ಸಾರಾಂಶ
ಕೋರಮಂಗಲದಲ್ಲಿ ಇರುವ ಕೃಪಾನಿಧಿ ಪಿಯು ಕಾಲೇಜಿನ ಶೇಕಡ ೯೫ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಕಾಲೇಜಿನ ಛರ್ಮೆನ್ ಹಾಗೂ ಪ್ರೊಫೆಸರ್ ಡಾ। ಸುರೇಶ್ ನಾಗಪಾಲ್ ಅವರು ಪುಷ್ಪಗುಚ್ಛ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಬೊಮ್ಮನಹಳ್ಳಿ: ಕೋರಮಂಗಲದಲ್ಲಿ ಇರುವ ಕೃಪಾನಿಧಿ ಪಿಯು ಕಾಲೇಜಿನ ಶೇಕಡ ೯೫ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಕಾಲೇಜಿನ ಛರ್ಮೆನ್ ಹಾಗೂ ಪ್ರೊಫೆಸರ್ ಡಾ। ಸುರೇಶ್ ನಾಗಪಾಲ್ ಅವರು ಪುಷ್ಪಗುಚ್ಛ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾಲೇಜಿನಲ್ಲಿರುವ ಎಂಟು ವಿದ್ಯಾರ್ಥಿಗಳು ಶೇಕಡ ೯೮ ಪಡೆದಿದ್ದಾರೆ. ಈ ವೇಳೆ ಸ್ವತಃ ಛರ್ಮೆನ್ ಸುರೇಶ್ ನಾಗಪಾಲ್ ವಿದ್ಯಾರ್ಥಿಗಳಿಗೆ ಸಿಹಿತಿನಿಸಿದರು.ಇದೇ ವೇಳೆ ಮಾತನಾಡಿದ ಚರ್ಮೆನ್ ನಾಗಪಾಲ್, ಮಕ್ಕಳ ಸೈಕಾಲಜಿಯನ್ನು ಮೊದಲು ಅರ್ಥ ಮಾಡಿಕೊಂಡು ಅವರಿಗೆ ಶಿಕ್ಷಣ ನೀಡಲು ಮುಂದಾಗುತ್ತೇವೆ. ನಮ್ಮ ಪ್ರಮುಖ್ಯ ಧ್ಯೇಯವೇ ವಿದ್ಯಾರ್ಥಿಗಳೊಂದಿಗೆ ‘ಪ್ರೀತಿ ಮತ್ತು ಕಾಳಜಿ’. ಪ್ರತಿ ವಿದ್ಯಾರ್ಥಿ ಬಗ್ಗೆ ವಿಶೇಷ ಕಾಳಜಿವಹಿಸಿ ಅವರನ್ನು ಸಜ್ಜುಗೊಳಿಸಲಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಆಸಿಫಾ, ಮತ್ತು ಕೃಪಾನಿಧಿ ಕಾಲೇಜಿನ ಸಿಬ್ಬಂದಿ ಇದ್ದರು.ಕೃಪಾನಿಧಿ ಕಾಲೇಜು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು: ಅಸ್ಮೀನ್ ತಾಜ್, (ಪಿಸಿಎಂಸಿ ೫೮೮), ನಿಖಿತಾ.ಇ, ಸಿಇಬಿಎ (೫೮೭), ಪ್ರಿಯಾಂಕಾ ಎಸ್. (ಸಿಇಬಿಎ ೫೮೭), ಪುನೀತ್.ಎಂ. (ಪಿಸಿಎಂಸಿ ೫೮೭), ನಿತ್ಯಶ್ರೀ ಎಂ. (ಸಿಇಬಿಎ ೫೮೫), ದೀಪಿಕಾ ಮಿಶ್ರಾ (ಸಿಇಬಿಎ ೫೮೪), ಎನ್. ಜಾನವಿ (ಸಿಇಬಿಎ ೫೮೪), ಆರ್.ರಾಜನ್ (ಸಿಇಬಿಎ ೫೮೪).