ತಾಲೂಕಿನ ಪುರ ತಾಂಡ ಹಾಗೂ ಕಾಟನಹಳ್ಳಿ ಗ್ರಾಮದ ಸುಮಾರು 75 ಲಕ್ಷ ವೆಚ್ಷದ ಸಿಸಿ ರಸ್ತೆಗೆ ಶಾಸಕ ಶ್ರೀನಿವಾಸ್ ಭೂಮಿ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಪುರ ತಾಂಡ ಹಾಗೂ ಕಾಟನಹಳ್ಳಿ ಗ್ರಾಮದ ಸುಮಾರು 75 ಲಕ್ಷ ವೆಚ್ಷದ ಸಿಸಿ ರಸ್ತೆಗೆ ಶಾಸಕ ಶ್ರೀನಿವಾಸ್ ಭೂಮಿ ಪೂಜೆ ಸಲ್ಲಿಸಿದರು. ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಾಗಲವಾಡಿ ಕೆರೆಗಳಿಗೆ ಈ ವರ್ಷ ನೀರು ಹರಿಯಲಿದ್ದು ಈಗಾಗಲೇ ಕಾಮಗಾರಿ ಕೂಡ ಶುರುವಾಗಿದೆ. ರೈತರ ಸಮಸ್ಯೆಯಿಂದ ಕಾಮಗಾರಿ ಸ್ಥಗಿತವಾಗಿತ್ತು. ರೈತರು ಒಪ್ಪಿಕೊಂಡು ಜಮೀನನ್ನು ಬಿಟ್ಟುಕೊಟ್ಟಿದ್ದಾರೆ ಕಾಮಗಾರಿ ನಡಿತಾ ಇದೆ. ಈ ವರ್ಷದಲ್ಲಿ ಹಗಲವಾಡಿ ಕೆರೆ ಹಾಗೂ ಬೀಕೆಗುಡ್ಡ ಕೆರೆಗಳಿಗೆ ಹೇಮಾವತಿ ನೀರು ಹರಿಯುತ್ತದೆ ಎಂದರು. ಹೊಸಕೆರೆ ಬಸವೇಶ್ವರ ಪ್ರೌಢಶಾಲೆಗೆ ಡಿಡಿಪಿಐ ಅವರು ಒಂದು ವರ್ಷ ಮುಂಚಿತವಾಗಿ ಶಾಲೆಯ ಶಿಕ್ಷಕರಿಗೆ ಮಕ್ಕಳ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು. ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿಕೊಳದ ಕಾರಣ ಶಾಲೆಯನ್ನು ಮುಚ್ಚುವ ಸ್ಥಿತಿಗೆ ಬಂದಿದೆ.ಈ ವರ್ಷ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ನಾನು ಕೂಡ ಡಿಡಿಪಿಐ ಹಾಗೂ ಬಿಇಒ ಅವರಿಗೆ ಹೇಳಿದ್ದೇನೆ. ಈ ವರ್ಷ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಶಿಕ್ಷಣವನ್ನು ಕೊಡಿ ಎಂದರು.ಪುರ ಲಾಂಬಾಣಿ ತಾಂಡವನ್ನು ಕಂದಾಯ ಗ್ರಾಮಕ್ಕೆ ಸೇರಿಸಲು ಅಧಿಕಾರಿಗಳಿಗೆ ಸ್ಥಳದಲ್ಲಿ ಕಂದಯ ಅಧಿಕಾರಿ ಗುರುಪ್ರಸಾದ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ಕಂದಾಯ ಗ್ರಾಮವನ್ನಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನಲ್ಲಿ ಮುಂದಿನ ವಾರದಿಂದ ನೂರು ಕೋಟಿ ವೆಚ್ಚದಲ್ಲಿ ಕಾಮಗಾರಿಗಳಿಗೆ ಚಾಲನೆ ಕೊಡುತ್ತೇನೆ. ಹಾಗಲವಾಡಿ ,ಚೇಳೂರು ಹೋಬಳಿಗಳಿಗೆ ಹೆಚ್ಚು ಆದ್ಯತೆ ಕೊಟ್ಟು ಈ ಭಾಗದ ಅಭಿವೃದ್ಧಿಗೆ ಹೆಚ್ಚು ಗಮನಕೊಡುತ್ತೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜು, ರಾಘವೇಂದ್ರ, ಕಾರ್ಯದರ್ಶಿ ಸಿದ್ದಯ್ಯ ಗುತ್ತಿಗೆದಾರ ಬಸವರಾಜು ನಾಯಕ್ ,ಎಂಜಿನಿಯರ್ ಮಂಜುನಾಥ್, ಗಿರಿಯಾ ಭೋವಿ, ಮಹದೇವಯ್ಯ , ಈಶಣ್ಣ , ಶಿವಣ್ಣ, ರಮೇಶ್ ಸಣ್ಣ ರಂಗಯ್ಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.