ಚಾಮರಾಜನಗರದಲ್ಲಿ ಶೇ.೭೬.೮೧ ರಷ್ಟು ಮತದಾನ

| Published : Apr 28 2024, 01:23 AM IST

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಸಂಬಂಧ ೨೨-ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.೭೬.೮೧ ರಷ್ಟು ಮತದಾನವಾಗಿದೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಸಂಬಂಧ ೨೨-ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.೭೬.೮೧ ರಷ್ಟು ಮತದಾನವಾಗಿದ್ದು, ಅಂತಿಮ ಮತದಾನ ವಿವರ ಇಂತಿದೆ. ಒಟ್ಟು ೮,೭೮,೭೦೨ ಪುರುಷರು, ೮,೯೯,೫೦೧ ಮಹಿಳೆಯರು, ೧೦೭ ಇತರರು ಸೇರಿದಂತೆ ಒಟ್ಟು ೧೭,೭೮,೩೧೦ ಮತದಾರರಿದ್ದಾರೆ. ಈ ಪೈಕಿ ೬,೮೨,೯೬೧ ಪುರುಷರು, ೬,೮೨,೯೫೨ ಮಹಿಳೆಯರು, ೩೧ ಇತರೆ ಮಂದಿ ಸೇರಿದಂತೆ ಒಟ್ಟು ೧೩,೬೫,೯೪೪ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಹೆಚ್.ಡಿ.ಕೋಟೆ: ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ೧,೧೪,೦೪೧ ಪುರುಷರು, ೧,೧೪,೫೬೦ ಮಹಿಳೆಯರು, ೧೨ ಇತರರು ಸೇರಿದಂತೆ ಒಟ್ಟು ೨,೨೮,೬೧೩ ಮತದಾರರಿದ್ದಾರೆ. ಇವರಲ್ಲಿ ೮೮,೧೪೬ ಪುರುಷರು, ೮೭,೭೩೮ ಮಹಿಳೆಯರು, ೭ ಮಂದಿ ಇತರರು ಸೇರಿದಂತೆ ಒಟ್ಟು ೧,೭೫,೮೯೧ ಮತದಾರರು ಮತದಾನ ಮಾಡಿದ್ದಾರೆ.

ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ೧,೧೦,೩೬೯ ಪುರುಷರು, ೧,೧೨,೩೮೧ ಮಹಿಳೆಯರು, ೭ ಇತರರು ಸೇರಿದಂತೆ ಒಟ್ಟು ೨,೨೨,೭೫೭ ಮತದಾರರಿದ್ದಾರೆ. ಈ ಪೈಕಿ ೮೬,೪೫೦ ಪುರುಷರು, ೮೫,೧೧೨ ಮಹಿಳೆಯರು, ೩ ಮಂದಿ ಇತರರು ಸೇರಿದಂತೆ ಒಟ್ಟು ೧,೭೧,೫೬೫ ಮತದಾರರು ಮತ ಚಲಾಯಿಸಿದ್ದಾರೆ.

ವರುಣಾ: ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ೧,೧೯,೫೪೫ ಪುರುಷರು, ೧,೨೧,೩೯೧ ಮಹಿಳೆಯರು, ೧೩ ಇತರರು ಸೇರಿದಂತೆ ಒಟ್ಟು ೨,೪೦,೯೪೯ ಮತದಾರರಿದ್ದಾರೆ. ಇವರಲ್ಲಿ ೯೫,೨೨೮ ಪುರುಷರು, ೯೩,೮೦೬ ಮಹಿಳೆಯರು, ೬ ಇತರರು ಸೇರಿದಂತೆ ಒಟ್ಟು ೧,೮೯,೦೪೦ ಮತದಾರರು ಮತ ಚಲಾಯಿಸಿದ್ದಾರೆ.

