ಸಾರಾಂಶ
ಜನರಿಗೆ ಅನುಕೂಲವಾಗಲೆಂದು ಪೌತಿಖಾತೆ ಆಂದೋಲನವನ್ನು ಸರ್ಕಾರ ಮಾಡಿಸುತ್ತಿದೆ. ಯಲಿಯೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ೫೧ ಪೌತಿಖಾತೆ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇಂತಹ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಂಡು ಅಥವಾ ಅಧಿಕಾರಿಗಳ ಮೂಲಕ ಕುಳಿತು ಬಗೆಹರಿಸಿಕೊಂಡು ಒಂದು ದಿನಾಂಕ ನಿಗದಿ ಮಾಡಿ ಪೌತಿ ಖಾತೆ ಮಾಡಿಸಿಕೊಳ್ಳಿ.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಯಲಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ೮೯೦ ಪೌತಿ ಖಾತೆ ಪ್ರಕರಣಗಳು ಕುಟುಂಬದ ಸಮ್ಮತಿ ಇಲ್ಲದೆ ಬಾಕಿ ಉಳಿದಿವೆ ಎಂದು ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹೇಳಿದರು.ಕಂದಾಯ ಇಲಾಖೆ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯ್ತಿ ವತಿಯಿಂದ ತಾಲೂಕಿನ ಯಲಿಯೂರು ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನೆಡೆದ ಯಲಿಯೂರು ಗ್ರಾಮ ಪಂಚಾಯ್ತಿ ಮಟ್ಟದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರಿಗೆ ಅನುಕೂಲವಾಗಲೆಂದು ಪೌತಿಖಾತೆ ಆಂದೋಲನವನ್ನು ಸರ್ಕಾರ ಮಾಡಿಸುತ್ತಿದೆ. ಯಲಿಯೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ೫೧ ಪೌತಿಖಾತೆ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇಂತಹ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಂಡು ಅಥವಾ ಅಧಿಕಾರಿಗಳ ಮೂಲಕ ಕುಳಿತು ಬಗೆಹರಿಸಿಕೊಂಡು ಒಂದು ದಿನಾಂಕ ನಿಗದಿ ಮಾಡಿ ಪೌತಿ ಖಾತೆ ಮಾಡಿಸಿಕೊಳ್ಳಿ. ಸರ್ಕಾರದ ಸೌಲಭ್ಯ ಹಾಗೂ ಸರ್ಕಾರದ ಸಹಾಯಧನ ಪಡೆಯಲು ಆರ್‌ಟಿಸಿ ಬೇಕು ಅದಕ್ಕಾಗಿ ಸಂಬಂಧಪಟ್ಟವರು ತಮ್ಮ ವಾರಸುದಾರರೂ ಪೌತಿಖಾತೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ರೈತ ಸಮುದಾಯ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಇಲಾಖಾ ಅಧಿಕಾರಿಗಳನ್ನು ಮನೆ ಬಾಗಿಲಿಗೆ ಬಂದು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಜನಸಂಪರ್ಕ ಸಭೆಯನ್ನು ನಡೆಸಲಾಗುತ್ತಿದೆ.ಈಗಾಗಲೇ ಸಭೆ ನಡೆಸಿ ಸಮಸ್ಯೆಗಳ ಅರ್ಜಿಗಳನ್ನು ಸ್ವೀಕರಿಸಿ, ಸೂಕ್ತ ಪರಿಹಾರ ಒದಗಿಸಲಾಗಿದೆ ಎಂದರು.
ಯಲಿಯೂರು ಗ್ರಾಮದ ಕೋಡಿಯಿಂದ ಯಲಿಯೂರು ಗ್ರಾಮದವರೆಗೂ ರಸ್ತೆ ಅಭಿವೃದ್ಧಿ, ಯಲಿಯೂರು -ಎಲೆಚಾಕನಹಳ್ಳಿ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು ಶೀಘ್ರದಲ್ಲೇ ಟೆಂಡರ್ ಮಾಡಿಸಿ ಅಭಿವೃದ್ಧಿ ಮಾಡಲಾಗುವುದು. ಯಡಿಯೂರು- ವೈ.ಯರಹಳ್ಳಿ ರಸ್ತೆ, ಯಲಿಯೂರು ಗ್ರಾಮದ ಒಳಗಡೆ ರಸ್ತೆಗಳು ಸೇರಿದಂತೆ ಎಲ್ಲವನ್ನು ಅಭಿವೃದ್ಧಿಪಡಿಸಿ ಸಮಸ್ಯೆಗಳು ಇದ್ದರೆ ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದರು.ಉಪ ವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ,ಗ್ರಾಮೀಣ ಭಾಗದ ಜನರು ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಲು ತಾಲೂಕು ಕಚೇರಿಗೆ ಬರುತ್ತೀರಿ. ಆದ್ದರಿಂದ ಜನತಾದರ್ಶನ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಆಲಿಸಿ ಇಲ್ಲಿಯೇ ಬಗೆಹರಿಸಲು ಕಾರ್ಯ ಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ವಿಶ್ವನಾಥ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿ, ಎಡಿಎಲ್ ಆರ್ ಮಮತಾ, ಸಹಾಯಕ ಕೃಷಿ ಅಧಿಕಾರಿ ಸುನಿತಾ, ತಾಲೂಕು ಆರೋಗ್ಯ ಅಧಿಕಾರಿ ಜವರೇಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರವಿಕುಮಾರ್, ಉಪ ತಹಶೀಲ್ದಾರ್ ಗೌರಮ್ಮ, ಕಂದಾಯ ಅಧಿಕಾರಿ ವೆಂಕಟೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಬಿ.ಪ್ರಸನ್ನ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))