ನೆಹರೂ ಉದ್ಘಾಟಿಸಿದ್ದ 70 ವರ್ಷ ಹಳೆಯ ತುಂಗಭದ್ರಾ ಡ್ಯಾಂ : ಸ್ವಾತಂತ್ರ್ಯ ಪೂರ್ವದ ಇತಿಹಾಸ

| Published : Aug 12 2024, 01:08 AM IST / Updated: Aug 12 2024, 11:27 AM IST

Tungabadra
ನೆಹರೂ ಉದ್ಘಾಟಿಸಿದ್ದ 70 ವರ್ಷ ಹಳೆಯ ತುಂಗಭದ್ರಾ ಡ್ಯಾಂ : ಸ್ವಾತಂತ್ರ್ಯ ಪೂರ್ವದ ಇತಿಹಾಸ
Share this Article
  • FB
  • TW
  • Linkdin
  • Email

ಸಾರಾಂಶ

ಕೆಆರ್‌ಎಸ್‌ನಂತೆ ತುಂಗಭದ್ರಾ ಜಲಾಶಯಕ್ಕೂ ಸ್ವಾತಂತ್ರ್ಯ ಪೂರ್ವದ ಇತಿಹಾಸ ಇದೆ. ಸ್ವಾತಂತ್ರ್ಯ ಪೂರ್ವದಲ್ಲೇ ಈ ಜಲಾಶಯ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದರೂ ಪೂರ್ಣಗೊಂಡದ್ದು ಮಾತ್ರ 1953ರಲ್ಲಿ.

 ಕೊಪ್ಪಳ :  ಕೆಆರ್‌ಎಸ್‌ನಂತೆ ತುಂಗಭದ್ರಾ ಜಲಾಶಯಕ್ಕೂ ಸ್ವಾತಂತ್ರ್ಯ ಪೂರ್ವದ ಇತಿಹಾಸ ಇದೆ. ಸ್ವಾತಂತ್ರ್ಯ ಪೂರ್ವದಲ್ಲೇ ಈ ಜಲಾಶಯ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದರೂ ಪೂರ್ಣಗೊಂಡದ್ದು ಮಾತ್ರ 1953ರಲ್ಲಿ.

ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರೂ ಅವರು 1954ರಲ್ಲಿ ಈ ಜಲಾಶಯ ಲೋಕಾರ್ಪಣೆ ಮಾಡಿದರು. ಅವರ ಆಗಮನಕ್ಕೆಂದೇ ಕೊಪ್ಪಳ ತಾಲೂಕಿನ ಗಿಣಿಗೇರಿ ಬಳಿ ಹಂಪಿ ವಿಮಾನ ತಂಗುದಾಣ ನಿರ್ಮಾಣ ಮಾಡಲಾಗಿತ್ತು. 1955ರಲ್ಲಿ ಜಲಾಶಯಕ್ಕೆ ಗೇಟ್ ಅಳವಡಿಸಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ನೀರುಣಿಸುವ ಕಾರ್ಯ ಹಂತಹಂತವಾಗಿ ಪ್ರಾರಂಭವಾಯಿತು.

ಕರ್ನಾಟಕದ ಮೂರು ಜಿಲ್ಲೆ (ಈಗ ನಾಲ್ಕು)ಗಳು, ಆಂಧ್ರ (ಈಗ ತೆಲಾಂಗಣವೂ ಸೇರಿ) ರಾಜ್ಯಗಳಲ್ಲಿ ಈ ಜಲಾಶಯ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ರಾಜ್ಯದ 9.65 ಲಕ್ಷ ಎಕರೆ ಮತ್ತು ಆಂಧ್ರ-ತೆಲಂಗಾಣದ 3.5 ಲಕ್ಷ ಎಕರೆ ಪ್ರದೇಶ ಈ ಜಲಾಶಯದಿಂದ ನೇರ ನೀರಾವರಿಗೆ ಒಳಪಟ್ಟಿದ್ದರೆ, ಪರೋಕ್ಷವಾಗಿ 15 ಲಕ್ಷಕ್ಕೂ ಅಧಿಕ ಎಕರೆಗೆ ನೀರಾವರಿಗೊಳಪಟ್ಟಿದೆ.

225 ಕಿ.ಮೀ. ವ್ಯಾಪ್ತಿಯ ಎಡದಂಡೆ ನಾಲೆ ಹಾಗೂ ಬಲದಂಡೆ ನಾಲೆಯನ್ನೂ ಈ ಜಲಾಶಯ ಹೊಂದಿದೆ.

ಸೋನಾಮಸೂರಿ ಭತ್ತವನ್ನು ಬೆಳೆಯುವ ಭಾರತದ ದೊಡ್ಡ ಪ್ರದೇಶ ವ್ಯಾಪ್ತಿ ಹೊಂದಿರುವ ಹಿರಿಮೆ ತುಂಗಭದ್ರಾ ಜಲಾಶಯದ್ದು. ತುಂಗಭದ್ರಾ ಡ್ಯಾಂ ವ್ಯಾಪ್ತಿಯಲ್ಲಿ ಬೆಳೆಯುವ ಈ ಅಕ್ಕಿಗೆ ಅರಬ್ ಮತ್ತು ಯರೋಪ್ ದೇಶಗಳಲ್ಲಿ ಬೇಡಿಕೆ ಇದೆ. ಪ್ರತಿ ವರ್ಷವೂ ಕೋಟ್ಯಂತರ ರು. ಕ್ವಿಂಟಲ್‌ ಅಕ್ಕಿ ರಫ್ತು ಮಾಡಲಾಗುತ್ತದೆ. ಆರಂಭದಲ್ಲಿ 133 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದ ಈ ಜಲಾಶಯದ ಸಾಮರ್ಥ್ಯ ಈಗ ಹೂಳು ತುಂಬಿಕೊಂಡಿದ್ದರಿಂದ 105.855 ಟಿಎಂಸಿಕ್ಕೆ ಕುಸಿದಿದೆ. ಪ್ರತಿ ವರ್ಷ 180ರಿಂದ 230-250 ಟಿಎಂಸಿ ನೀರು ಬಳಕೆಯಾಗುವ ರಾಜ್ಯದ ಎರಡನೇ ದೊಡ್ಡ ಜಲಾಶಯ ಇದಾಗಿದೆ.