ಸಾರಾಂಶ
ಕನ್ನಡ ಪ್ರಭವಾರ್ತೆ ಮಾಲೂರು
ಕುವೆಂಪು ಅವರ ಸಾಹಿತ್ಯದಲ್ಲಿ ಮಾನವೀಯತೆಯಿಂದ ಸಮಾಜವನ್ನು ಗ್ರಹಿಸಿ ರಚನೆಯಾಗಿರುವ ಸಾಹಿತ್ಯವನ್ನು ಕಾಣಬಹುದಾಗಿದೆ ಎಂದು ಸಾಹಿತಿ ಡಾ.ನಾ.ಮುನಿರಾಜು ಹೇಳಿದರು.ಅವರು ಇಲ್ಲಿನ ಚೈತನ್ಯ ಕಲಾನಿಕೇತನವು ಪಟ್ಟಣದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, 118 ನೇ ತಿಂಗಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ ಹಾಗೂ ಗಣರಾಜ್ಯೋತ್ಸವದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುತ್ತ, ಸಂವಿಧಾನದ ಆಶಯದಂತೆ ಸಾಹಿತ್ಯವನ್ನು ರಚಿಸಿದಾಗ ಮುಂದಿನ ಪೀಳಿಗೆಯನ್ನು ಸದೃಡಗೊಳಿಸಲು ಸಾದ್ಯವಾಗುತ್ತದೆ ಎಂದರು. ಸಂವಿಧಾನ ಪೀಠಿಕೆಯನ್ನು ವಾಚನ ಮಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಎಂ.ಪಿ.ರಾಜು ಮಾತನಾಡಿ, ಸಂವಿಧಾನ ದೇಶದ ಪ್ರಗತಿಯ ದಾರಿದೀಪ. ಎಲ್ಲಾ ಸಮಸ್ಯೆಗಳಿಗೂ ಸಂವಿಧಾನದಲ್ಲಿ ಪರಿಹಾರಗಳಿದ್ದು, ಸರ್ವ ದರ್ಮಗಳ ಸರ್ವ ಸಮುದಾಯಗಳ ಸಮಾನತೆ, ಭಾತೃತ್ವ ಭಾವನೆಗಳನ್ನು ಆಳವಡಿಸಿಕೊಂಡು ಮುನ್ನಡೆಯುವ ಮಾರ್ಗದರ್ಶಿ ಜ್ಞಾನ ಗ್ರಂಥವಾಗಿದೆ ಎಂದರು,
ಚೈತನ್ಯ ಕಲಾನಿಕೇತನ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಾಹಿತಿ ಜಯಮಂಗಲ ಚಂದ್ರಶೇಖರ್ ಮಾತನಾಡಿ, ಚೈತನ್ಯ ಕಲಾನಿಕೇತನ ಸಂಸ್ಥೆ ಸ್ಥಾಪನೆಗೊಂಡು 29 ವರ್ಷಗಳನ್ನು ಪೂರೈಸಿದ್ದು, ಹಲವಾರು ಸಾಹಿತ್ಯ ಸಾಂಸ್ಕೃತಿಕ ಸಾಮಾಜಿಕ ಸೇವೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದೆ. ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಹೆಮ್ಮೆ ಸಂಸ್ಥೆಗೆ ಇದೆ ಎಂದರು. ಜೊತೆಗೆ ಮುಂಬರಲಿರುವ 30 ವರ್ಷದ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ನಡೆಸಲು ತಯಾರಿ ನೆಡೆಸಲಾಗುತ್ತಿದ್ದು, ನಾಡಿನ ಹೆಸರಾಂತ ಕವಿ-ಸಾಹಿತಿಗಳನ್ನು ಆಹ್ವಾನಿಸಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.ಅಧ್ಯಕ್ಷತೆ ಅನಿಕೇತನ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಕೆ.ಮುನಿಕೃಷ್ಣಪ್ಪ ವಹಿಸಿದ್ದ ಕಾರ್ಯಕ್ರಮದಲ್ಲಿ, ಕ.ರಾ.ಸ.ನೌ.ಸಂ.ಪ್ರಧಾನ ಕಾರ್ಯದರ್ಶಿ ಎಂ.ರವಿ,ಕವಿಗಳಾದ ವಿಕ್ರಂ ಶ್ರೀನಿವಾಸ್, ನಾರಿಗಾನಹಳ್ಳಿ ಶ್ರೀನಿವಾಸ್ ,ಟಿ.ಎಂ.ವೆಂಕಟೇಶ್ ,ಗುಲ್ಚಾರ್,ಸಿ.ವೈ,ರಾಧಮ್ಮ ,ಎಂ,ಎಸ್.ಮಾಲತಿ,ಪಿ.ಎಂ.ಕೃಷ್ಣಪ್ಪ ,ಮಾ.ಚಿ.ನಾಗರಾಜ್,ಗುಟ್ಟಪ್ಪ,ವಿದ್ವಾನ್ ಸಿ.ಆರ್.ನಟರಾಜ್ ,ಜಿ.ಸಿ.ಕೇಶವ್ ಇನ್ನಿತರರು ಇದ್ದರು.