ಸಾರಾಂಶ
ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕರಿಬ್ಬರ ಮಧ್ಯೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, 14 ವರ್ಷದ ಬಾಲಕನಿಗೆ 15 ವರ್ಷದ ಬಾಲಕ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಸೋಮವಾರ ಹುಬ್ಬಳ್ಳಿಯ ಮೂರುಸಾವಿರ ಮಠದ ಬಳಿಯ ಗುರುಸಿದ್ಧೇಶ್ವರ ನಗರದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕರಿಬ್ಬರ ಮಧ್ಯೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, 14 ವರ್ಷದ ಬಾಲಕನಿಗೆ 15 ವರ್ಷದ ಬಾಲಕ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಸೋಮವಾರ ಹುಬ್ಬಳ್ಳಿಯ ಮೂರುಸಾವಿರ ಮಠದ ಬಳಿಯ ಗುರುಸಿದ್ಧೇಶ್ವರ ನಗರದಲ್ಲಿ ನಡೆದಿದೆ.ಚೇತನ ರಕ್ಕಸಗಿ (14) ಮೃತ ಬಾಲಕ. ಮೂರು ಸಾವಿರ ಮಠದ ಜಿ.ಅಡ್ಡಾ ನಿವಾಸಿಗಳಾದ ಬಾಲಕರು ಎದುರು-ಬದುರು ಮನೆಯವರು. ಇಬ್ಬರ ಮಧ್ಯೆ ಯಾವ ಕಾರಣಕ್ಕಾಗಿ ಜಗಳ ಏರ್ಪಟ್ಟಿದೆ ಎಂಬುದು ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಆಟದ ವಿಚಾರದಲ್ಲಿ ವೈಮನಸ್ಸು ಉಂಟಾಗಿದೆ ಎಂದು ಹೇಳಲಾಗಿದೆ. ಕೊಲೆಯಾದ ಬಾಲಕನ ತಂದೆ ರೊಟ್ಟಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಕೊಲೆ ಮಾಡಿದ ಬಾಲಕನದ್ದು ಸಹ ಬಡ ಕುಟುಂಬವಾಗಿದೆ. ಈ ಸಂಬಂಧ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.