ಪೋಷಕರ ಸ್ಮರಣಾರ್ಥ ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ 864 ಪ್ಯಾಕೆಟ್‌ ಅಕ್ಕಿ ಅರ್ಪಣೆ

| Published : Aug 01 2024, 01:48 AM IST

ಪೋಷಕರ ಸ್ಮರಣಾರ್ಥ ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ 864 ಪ್ಯಾಕೆಟ್‌ ಅಕ್ಕಿ ಅರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ನಗರದ ದಿ।। ಬಸಮ್ಮ ಹಾಗೂ ದಿ।। ವೀರಬಸಪ್ಪ ಮಾಗಿ ಅವರ ಮಕ್ಕಳಾದ ಜಯಪ್ರಕಾಶ ಮಾಗಿ ಹಾಗೂ ಕೈಲಾಶ್ ಬಾಬು ಮಾಗಿ ಅವರು ಪೋಷಕರ ಸ್ಮರಣಾರ್ಥ ಧರ್ಮಸ್ಥಳ ಕ್ಷೇತ್ರ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಅಕ್ಕಿ ಸಮರ್ಪಿಸಿದ್ದಾರೆ.

ದಾವಣಗೆರೆ: ನಗರದ ದಿ।। ಬಸಮ್ಮ ಹಾಗೂ ದಿ।। ವೀರಬಸಪ್ಪ ಮಾಗಿ ಅವರ ಮಕ್ಕಳಾದ ಜಯಪ್ರಕಾಶ ಮಾಗಿ ಹಾಗೂ ಕೈಲಾಶ್ ಬಾಬು ಮಾಗಿ ಅವರು ಪೋಷಕರ ಸ್ಮರಣಾರ್ಥ ಧರ್ಮಸ್ಥಳ ಕ್ಷೇತ್ರ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಅಕ್ಕಿ ಸಮರ್ಪಿಸಿದರು.

ಮಂಗಳವಾರ ಹಳೇ ಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, 443 ಪ್ಯಾಕೇಟ್ ಅಕ್ಕಿ ಹಾಗೂ ಅವರ ಸ್ನೇಹಿತರು, ಬಂಧು-ಮಿತ್ರರು ಸೇರಿ 421 ಪ್ಯಾಕೇಟ್ ಅಕ್ಕಿ ಸೇರಿ ಒಟ್ಟು 864 ಪ್ಯಾಕೇಟ್ ಅಕ್ಕಿಯನ್ನು ಲಾರಿ ಮುಖಾಂತರ ಧರ್ಮಸ್ಥಳಕ್ಕೆ ಸಾಗಿಸಲಾಯಿತು. 4 ವರ್ಷಗಳಿಂದ ಕುಟುಂಬ ಈ ಸೇವೆ ಕೈಗೊಳ್ಳುತ್ತಿದ್ದು, ಸ್ನೇಹಿತರು, ಬಂಧು ಮಿತ್ರರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಲು 2 ಬಸ್ ವ್ಯವಸ್ಥೆ ಮಾಡಿದ್ದ ಮಾಗಿ ಕುಟುಂಬಸ್ಥರು ಭಕ್ತಿ ಸಮರ್ಪಿಸಲು ಧರ್ಮಸ್ಥಳಕ್ಕೆ ತೆರಳಿದರು.

ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ಬಿಜೆಪಿ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ದಾನೇಶ್ವರಿ ಜಯಪ್ರಕಾಶ ಮಾಗಿ, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ, ಉಮೇಶ, ಸಿದ್ದೇಶ್, ಜಗದೀಶ ಬ್ಯಾಡಗಿ, ಎಂ.ವೈ.ಆನಂದ, ಪ್ರಶಾಂತ ಹಾಗೂ ಸ್ನೇಹಿತರು ಇದ್ದರು.

- - - -30ಕೆಡಿವಿಜಿ33ಃ: