಮದ ನಿಮಿತ್ತ 68 ಅಡಿ ಉದ್ದದ ಕನ್ನಡದ ಬಾವುಟವನ್ನು ಹಾರಿಸಲಾಯಿತು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ನಾಗೇಶ್ ಹನುಮಂತಪ್ಪ, ಬಾವುಟ ಎನ್ನುವುದು ಅಭಿಮಾನದ ಸಂಕೇತ. ಅರಿಶಿಣ ಕುಂಕುಮದಿಂದ ಶೋಭಿತಳಾದ ಕನ್ನಡಮ್ಮನ ಕುರಿತಾಗಿ ಮಕ್ಕಳು ತೋರುವ ಅಭಿಮಾನದ ಪ್ರತೀಕವಾಗಿ ಇದನ್ನು ಆರೋಹಣ ಮಾಡುತ್ತಿದ್ದೇವೆ ಎಂದರು. ಕಳೆದ ಹದಿನಾರು ವರ್ಷಗಳಿಂದ ಕನ್ನಡದ ಬಾವುಟವನ್ನು ಬೆಟ್ಟದ ಮೇಲೆ ಹಾರಿಸಲಾಗುತ್ತಿದೆ. ನವೆಂಬರ್ 1 ರಂದು ಮಾಡುವ ಕಾರ್ಯಕ್ರಮವನ್ನು ಕಳೆದ ವರ್ಷದಿಂದ ಎರಡು ದಿನ ಮುನ್ನವೇ ಹಾರಿಸುತ್ತೇವೆ ಕಾರಣ. ಪುನೀತ್‌ ರಾಜ್‌ ಕುಮಾರ್ ಸ್ಮರಣೆಯೂ ಆದಂತಾಗುತ್ತದೆ ಮತ್ತು ಕನ್ನಡ ರಾಜ್ಯೋತ್ಸವವೂ ಆಗುತ್ತದೆ ಎಂದು ತಿಳಿಸಿದರು, ಯುವ ಮುಖಂಡ ಕೆ.ವಿ.ಶಶಾಂಕ್ ಮಾತನಾಡಿ, ಕೆಂಪೇಗೌಡರು ಆಳಿದ ದುರ್ಗಗಳಲ್ಲಿ ಕುದೂರು ಭೈರವನದುರ್ಗವೂ ಒಂದು. ಇಂತಹ ದುರ್ಗವನ್ನು ಕಾಪಾಡಿಕೊಳ್ಳುವುದು ಕನ್ನಡಿಗರ ಕರ್ತವ್ಯ. ಇದನ್ನು ಸಸ್ಯಕಾಶಿಯ ರೀತಿ ಬದಲಿಸಿ ಕಾಪಾಡಬೇಕು ಎಂದು ಮನವಿ ಮಾಡಿದರು. ಗ್ರಾಪಂ ಮಾಜಿ ಸದಸ್ಯ ಜಗದೀಶ್, ಸದಸ್ಯರಾದ ಲೋಕೇಶ್, ಟೈಲರ್ ಸುರೇಶ್, ಸಿದ್ದರಾಜು, ಹರ್ಷ, ಕೃಷ್ಣ, ಕೆಂಪಾಚಾರಿ, ಮಹಮದ್ ಇಮ್ರಾನ್, ನವೀನ, ಜಯಂತ್, ಕಿರಣ್ ಮತ್ತಿತರರು ಹಾಜರಿದ್ದರು. 30ಕೆಆರ್ ಎಂಎನ್‌ 8.ಜೆಪಿಜಿ ಕುದೂರು ಗ್ರಾಮದ ಭೈರವನದುರ್ಗದ ತುದಿಯಲ್ಲಿ ಡಾ.ರಾಜ್‌ ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳಿಮದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ಸಂಸ್ಮರಣೆ ಪ್ರಯುಕ್ತ 68 ಅಡಿ ಉದ್ದದ ಬಾವುಟ ಹಾರಿಸಲಾಯಿತು.