ಸಾರಾಂಶ
ದೇಶ ಮೊದಲು ಎನ್ನುವುದು ನಮ್ಮ ಬದುಕಿನ ಮೌಲ್ಯವಾಗಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ದೇಶ ಮೊದಲು ಎನ್ನುವುದು ನಮ್ಮ ಬದುಕಿನ ಮೌಲ್ಯವಾಗಬೇಕು. ದೇಶಕ್ಕಿಂತ ಮಿಗಿಲಾದ ಸಂಗತಿ ಇನ್ನೊಂದಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ನಗರದ ಪೂರ್ಣ ಚೇತನ ಶಾಲೆಯ ಒಂದರಿಂದ ಹತ್ತನೇ ತರಗತಿಯವರೆಗಿನ ಸುಮಾರು 530 ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿ ನಡೆಸಿದ ಐದು ನಿಮಿಷಗಳ ಕವಾಯತು ಹಾಗೂ ಪುನರ್ ಬಳಕೆಯ ಒರಿಗಾಮಿ ಚೆಂಡುಗಳ ಮೂಲಕ 12 x 8 ಮೀಟರ್ ಅಳತೆಯ ಅತಿ ದೊಡ್ಡ ರಾಷ್ಟ್ರ ದ್ವಜವನ್ನು 4 ಗಂಟೆ 5 ನಿಮಿಷದಲ್ಲಿ ತಯಾರಿಸಿದರು. ಈ ವಿಶ್ವದಾಖಲೆಯ ಸಮಾವೇಶದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಪೀಳಿಗೆ ಮೇಲಿದೆ ಎಂದು ಅವರು ತಿಳಿಸಿದರು.ವಿದ್ಯಾರ್ಥಿಗಳು ಪುನರ್ ಬಳಕೆಯ ಒರಿಗಾಮಿ ಮೂಲಕ ಅತಿ ದೊಡ್ಡ ರಾಷ್ಟ್ರ ಧ್ವಜ ತಯಾರಿಸಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು (ಬ್ಲೈಂಡ್ ಫೋಲ್ಡ್) ಐದು ನಿಮಿಷಗಳ ಕವಾಯತು ನಡೆಸಿ, ರಾಷ್ಟ್ರ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿ, ಬಳಿಕ 2047ರಲ್ಲಿ ವಿಕಸಿತ ಭಾರತದ ನಿರ್ಮಾಣದ ಪ್ರತಿಜ್ಞೆ ಸ್ವೀಕರಿಸಿದರು.
ಎಲೈಟ್ ವರ್ಲ್ಡ್ ರೆಕಾರ್ಡ್ಸ್‌ನ ತೀರ್ಪುಗಾರರಾದ ಭಾವನಾ ನವನೀತ್, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿ ಮತ್ತು ಇಂಡಿಯಾ ರೆಕಾರ್ಡ್ಸ್ ಅಕಾಡೆಮಿಯ ತೀರ್ಪುಗಾರರಾದ ಪಿ.ಜಿ. ಪ್ರತಿಭಾ ಅವರು ವಿಶ್ವ ದಾಖಲೆಗಳನ್ನು ಅಧಿಕೃತವಾಗಿ ಪ್ರಮಾಣೀಕರಿಸಿದರು.ಶಾಲೆಯ ಸಿಇಒ ಬಿ. ದರ್ಶನ್ ರಾಜ್, ಅಧ್ಯಕ್ಷರಾದ ಎಂ.ಆರ್. ರಜನಿ, ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ, ಶಾಲೆಯ ಡೀನ್ ಲಾವಣ್ಯ, ಪ್ರಾಂಶುಪಾಲೆ ಬಿ. ಪ್ರಿಯಾಂಕ ಇದ್ದರು.