ಸಾರಾಂಶ
ರಾಷ್ಟ್ರ ಮಟ್ಟದ ನೀಟ್ - 2024 ಪರೀಕ್ಷಾ ಫಲಿತಾಂಶದಲ್ಲಿ ಜ್ಞಾನಸುಧಾದ ಕ್ರಿಷ್ ಕಡಲ್ಗೀಕರ್ 700 ಅಂಕಗಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಎನ್.ಟಿ.ಎ. ನಡೆಸಿದ ರಾಷ್ಟ್ರ ಮಟ್ಟದ ನೀಟ್ - 2024 ರ ಪರೀಕ್ಷಾ ಫಲಿತಾಂಶದಲ್ಲಿ ಜ್ಞಾನಸುಧಾದ ಕ್ರಿಷ್ ಕಡಲ್ಗೀಕರ್ 720 ರಲ್ಲಿ 700 ಅಂಕ ಗಳಿಸಿ ರಾಷ್ಟ್ರ ಮಟ್ಟದಲ್ಲಿ 1880 ರ್‍ಯಾಂಕ್ ಗಳಿಸಿದ್ದಾರೆ.ಇದೇ ಸಂಸ್ಥೆಯ ವಿದ್ಯಾರ್ಥಿಗಳಾದ ತನ್ಮಯ್ ಶೆಟ್ಟಿ 690, ಆರ್ಯ ಎಂ. ಹಾಗೂ ಗಜೇಂದ್ರ 680, ರೋಶ್ನಿ ಎಂ.ಪಿ. 677 , ಕ್ಷೀರಜ್ ಆಚಾರ್ಯ ಹಾಗೂ ಸ್ವಸ್ಥಿಕ್ ಎಸ್. ಎ. 675, ಸಂಜನ ಪಟ್ಗಾರ್ 673, ರಕ್ಷಿತ 671, ಸೃಷ್ಟಿ ಶೆಟ್ಟಿ 669, ಚಂದನ ಜಿ. ನಾಯಕ್ 668, ರಯಾನ್ ಡಿ ಸೋಜ 667, ತೇಜಸ್ ಜನಗೇಕರ್ ಹಾಗೂ ಪ್ರಾನ್ಶು ಪ್ರಭು 666, ಚಿನ್ಮಯಿ ಎಂ.ಬಿ., ಗೌತಮ್ ಆರ್.ಹೆಚ್., ಸುಹಾಸ್ ಡಿ. ಹಾಗೂ ಅವನಿ ಆರ್. ಶೆಟ್ಟಿ 665, ಪ್ರಣಮ್ ಪ್ರಭು ಹಾಗೂ ಖುಷಿ ಹೆಗ್ಡೆ 663, ಎಂ.ಕೆ. ಮದನ್ ಗೌಡ ಹಾಗೂ ವಿನಿತ್ ವಿ. ಶೆಟ್ಟಿ 660, ಅಂಕ ಗಳಿಸಿದ್ದಾರೆ.
95 ವಿದ್ಯಾರ್ಥಿಗಳಿಗೆ 600 ಕ್ಕಿಂತ ಅಧಿಕ ಅಂಕ ಲಭಿಸಿದೆ. ಇವರೆಲ್ಲರನ್ನೂ ಅಜೆಕಾರ್ ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ ಅವರು ಅಭಿನಂದಿಸಿದ್ದಾರೆ.