ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ೭೫ನೇ ವರ್ಷದ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅವರ ಅಭಿಮಾನಿಗಳು ಕೊರಟಗೆರೆ ಪಟ್ಟಣದಲ್ಲಿ ವಿಶೇಷವಾಗಿ ಗುರುವಾರ ಆಚರಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ೭೫ನೇ ವರ್ಷದ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅವರ ಅಭಿಮಾನಿಗಳು ಕೊರಟಗೆರೆ ಪಟ್ಟಣದಲ್ಲಿ ವಿಶೇಷವಾಗಿ ಗುರುವಾರ ಆಚರಣೆ ಮಾಡಿದರು.ಪಟ್ಟಣದ ಪಪಂ ಮುಂಭಾಗ ಕೇಕ್ ಕತ್ತರಿಸಿ ಸಿಹಿ ವಿತರಣೆ, ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ಹಂಚಿಕೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಿ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು.
ಡಿಸಿಎಂ ಡಾ.ಜಿ.ಪರಮೇಶ್ವರ ಅವರ ೭೫ನೇ ವರ್ಷದ ಅಮೃತ ಮಹೋತ್ಸವದ ಪ್ರಮುಕ್ತ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮುಂದಿನ ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿ ನಮ್ಮ ನಾಯಕರಾದ ಡಾ.ಜಿ.ಪರಮೇಶ್ವರ ಅವರು ರಾಜ್ಯದ ಸಿಎಂ ಹುದ್ದೆ ಅಲಂಕರಿಸಲಿ ಎಂದು ಪ್ರಾರ್ಥಿಸಿದರು.ರಕ್ತದಾನ ಶಿಬಿರದಲ್ಲಿ ತುಮಕೂರು ವಿಶೇಷ ಭೂ ಸ್ವಾಧೀನ ಅಧಿಕಾರಿ ಸೋಮಪ್ಪ ಕಡಕೋಳ, ತಹಸೀಲ್ದಾರ್ ಮಂಜುನಾಥ, ತಾಪಂ ಇಒ ಅಪೂರ್ವ, ಲ್ಯಾಂಡ್ ಆರ್ಮಿ ಎಇಇ ಸಿಂಧು, ಪಿಡ್ಲ್ಯೂಡಿ ಎಇಇ ದೀಪಕ್, ಪಿಎಸೈ ತಿರ್ಥೇಶ್, ಎಎಸೈ ಗೋವಿಂದನಾಯ್ಕ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವತ್ಥನಾರಾಯಣ್, ಮಹಿಳಾಧ್ಯಕ್ಷೆ ಜಯಮ್ಮ, ಯುವಧ್ಯಕ್ಷ ಬೈರೇಶ್, ಉಪಾಧ್ಯಕ್ಷ ದೀಪಕ್, ಪ್ರೇಮಾ ಮಹಾಲಿಂಗಪ್ಪ, ವೆಂಕಟಪ್ಪ, ಪಪಂ ಸದಸ್ಯ ಓಬಳರಾಜು ಮುಖಂಡರಾದ ಓಬಳರಾಜು, ರಾಜಣ್ಣ, ವಿನಯ್, ಅರವಿಂದ್, ರಘುವೀರ್, ಜಯರಾಂ, ಸೇರಿದಂತೆ ಇತರರು ಇದ್ದರು.