ಸಾರಾಂಶ
- ಐದು ದಿನ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ, ಸಾಧಕರಿಗೆ ಸನ್ಮಾನ
----ಕನ್ನಡಪ್ರಭ ವಾರ್ತೆ ಸುರಪುರ
ರಂಗಂಪೇಟೆಯಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನಾಡಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಅ.3 ರಿಂದ 7 ವರೆಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುಗೂರೇಶ ವಾರದ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಸಂಘದ 82ನೇ ವರ್ಷದ ನಾಡಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದಲ್ಲಿ ಅ.3 ರಿಂದ ಅ.7 ರವರೆಗೆ 82ನೇ ನಾಡಹಬ್ಬ ಮಹೋತ್ಸವವನ್ನು ವಿಶೇಷ ಉಪನ್ಯಾಸ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳ ಜರುಗಲಿವೆ ಎಂದರು.
ಕಾರ್ಯಕ್ರಮಗಳ ವಿವರ: ಅ.3 ರಂದು ಬೆ.8 ಗಂಟೆಗೆ ಸಂಘದ ಕಚೇರಿಯಲ್ಲಿ ಭುವನೇಶ್ವರಿದೇವಿ ಪೂಜೆ. ಸಂಜೆ 6 ಗಂಟೆಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಯಾದವ (ಗೊಲ್ಲ) ಸಂಘದ ಉಪಾಧ್ಯಕ್ಷ ವಿಠ್ಠಲ್ ಯಾದವ್ ಗೌರವ ಅಧ್ಯಕ್ಷತೆ. ಖ್ಯಾತ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ವಿಶೇಷ ಆಹ್ವಾನಿತರು. ಸೂಗೂರೇಶ ವಾರದ ಅಧ್ಯಕ್ಷತೆ. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ನಾರಾಯಣರಾವ್ ಸಿಂಗಾಡೆ, ಕಮಲಾಕ್ಷ, ಹಣಮಂತಪ್ಪ ಗೋಗಿ ಉಪಸ್ಥಿತರಿರುವರು. ಭೂಮಿಕಾ, ದೀಪಿಕಾ ಸ್ಥಾವರಮಠರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.ಅ.4 ರಂದು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುಭಾಷ್ ಬೋಡಾ ಅಧ್ಯಕ್ಷತೆಯಲ್ಲಿ ಶಾಂತಪ್ಪ ಬೂದಿಹಾಳ, ಪ್ರಕಾಶ್ ಸಜ್ಜನ್, ವೇಣುಗೋಪಾಲ ಜೇವರ್ಗಿ, ಪ್ರಕಾಶ್ ಅಂಗಡಿ ಕನ್ನೆಳ್ಳಿ ಭಾಗವಹಿಸುವರು. ಸಗರನಾಡಿನ ಸಾಂಸ್ಕೃತಿಕ ವೈಭವ ಕುರಿತು ಸಿದ್ಧರಾಮ್ ಹೊನ್ಕಲ್ ಉಪನ್ಯಾಸ. ಮಲ್ಲಿಕಾರ್ಜುನ ಕಡೇಚೂರ, ಟಿ. ನಾಗೇಂದ್ರ, ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ, ಡಾ. ಪ್ರಭುರಾಜ್ ಬಳೂರಗಿಗೆ ಸನ್ಮಾನ. ತಿಮ್ಮಾಪುರದ ಎಂಪಿಎಸ್ ಶಾಲಾ (ಕೆಪಿಎಸ್) ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಅ.5ಕ್ಕೆ ಪತ್ರಕರ್ತ ಡಾ. ಶಿವರಂಜನ್ ಸತ್ಯಂಪೇಟೆ ಅವರಿಂದ ವಚನ ಸಾಹಿತ್ಯ-ಕನ್ನಡ ಕುರಿತು ಮತ್ತು ಉಪನ್ಯಾಸಕ ಡಿ.