ಟಿ.ನರಸೀಪುರ: ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ೧,೦೩,೧೨೧ ಪುರುಷರು, ೧,೦೬,೪೧೩ ಮಹಿಳೆಯರು, ೧೩ ಇತರರು ಸೇರಿದಂತೆ ಒಟ್ಟು ೨,೦೯,೫೪೭ ಮತದಾರರಿದ್ದಾರೆ. ಇವರಲ್ಲಿ ೭೭,೮೫೧ ಪುರುಷರು, ೭೮,೦೬೧ ಮಹಿಳೆಯರು, ೧ ಇತರರು ಸೇರಿದಂತೆ ಒಟ್ಟು ೧,೫೫,೯೧೩ ಮತದಾರರು ಮತ ಚಲಾಯಿಸಿದ್ದಾರೆ.

ಹನೂರು: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ೧,೧೨,೮೮೦ ಪುರುಷರು, ೧,೧೧,೭೯೩ ಮಹಿಳೆಯರು, ೧೦ ಇತರರು ಸೇರಿದಂತೆ ಒಟ್ಟು ೨,೨೪,೬೮೩ ಮತದಾರರಿದ್ದಾರೆ. ಇವರಲ್ಲಿ ೮೦,೯೭೨ ಪುರುಷರು, ೮೦೬೬೯ ಮಹಿಳೆಯರು, ೩ ಇತರರು ಸೇರಿದಂತೆ ಒಟ್ಟು ೧,೬೧,೬೪೪ ಮತದಾರರು ಮತ ಚಲಾಯಿಸಿದ್ದಾರೆ.

ಕೊಳ್ಳೇಗಾಲ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ೧,೦೮,೦೫೬ ಪುರುಷರು, ೧,೧೧,೯೮೮ ಮಹಿಳೆಯರು, ೨೧ ಇತರರು ಸೇರಿದಂತೆ ಒಟ್ಟು ೨,೨೦,೦೬೫ ಮತದಾರರಿದ್ದಾರೆ. ಇವರಲ್ಲಿ ೮೧,೫೧೨ ಪುರುಷರು, ೮೨,೨೭೯ ಮಹಿಳೆಯರು, ೮ ಇತರರು ಸೇರಿದಂತೆ ಒಟ್ಟು ೧,೬೩,೭೯೯ ಮತದಾರರು ಮತ ಚಲಾಯಿಸಿದ್ದಾರೆ.

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ೧,೦೪,೯೦೩ ಪುರುಷರು, ೧,೧೦,೫೧೭ ಮಹಿಳೆಯರು, ೧೫ ಇತರರು ಸೇರಿದಂತೆ ಒಟ್ಟು ೨,೧೫,೪೩೫ ಮತದಾರರಿದ್ದಾರೆ. ಇವರಲ್ಲಿ ೮೪,೨೯೩ ಪುರುಷರು, ೮೫,೭೦೧ ಮಹಿಳೆಯರು, ೧ ಇತರರು ಸೇರಿದಂತೆ ಒಟ್ಟು ೧,೬೯,೯೯೫ ಮತದಾರರು ಮತ ಚಲಾಯಿಸಿದ್ದಾರೆ.

ಗುಂಡ್ಲುಪೇಟೆ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೧,೦೫,೭೮೭ ಪುರುಷರು, ೧,೧೦,೪೫೮ ಮಹಿಳೆಯರು, ೧೬ ಇತರರು ಸೇರಿದಂತೆ ಒಟ್ಟು ೨,೧೬,೨೬೧ ಮತದಾರರಿದ್ದಾರೆ. ಇವರಲ್ಲಿ ೮೮,೫೦೯ ಪುರುಷರು, ೮೯,೫೮೬ ಮಹಿಳೆಯರು, ೨ ಇತರರು ಸೇರಿದಂತೆ ಒಟ್ಟು ೧,೭೮,೦೯೭ ಮತದಾರರು ಮತ ಚಲಾಯಿಸಿದ್ದಾರೆ ಎಂದು ೨೨-ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.