ಎನ್. ಪಾಟೀಲ್ ರಿಂದ ಸಗರನಾಡಿನ ಶರಣರು ಬಗ್ಗೆ ಉಪನ್ಯಾಸ. ಜನಾರ್ದನ ವಿಭೂತೆ ಅಧ್ಯಕ್ಷತೆ. ಬಸವರಾಜ ಜಮದ್ರಖಾನಿ, ಡಾ. ಅಬ್ದುಲ್ ರಬ್ಬ್, ಚಂದ್ರಶೇಖರ ಜಡಿಮರಳ, ಸೋಮಶೇಖರ ಶಾಬಾದಿ ಉಪಸ್ಥಿತಿ. ತಿಮ್ಮಾಪುರ ಕನ್ಯಾ ಕನ್ನಡ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಅ.6 ರಂದು ಖ್ಯಾತ ಹಾಸ್ಯ ಕಲಾವಿದ ರಾಜು ತಾಳಿಕೋಟಿ ವಿಶೇಷ ಆಹ್ವಾನಿತರು. ನಗರಸಭೆ ಅಧ್ಯಕ್ಷೆ ಹೀನಾ ಕೌಸರ್, ಉಪಾಧ್ಯಕ್ಷ ರಾಜಾ ಪಿಡ್ಡನಾಯಕ, ಉತ್ತರಾದೇವಿ, ಗುರುರಾಜ್ ಸಜ್ಜನ್, ಚಂದ್ರಶೇಖರ ಬಿಳಾರ ಭಾಗಿ. ಶರಣ ಕಾಯಕ ಮತ್ತು ದಾಸೋಹ ಕುರಿತು ಶಿಕ್ಷಕ ಎಸ್.ಎಸ್. ಮಾರನಾಳ ಉಪನ್ಯಾಸ. ಸುದೀಪ್ ಮತ್ತು ಫಿನಿಕ್ಸ್ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಅ.7 ರಂದು ತಹಸೀಲ್ದಾರ್ ಎಚ್.ಎ. ಸರಕಾವಸ್ ವಿಶೇಷ ಆಹ್ವಾನಿತರು. ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ. ಸುರೇಶ ಸಜ್ಜನ್ ಗೌರವ ಅಧ್ಯಕ್ಷತೆ. ಸೂಗೂರೇಶ ವಾರದ ಅಧ್ಯಕ್ಷತೆ. ಬಿಇಒ ಯಲ್ಲಪ್ಪ ಕಾಡ್ಲೂರು, ಮೊಹ್ಮದ್ ಸಲೀಂ ವರ್ತಿ ಮುಖ್ಯ ಅತಿಥಿ. ಜಾನಪದ ಸಾಹಿತ್ಯದಲ್ಲಿ ಮಹಿಳೆ ಕುರಿತು ಶಿಕ್ಷಕಿ ಶಿವಲೀಲಾ ಮುರಾಳ ಮತ್ತು ಕನ್ನಡ ಸಾಹಿತ್ಯ ಸಂಘ ನಡೆದು ಬಂದ ದಾರಿ ಬಗ್ಗೆ ಉಪನ್ಯಾಸಕ ಶರಣಗೌಡ ಪಾಟೀಲ್ ಜೈನಾಪುರ ಉಪನ್ಯಾಸ ನೀಡುವರು ಎಂದರು.ಮುದಪ್ಪ ಅಪ್ಪಾಗೋಳ, ಯಂಕಣ್ಣ ಗದ್ವಾಲ್, ರಘುರಾಮ್ ಕಡಬೂರ್, ಗೋವಿಂದರಾಜ್ ಶಹಾಪುರಕರ್, ಪ್ರಕಾಶ ಅಲಬನೂರ್ ಪತ್ರಿಕಾಗೋಷ್ಠಿಯಲ್ಲಿದ್ದರು.
ವಿಶೇಷ ಸನ್ಮಾನ: ವಿವಿಧ ಸಾಧಕರಿಗೆ ಸನ್ಮಾನ: ಸಂಗಯ್ಯಸ್ವಾಮಿ ಸ್ಥಾವರಮಠ ಲಕ್ಷಂಪುರ (ನಾಟಿ ವೈದ್ಯ), ಸುಮಿತ್ರಾ ಉಕ್ಕಲಿ (ಶಿಕ್ಷಣ), ಡಾ. ಮಲ್ಲೇಶಿ ಪೂಜಾರಿ ದೇವಿಕೇರಾ (ವೈದ್ಯಕೀಯ), ಶಿಲ್ಪಾ ಅವಂಟಿ (ಯೋಗ), ಶ್ರೀಕರಭಟ್ ಜೋಶಿ (ಪತ್ರಿಕಾ ರಂಗ),ದಯಾನಂದ ಜಮಾದಾರ್ ಪೊಲೀಸ್ (ಸಮಾಜ ಸೇವೆ), ಉಮೇಶ್ ಯಾದವ(ಸಂಗೀತ), ಅಭಿಷೇಕ್ ಬಶೆಟ್ಟಿ ಹಸನಾಪುರ (ಕ್ರೀಡಾ) ಸಾಧಕರಿಗೆ ಸನ್ಮಾನ. ಡಾ. ಅಲ್ಲಮಪ್ರಭು ಬೆಟ್ಟದೂರು, ಟಾಕಪ್ಪ ಕಣ್ಣೂರ, ಡಾ. ಚನ್ನಬಸವಣ್ಣ, ಆನಂದ ಸೌದಿ (ಪತ್ರಿಕಾ ಕ್ಷೇತ್ರ), ಬಸವರಾಜ್ ಮಹಾಮನಿಗೆ ಅಭಿನಂದನೆ ಏರ್ಪಡಿಸಲಾಗಿದೆ.-----
30ವೈಡಿಆರ್1: ಸುರಪುರ ನಗರದ ಪತ್ರಿಕಾ ಭವನದಲ್ಲಿ ನಡೆದ ರಂಗಂಪೇಟೆಯ 82ನೇ ನಾಡಹಬ್ಬ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಂಘದ ಸದಸ್ಯರು ಬಿಡುಗಡೆಗೊಳಿಸಿದರು.